;

ಹರನಹಳ್ಳಿಯಲ್ಲಿ ನಡೆದ ಜನ ಸಂಕಲ್ಪ ಯಾತ್ರೆ : ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಹುಡುಕಾಟ…!!!

ಹರನಹಳ್ಳಿಯಲ್ಲಿ ನಡೆದ ಜನ ಸಂಕಲ್ಪ ಯಾತ್ರೆ : ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಹುಡುಕಾಟ………..

ಹರಪನಹಳ್ಳಿ: -ಶಾಸಕ ಜಿ ಕರುಣಾಕರ ರೆಡ್ಡಿ ರವರು ಜನಸಂಕಲ್ಪ ಯಾತ್ರೆ ಕುರಿತು ಮಾತನಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಐಟಿಐ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ,ವಸತಿ ಶಾಲೆಯಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಸುಸಜ್ಜಿತವಾದ ಬೋಧನಾ ಕೊಠಡಿಗಳು, ಸೈನ್ಸ್​ ಲ್ಯಾಬರೇಟರಿಗಳು, ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ, ವಿಶಾಲವಾದ ಡೈನಿಂಗ್ ಹಾಲ್, ಬೋಧಕ ಸಿಬ್ಬಂದಿಗೆ ವಸತಿಗೃಹಗಳು, ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಸಿಸಿ ರಸ್ತೆ, ಡಾಂಬರೀಕರಣ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳು,ಗಂಗಾ ಕಲ್ಯಾಣ ಯೋಜನೆ, ತಾಲ್ಲೂಕ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೆ ,ಎಲ್ಲಾ ಜಾತಿಯ ಸಮಾಜದ ಬಂಧುಗಳಿಗೆ ಭವನಗಳನ್ನು ನಿರ್ಮಾಣ ಮಾಡಿಸಿದ್ದಾರೆ. ಸರ್ವ ಜನಾಂಗದ ಸರ್ವ ಅಭಿವೃದ್ಧಿಯ ನೇತಾರರು .

ರಾಜ್ಯದ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವು ತಿಂಗಳುಗಳು ಬಾಕಿ ಇರುವ ಬೆನ್ನಲ್ಲೇ ಕಮಲ ಪಾಳಯವು ಚುನಾವಣೆ ಪ್ರಚಾರದ ಅಖಾಡಕ್ಕೆ ಇಳಿದಿದೆ. ಇಂದು ಹರನಹಳ್ಳಿಯಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯೇ ಅದಕ್ಕೆ ಸಾಕ್ಷಿಯಾಗಿದೆ.ಬಳಿಕ ಪಟ್ಟಣನದ ತಾಲ್ಲೂಕ ಕ್ರೀಡಾಂಗಣದಲ್ಲಿ ಬಹಿರಂಗವಾಗಿ ಜನ ಸಂಪರ್ಕ ಯಾತ್ರೆಗೆ ಅದ್ದೂರಿ ಚಾಲನೆ ಸಿಕ್ಕಿದೆ. ಕಾರ್ಯಕ್ರಮದಲ್ಲಿ ಅನೇಕ ಬಿಜೆಪಿ ನಾಯಕರು ಭಾಷಣ ಮಾಡಿದರು.
*****ಬಾಕ್ಸ್****
(ಕಾಂಗ್ರೆಸ್‌ ಪಕ್ಷ ಐಸಿಯುನಲ್ಲಿದೆ.. ಜಗದೀಶ್​ ಶೆಟ್ಟರ್ ವ್ಯಂಗ್ಯ
ಕಾಂಗ್ರೆಸ್ ದಿನದಿಂದ ದಿನಕ್ಕೆ ಅಧೋಗತಿಗೆ ಹೋಗುತ್ತಿದೆ – ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಬಂದಿದೆ – ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ವ್ಯಂಗ್ಯ‌.
ಅಧಿಕಾರಕ್ಕೇರುವ ತಿರುಕನ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿಯೇ ಐಸಿಯುನಲ್ಲಿದೆ. ಚುನಾವಣೆ ಮುಗಿಯುವ ಹೊತ್ತಿಗೆ ಹೊರಗಡೆ ಬರದಂತಹ ಸ್ಥಿತಿಗೆ ತಲುಪುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ವ್ಯಂಗ್ಯ‌ವಾಡಿದ್ದಾರೆ.)

