;

ಇಸ್ಪೀಟ್ ದಂಧೆ ಕೋರರಿಗೆ ಖಡಕ್ ಎಚ್ಚರಿಕೆ ನೀಡಿದ ಚಳ್ಳಕೆರೆ ಪೊಲೀಸ್ ಅಧಿಕಾರಿಗಳು…!!!

ಇಸ್ಪೀಟ್ ದಂಧೆ ಕೋರರಿಗೆ ಖಡಕ್ ಎಚ್ಚರಿಕೆ

ಇಸ್ಪೀಟ್ ಆಟ ಹಾಗೂ ಕೋಳಿ ಪಂದ್ಯ ಆಡಲು ಜಾಗ ನೀಡಿದ ಮಾಲೀಕರ ಮೇಲೆ ಪ್ರಕಣ ದಾಖಲು ಮಾಡಲಾಗುವುದು ಎಂದು ಚಳ್ಳಕೆರೆ ಪೊಲೀಸ್ ಇನ್ಸ್ಪೆಕ್ಟರ್ ಆರ್ ಎಫ ದೇಸಾಯಿ ಎಚ್ಚರಿಕೆ ನೀಡಿದ್ದಾರೆ.ಇಸ್ಪೀಟ್ ಜೂಜಾಟ ಸೇರಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲೆಯಾದ್ಯಾತ ಹದ್ದಿನ ಕಣ್ಣಿಡಲು ಜಿಲ್ಲಾ ವರಿಷ್ಠಾಧಿಕಾರಿ ಕೆ.ಪರಶುರಾಂ ಮಾರ್ಗದರ್ಶನಲ್ಲಿ ಚಳ್ಳಕೆರೆ ಪೊಲೀಸ್ ಇಲಾಖೆ ಸಜ್ಜಾಗಿದೆ, ಎಂದು ಚಳ್ಳಕೆರೆ ಠಾಣೆಯ ಪಿಐ ಆರ್ ಎಫ್ ದೇಸಾಯಿ ತಿಳಿಸಿದ್ದಾರೆ. ಚಳ್ಳಕೆರೆ ಸೇರಿದಂತೆ ಗ್ರಾಮೀಣ ಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುಗಾದಿ ಹಬ್ಬದ ನೆಪವೊಡ್ಡಿ ಕಲ್ಯಾಣ ಮಂಟಪ, ಲಾಡ್ಜ್, ಮನೆ, ಸಾರ್ವಜನಿಕ ಹಾಗೂ ಹೊರವಲಯ ಪ್ರದೇಶಗಳಲ್ಲಿ ಹೊಲಗದ್ದೆಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಾದ ಜೂಜಾಟ ಇಸ್ಪೇಟ್ ಕೋಳಿ ಪಂದ್ಯ, ಸೇರಿದಂತೆ ಕಾನೂನುಬಾಹಿರಾ ಚಟುವಟಿಕೆಗಳು ಕಂಡು ಬಂದಲ್ಲಿ ಹಾಗೂ ಬಾಡಿಗೆ ನೀಡಿರುವ ಮನೆ ಆಗಲಿ ತೋಟವಾಗಲಿ ನೀಡಿದ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಿಮಿನಲ್ ಕೇಸ್ ದಾಖಲಿಸಿ, ಕಾನೂನು ರೀತಿಯಲ್ಲಿ ಕ್ರಮ ಕೈಗೊಳಲಾಗುವುದು ಮತ್ತು ಇಂತಹ ಅಕ್ರಮs ಚಟುವಟಿಕೆಗಳನ್ನು ಮಟ್ಟ ಹಾಕಲು ಸಾರ್ವಜನಿಕರು ಸಹಕರಿಸಬೇಕೆಂದು ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಪೊಲೀಸ್ ಆಧಿಕಾರಿಗಳಿಗೆ ಮಾಹಿತಿ ನೀಡ ಬೇಕು ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿಡಲಾಗುವುದು ಸಾರ್ವಜನಿಕರು ಪೊಲೀಸ್‌ರವರೊಂದಿಗೆ ಸಹಕರಿಸಲು ಕೋರಿದೆ.ಆರ್.ಎಫ್. ದೇಸಾಯಿ, ಪೊಲೀಸ್ ನಿರೀಕ್ಷಕರು, ಪೊಲೀಸ್ ಠಾಣೆ, ಚಳ್ಳಕೆರೆ, ಮೊ.:9480803112
ಕೆ. ಸತೀಶ್‌ನಾಯ್ಕ ಪೊಲೀಸ್ ಉಪ ನಿರೀಕ್ಷಕರು, ಪೊಲೀಸ್ ಠಾಣೆ, ಚಳ್ಳಕೆರೆ, ಮೊ.8105984486
ಈ ದೂರವಾಣಿ ಸಂಖ್ಯೆಗಳಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ..

ವರದಿ, ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;