;

ಅಬಕಾರಿ ಪೋಲಿಸರ ದಾಳಿ ಅಂದಾಜು 1,75,000ರೂ ಮೌಲ್ಯದ ಮಾಲು ವಶ…!!!

ಅಬಕಾರಿ ಪೋಲಿಸರ ದಾಳಿ ಅಂದಾಜು 1,75,000ರೂ ಮೌಲ್ಯದ ಮಾಲು ವಶ

ಚಳ್ಳಕೆರೆ:ತಾಲೂಕಿನ ಅಬಕಾರಿ ಪೋಲೀಸರು ಕಾರ್ಯಚರಣೆ ನಡೆಸಿ ಮೂರು ಪ್ರತ್ಯೇಕ ಪ್ರಕರಣಗಳನ್ನು ಬೇದಿಸಿದ್ದಾರೆ.ನಗರದಲ್ಲಿ ಅಬಕಾರಿ ನಿರೀಕ್ಷಕ ಸಿ ನಾಗರಾಜ್ ಉಪನಿರೀಕ್ಷಕರಾದ ಟಿ ರಂಗಸ್ವಾಮಿ, ಡಿಟಿ ತಿಪ್ಪಯ್ಯ ಮತ್ತು ಸಿಬ್ಬಂದಿ ಗಸ್ತು ತಿರುಗುವಾಗ ಪಾವಗಡ ರಸ್ತೆಯ ರೈಲ್ವೆ ಗೇಟ್,ನಾಯಕನಹಟ್ಟಿ ರಸ್ತೆ,ಹಾಗೂ ಬಳ್ಳಾರಿ ರಸ್ತೆಯ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಯಾವುದೇ ದಾಖಲೆಗಳಿಲ್ಲದ ಅಕ್ರಮವಾಗಿ ಸಾಗಿಸುತ್ತಿದ್ದ 98,640ಲೀಟರ್ ಮದ್ಯವನ್ನು  ವಶಪಡಿಸಿಕೊಂಡಿದ್ಧು ಆರೋಪಿಗಳಾದ ಮನ್ನೇಕೋಟೆಯ ಪ್ರಕಾಶ್, ಹಾಗೂ ವರವು ಗ್ರಾಮದ ಬೋರಯ್ಯ ಎಂಬುವವರನ್ನು ಬಂದಿಸಿದ್ದು ಎರಡು ಟಿವಿಸ್ ಎಕ್ಸ್ ಎಲ್ ಒಂದು ಹೀರೋಹೋಂಡ ಬೈಕ್ ವಶಪಡಿಸಿಕೊಂಡು ಮೂರು ಪ್ರಕರಣಗಳಿಂದ ಒಟ್ಟು ಅಂದಾಜು ಮೌಲ್ಯ 1,75,000 ರೂ ಆಗಿದೆ.

ಈ ವೇಳೆ ಮಾತನಾಡಿದ ಅಬಕಾರಿ ಉಪ ಆಯುಕ್ತ ಬಿ ಮಾದೇಶ್ ಸರ್ಕಾರ2007ರಲ್ಲಿ ಸಾರಾಯಿ ನಿಷೇಧ ಮಾಡಿತ್ತು ಅಂದಿನಿಂದ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ ಇದರ ಬಗ್ಗೆ ಸಾರ್ವಜನಿಕರ ದೂರು ಹಾಗೂ ಅಬಕಾರಿ ಸಿಬ್ಬಂದಿ ದಾಳಿ ನಡೆಸಿ ಹಲವು ಪ್ರಕರಣಗಳನ್ನು ದಾಖಲಿಸಿ ಶಿಸ್ತು ಕ್ರಮ ಕೈಗೊಂಡಿದ್ದೇವೆ ಆದರೂ ಕೆಲ ಗ್ರಾಮಗಳಲ್ಲಿ ಸ್ಥಳೀಯರು ನಮಗೆ ಸರಿಯಾದ ಸಹಕಾರ ನೀಡುವುದಿಲ್ಲ  ತಕ್ಕ ಮಟ್ಟಿಗೆ ಕಡಿವಾಣ ಹಾಕಲು ಪ್ರಯತ್ನಿಸಿದ್ದೇವೆ. ಚುನಾವಣೆ ಹತ್ತಿರ ಇರುವುದರಿಂದ ಚುನಾವಣಾ ನೀತಿಸಂಹಿತೆಯನ್ನು ಕಾಯದೆ ನಮ್ಮ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಕಾರ್ಯಚರಣೆ ನಡೆಸಿ ಇಂದಿನ ಮೂರು ಪ್ರಕರಣ ಸೇರಿದಂತೆ ತಾಲೂಕಿನಲ್ಲಿ ಒಟ್ಟು 6 ಪ್ರಕರಣ ದಾಖಲಿಸಿದ್ದಾರೆ.ಈಗಾಗಲೇ ಅಬಕಾರಿ ಇಲಾಖೆಯಿಂದ ಆಂದ್ರಪ್ರದೇಶ ಗಡಿಭಾಗವಾದ ದೊಡ್ಡ ಬಾದೆಹಳ್ಳಿ ಹಿರಿಯೂರಿನ ಮದಿಹಳ್ಳಿ ಹಾಗೂ ಜಿಲ್ಲೆಯ ಇತರೆಡೆಗಳಲ್ಲಿ ಒಟ್ಟು ಎಂಟು ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕ ಸಿ ನಾಗರಾಜ್, ಉಪನಿರೀಕ್ಷಕರಾದ ಟಿ ರಂಗಸ್ವಾಮಿ, ಡಿಟಿ ತಿಪ್ಪಯ್ಯ, ರಘುನಾಥ,ನಾಗರಾಜ್, ಶಾಂತಣ್ಣ, ಡ್ರೈವರ್ ನಾಗರಾಜ್ ಉಪಸ್ಥಿತರಿದ್ದರು…

 

ವರದಿ, ಶಶಿಕುಮಾರ್, ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;