ಕಾಂಗ್ರೆಸ್ ದಿನದಿಂದ ದಿನಕ್ಕೆ ಅಧೋಗತಿಗೆ ಹೋಗುತ್ತಿದೆ. ಇತ್ತೀಚೆಗೆ ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಸ್ತಿತ್ವ ಸೋತು ಅಧೋಗತಿಗೆ ಹೋಗಿದೆ. ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಬಂದಿದೆ. ಇನ್ನು ಕರ್ನಾಟಕದಲ್ಲಿ ಸಹ ಕಾಂಗ್ರೆಸ್ ಐಸಿಯುಗೆ ಹೋಗಿದೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ಸೇರಿದಂತೆ ಹಲವರು ಐಸಿಯುನಿಂದ ಹೊರತರಲು ಪ್ರಯತ್ನಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.4 ದಿಕ್ಕಿನಿಂದ ವಿಜಯ ಸಂಕಲ್ಪ ಯಾತ್ರೆ:ಬಿಜೆಪಿ ಈ ಬಾರಿ ರಾಜ್ಯದಲ್ಲಿ 114 ರಿಂದ 140 ಸೀಟ್ ಪಡೆದು ಈ ಬಾರಿ ಅಧಿಕಾರಕ್ಕೆ ಬರಲಿದೆ. ರಾಜ್ಯದ ನಾಲ್ಕು ದಿಕ್ಕಿನಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಆರಂಭಿಸಿದೆ. ಇದು ಬದಲಾವಣೆಯ ದಾರಿಯಾಗಿದ್ದು, ನಮ್ಮ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದ್ದೇವೆ ಎಂದು ಶೆಟ್ಟರ್​​ ವಿಶ್ವಾಸ ವ್ಯಕ್ತಪಡಿಸಿದರು.

