;

ತೇರದಾಳ ಕ್ಷೇತ್ರಾದ್ಯಾಂತ ಎಎಪಿ ಬೃಹತ್ ಪ್ರಚಾರ ರ್ಯಾಲಿ…!!!

ತೇರದಾಳ ಕ್ಷೇತ್ರಾದ್ಯಾಂತ ಎಎಪಿ ಬೃಹತ್ ಪ್ರಚಾರ ರ್ಯಾಲಿ

ತೇರದಾಳ: ಮುಂಬರುವ 2023 ವಿಧಾನಸಭಾ ಚುನಾವಣೆಯ ಪ್ರಚಾರ ಜೋರಾಗಿದ್ದು ಸೋಮವಾರ ಸಂಜೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರ್ಜುನ ಹಲಗಿಗೌಡರ ಬಿರುಸಿನ ಪ್ರಚಾರ ನಡೆಸಿದ್ದು ಸುಮಾರು 1300 ಕಾರುಗಳ ರ್ಯಾಲಿಗೆ ಮತಕ್ಷೇತ್ರದ ಸ್ವಗ್ರಾಮ ಮದಬಾವಿಯಿಂದ ಚಾಲನೆ ಮಾಡಿ ಕ್ಷೇತ್ರಾದ್ಯಾಂತ ಸಂಚರಿಸಿ ತೇರದಾಳ ಪಟ್ಟಣಕ್ಕೆ ತಲುಪಿ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ ಬಿಜೆಪಿ ರೈತರ ಸಾಲ ಮನ್ನಾ ಮಾಡುವ ಬದಲು ದೇಶದ ಉದ್ಯಮಿಗಳ ಲಕ್ಷಾಂತರ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಆರೋಪಿಸಿದರು ಆಧಾರ-ಪ್ಯಾನ್ ಕಾರ್ಡ್ ಜೋಡನೆಗೆ ಸಾವಿರ ದಂಡ ವಸೂಲಿ ಮಾಡುತ್ತಿದ್ದು ಈಗಿನ ಸರ್ಕಾರ ಹಗಲು ದರೋಡೆ ಮಾಡುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು. ಆಮ್ ಆದ್ಮಿ ಪಕ್ಷ ಈಗಾಗಲೇ ಎರಡು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದ್ದು ರಾಷ್ಟ್ರೀಯ ಪಕ್ಷವಾಗಿ ಗುರುತಿಸಲು ಹೊರಟಿದೆ ಎಂದರು ತೇರದಾಳ ಮತ ಕ್ಷೇತ್ರ ಎಎಪಿ ಅಭ್ಯರ್ಥಿ ಅರ್ಜುನ ಹಲಗಿಗೌಡರ ಮತ ನೀಡಬೇಕು ಎಂದು ಮನವಿ ಮಾಡಿಕೊಂಡರು. ಅರ್ಜುನ ಹಲಗಿಗೌಡರ ಬಿರುಸಿನ ಪ್ರಚಾರ ನಡೆಸಿ ಚುನಾವಣೆಯಲ್ಲಿ ಎಎಪಿ ಪಕ್ಷ ಆರಿಸಿ ಬರುವುದಾಗಿ ಭರವಸೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಮ್.ಕಲಾದಗಿ, ರವಿಚಂದ್ರನ್ ಅರೆಬೆಂಚಿ,ಲಕ್ಷ್ಮೀ ಕಾಂತರಾವ ಉಪಸ್ಥತಿಯಲ್ಲಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;