ಜನಸಂಕಲ್ಪ ಯಾತ್ರೆ: ಶ್ರೀರಾಮುಲು ರವರು ಮಾತನಾಡಿ ಸೇರಿದಂತೆ ವೇದಿಕೆಯ ಮೇಲೆ ಗಣ್ಯರನ್ನು ಹಾಡಿ ಹೊಗಳಿದ ಬಳಿಕ, ಬಳ್ಳಾರಿ- ವಿಜಯನಗರ ಅವಳಿ ಜಿಲ್ಲೆಗಳಲ್ಲಿ 10 ಕ್ಷೇತ್ರದಲ್ಲಿ BJP ಬಾವುಟ ಹಾರಿಸುತ್ತೇವೆ ,ಅಂತ ಹೇಳಿದ್ರೆ, ಸಚಿವ ಶ್ರೀರಾಮುಲು ಕೂಡ ಅಭಿವೃದ್ಧಿ ಕುರಿತು ಮಾತನಾಡಿ,ಜನ ಸಂಕಲ್ಪ ಯಾತ್ರೆಯೂದ್ದಕ್ಕೂ ಹಾಲಿ, ಮಾಜಿ ಸಿಎಂಗಳು ಸೇರಿದಂತೆ ವೇದಿಕೆಯ ಮೇಲಿರುವ ಗಣ್ಯರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. 75 ವರ್ಷಗಳ ಕಾಲ ಇದ್ದ ಕಾಂಗ್ರೆಸ್ ಎಸ್ಸಿ, ಎಸ್ಟಿಗಳಿಗೆ ಏನೂ ಸಹ ಮಾಡಲಿಲ್ಲ, ಸರ್ವ ಪಕ್ಷದ ಸಭೆಯಲ್ಲಿ ಒಪ್ಪಿಗೆ ಕೊಟ್ಟು, ಹೊರಗಡೆ ಬಂದು ನಾಟಕ ಮಾಡ್ತಾರೆ ಅಂತ ಹೇಳುವುದರ ಜತೆಗೆ ಕಾಂಗ್ರೆಸ್ ಜೋಡೋ ಯಾತ್ರೆಯ ವಿರುದ್ಧ ಮಾತನಾಡಿದ್ರು. ಕಾಂಗ್ರೆಸ್ ನ ವಿರುದ್ಧ ಹರಿಹಾಯ್ದರು. ರಾಹುಲ್ ಗಾಂಧಿಯ ಪಾದಯಾತ್ರೆ ಯಾವ ಉದ್ದೇಶಕ್ಕಾಗಿ ಅಂತ ಪ್ರಶ್ನೆ ಮಾಡಿದ್ರು ಶ್ರೀರಾಮುಲು. ಇನ್ನೂ ಸಚಿವ ಆನಂದ್ ಸಿಂಗ್, ಶ್ರೀರಾಮುಲು, ಶಾಸಕ ರಾಜೂಗೌಡ ಮೀಸಲಾತಿ ಕೊಡಿಸಿದ್ದು ಬಿಜೆಪಿ ಸರ್ಕಾರ ಅಂತ ಹಾಲಿ, ಮಾಜಿ ಸಿಎಂಗಳನ್ನು ಹಾಡಿ ಹೊಗಳಿ , ಪ. ಜಾ, ಪ. ಪಂಗಡ ಸಮುದಾಯದವರು, ಬಿಜೆಪಿ ಜತೆ ಇರಬೇಕು ಅಂತ ಗಂಟ ಗೋಷವಾಗಿ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಅಲೆ- 4 ತಂಡಗಳಲ್ಲಿ ವಿಜಯ ಸಂಕಲ್ಪ ಯಾತ್ರೆ: ನಳಿನ್ ಕುಮಾರ್ ಕಟೀಲ್ :-ಕಾಂಗ್ರೆಸ್ ಯಾತ್ರೆ ಪಂಕ್ಚರ್ ಆಗಲಿದೆ: ಕಾಂಗ್ರೆಸ್ 2 ಬಸ್ ಯಾತ್ರೆ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ಅತೃಪ್ತಿ ಅಸಮಾಧಾನ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಬಸ್ ಯಾತ್ರೆ ಮಧ್ಯದಲ್ಲೇ ಪಂಕ್ಚರ್ ಆಗಲಿದೆ ಕಾಂಗ್ರೆಸ್ ಕನಸು ಕಾಣುವ ಕಾಲ ಮುಗಿದಿದೆ ಎಂದು ವಿಶ್ವಾಸದಿಂದ ತಿಳಿಸಿದರು.ಪಕ್ಷವು ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ 150ಕ್ಕಿಂತ ಹೆಚ್ಚು ಶಾಸಕರ ಸ್ಥಾನ ಗೆದ್ದು ಮತ್ತೊಮ್ಮೆ ಸರ್ಕಾರ ರಚಿಸಲಿದೆ ಎಂದು ವಿಶ್ವಾಸದಿಂದ ನುಡಿದರು.ಬೂತ್, ಗ್ರಾಮಗಳಲ್ಲಿರುವ ಫಲಾನುಭವಿಯ ಮನಸ್ಸಿನಲ್ಲಿ ಬಿಜೆಪಿ ಪರ ಅಲೆ ಇದೆ. ವಾತಾವರಣ ನಮ್ಮ ಪರ ಇದೆ. ಬೂತ್ ವಿಜಯ, ಬೂತ್ ಸಂಕಲ್ಪ ಅಭಿಯಾನ ಅತ್ಯಂತ ಯಶಸ್ವಿಯಾಗಿದೆ ಎಂದು ಸೂಚಿಸಿದರು.
ರಾಜ್ಯದ ಡಬಲ್ ಇಂಜಿನ್ ಸರ್ಕಾರ ಅದ್ಭುತವಾಗಿ ಕೆಲಸ ನಿರ್ವಹಿಸುತ್ತಿದೆ. ಒಬ್ಬೊಬ್ಬ ಶಾಸಕರ ಕ್ಷೇತ್ರಕ್ಕೆ ಒಂದೊಂದು ಸಾವಿರ ಕೋಟಿಗೂ ಹೆಚ್ಚು ಅನುದಾನ ಬಂದಿದೆ.ಪರಿಶಿಷ್ಟ ಜಾತಿ, ಪಂಗಡದವರಿಗೆ 75 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಕೊಡುತ್ತಿದ್ದೇವೆ. ವಿಕಾಸಸೌಧದ ಬಳಿ ಡಾ.ಅಂಬೇಡ್ಕರರ ಸ್ಫೂರ್ತಿ ಭವನ ನಿರ್ಮಿಸಲಾಗುತ್ತಿದೆ. ಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಿಸಿದ್ದೇವೆ. ನೇಕಾರ ಸಮುದಾಯಕ್ಕೆ ದೊಡ್ಡ ಕೊಡುಗೆ ಕೊಡಲಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ಹೆಚ್ಚಳ, ಬಂಜಾರ ಸಮುದಾಯಕ್ಕೆ ಹಕ್ಕುಪತ್ರ, ಗ್ರಾಮ ಒನ್ ಯೋಜನೆ ಜಾರಿ, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರದಿಂದ 5,300 ಕೋಟಿ ನೀಡಿದ್ದು, ಪ್ರಧಾನಿ ಮೋದಿಜಿ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.

 

ಈ ವೇಳೆ ತಾಲೂಕು ಅದ್ಯಕ್ಷ ಸತ್ತೂರು ಹಾಲೇಶ್, ಬಿಜೆಪಿ ಯುವ ಮುಖಂಡ ಮುತ್ತಿಗಿ ವಾಗೀಶ್, ಪ್ರಧಾನ ಕಾರ್ಯದರ್ಶಿ ಉದಯಕುಮಾರ್, ಒಂಕಾರ ಗೌಡ್ರು,  ಎಂ.ಪಿ.ನಾಯ್ಕ್, ತಾ.ಪಂ.ಮಾಜಿ ಉಪಾದ್ಯಕ್ಷ ಮಂಜ್ಯಾನಾಯ್ಕ್, ವಿನಾಯಕ ಭಜಂತ್ರಿ, ಮಲ್ಲಿಕಾರ್ಜುನ ವಕೀಲರು, ಎಸ್.ಆರ್.ಅಶೋಕ, ಮುದುಕವ್ವನವರ್ ಶಂಕರ್, ಲಿಂಗಾನoದ ವಕೀಲರು, ಶಾನಬೋಗ ಸುರೇಶ್, ತಾಲೂಕು ಬಿ.ಜೆ.ಪಿ. ಮಹಿಳಾ ಅದ್ಯಕ್ಷೆ ಜಿ.ಎಂ.ರೇಖಮ್ಮ,  ಬಿ.ವೈ.ವೆಂಕಟೇಶ್, ಸೂರ್ಯನಾಯ್ಕ್, ಆಲೂರು ಶ್ರೀನಿವಾಸ, ಮಹೇಶ್ ಪೂಜಾರ್, ಕಿರಣಕುಮಾರ್, ಎಂ.ಕೆ.ಜಾವೀದ್, ಕೆ.ಪ್ರಕಾಶ್, ಬಸವರಾಜ ಭಜಂತ್ರಿ, ಕೆಂಚಪ್ಪ, ಹಾಗೂ ಇತರರು ಹಾಜರಿದ್ದರು…

 

ವರದಿ. ಪ್ರತಾಪ್. ಸಿ. ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *