;

ಈ ಬಾರೀ ಕೂಡ್ಲಿಗಿ ವಿಧಾನಸಭಾ ಕ್ಷೇತ್ರಕ್ಕೆ ಕಮಲ ಭಾರವಂತೆ, ಕೈ ಬಲು ಜೋರಂತೆ ಎನ್ನುವ ಕೂಗು ಬಲು ಜೋರು!!!

ನೋಡಿ ಈಗಿನ ರಾಜಕೀಯ ವ್ಯವಸ್ಥೆ ಏಗಿದೆ ಅಂದರೆ ಮತದಾರರನ್ನು ಮನಸ್ಸೇಳೆಯುವ ಮೂಲ ಉದ್ದೇಶದಿಂದ ಹಲವಾರು ರಾಜಕೀಯ ವ್ಯಕ್ತಿಗಳು ನಾ ಮುಂದು ತಾ ಮುಂದು ಎನ್ನುವುದನ್ನು ನೋಡಿದರೆ ಇವರು ಕ್ಷೇತ್ರದ ಅಭಿವೃದ್ಧಿಗೆ ಬರುವವರು ಅಥವಾ ಚುನಾವಣೆಯಲ್ಲಿ ನಾನು ಗೆದ್ದು ನಮ್ಮ ಕುಟುಂಬದ ತಲೆಮಾರಿಗೆ ಹಾಗುವಷ್ಟು ಆಸ್ತಿ ಮತ್ತು ಅಂತಸ್ತನ್ನು ಮಾಡುವ ಉದ್ದೇಶದಿಂದ ಬಂದಿದ್ದಾರೋ ಇವರು ಯಾರಿಗೆ ಗೊತ್ತು ಸರ್ ಇವರ ಒಂದು ಚಾಣುಕ್ಯ ತಂತ್ರ ಎನ್ನುತ್ತಾರೆ ತಾಲೂಕಿನ ಮತದಾರರು ಸಧ್ಯದ ರಾಜಕೀಯ ವ್ಯವಸ್ಥೆಯನ್ನು ನೋಡಿದರೆ ಕೂಡ್ಲಿಗಿ ಕ್ಷೇತ್ರ ಮನೆಯೊಂದು ನಾಲ್ಕು ಬಾಗಿಲು ಎನ್ನುವ ಮಾತು ಬಲು ಜೋರಾಗಿ ಕೇಳಿ ಬರುತ್ತಿದೆ.

ಕೂಡ್ಲಿಗಿ ಕ್ಷೇತ್ರದ ಹಾಲಿ ಶಾಸಕರಾದ ಏನ್, ವೈ, ಗೋಪಾಲಕೃಷ್ಣ ರವರ ಹೆಸರು, ಬಿಜೆಪಿ ಪಕ್ಷದಲ್ಲಿ ಬಲು ಜೋರಾಗಿ ಕೇಳಿಬರುತ್ತಿದೆ ಅದೇನೋ ಅಭಿವೃದ್ಧಿಯ ಹರಿಕಾರರಂತೆ ಆದರೆ ಇಂದಿಗೂ ಬರೀ, ಸಿವಿಲ್ ಕಾಂಟ್ರಾಕ್ಟ್ ಗಳ ಕೈಗೊಂಬೆಯಂತೆ ವರ್ತಿಸುವ ಈತ ಇಂದಿಗೂ ಸಹ ಕ್ಷೇತ್ರದ ಒಬ್ಬ ಸಾಮಾನ್ಯ ಮನುಷ್ಯರನ್ನು ಸಾಧಾರಣವಾಗಿ ಮಾತಾಡಿಸುವ ಅಭಿವೃದ್ಧಿಯ ಗುಣವನ್ನು ಹೊಂದಿಲ್ಲ ಎನ್ನುವ ಮಾತು ಬಲು ಜೋರಾಗಿ ಕೇಳಿ ಬರುತ್ತದೆ ಈ ಒಂದು ಕ್ಷೇತ್ರದಲ್ಲಿ ಇವತ್ತು ಏನೇ ಮಾಡಿದರೂ ಸಹ ಇಂದಿನ ಈ ಒಂದು ಕ್ಷೇತ್ರದ ಅಭಿವೃದ್ಧಿಯ ಮನೆ ಮಗನೆಂದು ಹೆಸರಾಗಿರುವ,ಬಿ ನಾಗೇಂದ್ರಪ್ಪ ಅವರು ಮಾಡಿರುವ ಎಲ್ಲಾ ಒಂದು ಅಭಿವೃದ್ಧಿಯ ಕಾರ್ಯಕ್ರಮಗಳ ಒಂದು ಚಟುವಟಿಕೆಗಳು ಈಗ ಅಭಿವೃದ್ಧಿ ಹಂತಕ್ಕೆ ಬಂದಿವೆ ಹಾಲಿ ಶಾಸಕರು ಬರೀ ಐದು ವರ್ಷದಲ್ಲಿ ಇಷ್ಟು ಮಾಡಲು ಸಾಧ್ಯವೇ?ಎನ್ನುವ ಒಂದು ಪ್ರಶ್ನೆ ತಾಲೂಕಿನ ಎಲ್ಲಾ ಸಾರ್ವಜನಿಕರಲ್ಲಿ ಮೂಡಿಬರುತ್ತದೆ.

ಏಕೆ ಬರೆ ಸಿವಿಲ್ ಕಾಂಟಾಕ್ಟ್ಗಳನ್ನು ಹತ್ತಿರದಲ್ಲಿಟ್ಟುಕೊಂಡು ತನ್ನ ರಾಜಕೀಯವನ್ನು ತಾಲೂಕಿನಲ್ಲಿ ಮುಂದುವರಿಸಲು ಸಾಧ್ಯ ಬಡಬಗ್ಗ ರೈತರು ಸಾರ್ವಜನಿಕರು ಹಾಗೂ ಇನ್ನಿತರರು ಇವರಿಗೆ ಬೇಕಾಗಿಲ್ಲವೆ, ಅವರು ಮಾತ್ರ ಮನುಷ್ಯರು ನಾವು ಸಾಮಾನ್ಯ ಮನುಷ್ಯರೆಂದು ಇವರು ದೂರವಿಡುವುದು ಯಾಕೆ ಇಂತಹ ಒಂದು ಬೇಜವಾಬ್ದಾರಿಯುತ ಸಾಮಾನ್ಯ ಶಾಸಕರು ನಮಗೆ ಬೇಕೆ ಎನ್ನುವ ಒಂದು ಪ್ರಶ್ನೆ ಇಡೀ ತಾಲೂಕಿನಾದ್ಯಾoತ ಬಲು ಜೋರಾಗಿ ಕೇಳಿ ಬರುತ್ತಿದೆ, ಈ ಒಂದು ಕ್ಷೇತ್ರದಲ್ಲಿ ಈ ಬಾರಿ ಒಂದು ಮತಕ್ಕೆ  ಕ್ಷೇತ್ರದಲ್ಲಿ ದುಪ್ಪಟ್ಟು ರೂಪಾಯಿಗಳಷ್ಟು ಬೆಲೆಯಂತೆ ನೋಡೋಣ, ಅದೇನೆ ಇರಲಿ ಸರ್ ಈ ಒಬ್ಬ ಹಾಲಿ ಶಾಸಕನ ಮನೆ ಮುಂದೆ ಸಾಮಾನ್ಯ ವ್ಯಕ್ತಿ ಹೋದರು ಸಹ ದುರಂಕಾರದಿಂದ ಮಾತನಾಡುವಂಥ ವ್ಯಕ್ತಿ ನಮ್ಮ ಕ್ಷೇತ್ರಕ್ಕೆ ಯಾಕೆ ನಾವು ಈ ಇಂದೆ ಮೋಸ ಹೋಗಿರುದೇ ಸಾಕು ಮತ್ತೆ ಇಂತವರು ಬೇಕೆ ಎನ್ನುವ ಒಂದು ಸಾಮಾಜಿಕ ಕೂಗು ಸಾರ್ವಜನಿಕರಲ್ಲಿ ಬಲು ಜೋರಾಗಿ ಕೇಳಿಬರುತ್ತಿದೆ.

ಹೆಸರಿಗಷ್ಟೇ ಅಭಿವೃದ್ಧಿ ಅಧಿಕಾರ ಮನೆ ಮುಂದೆ ಹೋದರೆ ಕ್ಷೇತ್ರ ಜನತೆಗೆ ಒಂದು ಲೋಟ ನೀರು ಸಹ ಕೊಡುವ ಮನೋಭಾವವಿಲ್ಲದ ವ್ಯಕ್ತಿಯನ್ನು ತಗೊಂಡು ಏನು ಮಾಡೋದು ಹೇಳಿ, ಇಂತ ಒಂದು ಸಾರ್ವಜನಿಕರ ಮಾತು ಆದಿ ಬೀದಿಗಳಲ್ಲಿ ಮಾತಾಡೋದನ್ನು ಕೇಳಿದರೆ ತುಂಬಾ ವಿಪರ್ಯಾಸನೆ ಬಿಡಿ ಅದೇ ಹಳೆಯ ಶಾಸಕರದ, ಬಿ ನಾಗೇಂದ್ರಪ್ಪನವರ ಮನೆ ಮುಂದೆ ಯಾರೇ ಹೋದರು ಕ್ಷೇತ್ರದ ಜನತೆ ಆಗಿರಬಹುದು ಏನನ್ನಾದರೂ ಕೊಡುವ ಅಗತ್ಯವಿಲ್ಲದಿದ್ದರೂ ಸಹ ಅವರ ಯೋಗಕ್ಷೇಮ ಮತ್ತು ಅವರ ಸಂಕಟವನ್ನು ಆಲಿಸಿ ಕಳಿಸುವ ವ್ಯಕ್ತಿಯನ್ನು ನಾವು ಕಳೆದುಕೊಂಡು ಇಂದು ತಾಲೂಕು ಬರಿದಾಗಿದೆ ಎನ್ನುವ ಒಂದು ಕೂಗು ಬಲು ಜೋರಾಗಿ ಕೇಳಿ ಬರುತ್ತದೆ.

ಈ ಒಂದು ಕ್ಷೇತ್ರದ ಮತದಾರರ ಮನದಾಳದ ಮಾತಿನಲ್ಲಿ ನೀವೇ ಹೇಳಿ ಸರ್, ತುಂಗಭದ್ರಾ ನೀರಿಗೋಸ್ಕರ ಕ್ಷೇತ್ರದ ಜನಕ್ಕೆ ಒಳ್ಳೇದಾಗಲಿ ಎನ್ನುವ ಉದ್ದೇಶದಿಂದ ಹೊಸಳ್ಳಿಯಿಂದ ಕೂಡ್ಲಿಗಿ ತನಕ ಪಾದಯಾತ್ರೆ ಮಾಡಿದ್ದು ಹಾಲಿ ಶಾಸಕರ ಅಥವಾ ಮಾಜಿ ಶಾಸಕರ ಎನ್ನುವುದಕ್ಕೆ ನೀವೇ ಉತ್ತರ ಕೊಡಿ ಇದನ್ನು ತಾಲೂಕಿನ ಜನತೆ ಮನದಲ್ಲಿ ಇಟ್ಟುಕೊಂಡು ಮತದಾನಮಾಡಿದರೆ ಒಳಿತು ಎನ್ನುವುದು ನಮ್ಮ ಒಂದು ಉದ್ದೇಶ ಯಾರೇ ಕ್ಷೇತ್ರಕ್ಕೆ ಬರಲಿ ಸಾರ್ವಜನಿಕರಿಗೆ ಸ್ಪಂದಿಸುವ ವ್ಯಕ್ತಿ ಬರಲಿ ಎನ್ನುವುದೇ ನಮ್ಮ ಒಂದು ಆಶಯ ಎನ್ನುತ್ತಾರೆ ಹಲವಾರು ಸಂಘಟನೆಗಳ ಪ್ರಮುಖ ಮುಖಂಡರು.

ಗಡಿ ಗ್ರಾಮಗಳನ್ನು ದಿಕ್ಕರಿಸಿದ ಎನ್, ವೈ,ಗೋಪಾಲಕೃಷ್ಣ ಯಾಕೆ ಗಡಿ ಗ್ರಾಮಗಳು ತಾಲೂಕಿಗೆ ಸೇರಿಲ್ಲವೇ ಇವರ ವೋಟು ರಾಜಕೀಯ ವ್ಯಕ್ತಿಗಳಿಗೆ ಅವಶ್ಯಕತೆ ಇಲ್ಲವೇ ಇಂದಿಗೂ ಸಹ ಗಡಿಗ್ರಾಮಗಳಾದ ಕಲ್ಲಳ್ಳಿ, ಕೆಂಚಮನಹಳ್ಳಿ,ಆಲೂರು, ಸಾಕಲಾಪುರದಹಟ್ಟಿ, ಪಿಚಾರಹಟ್ಟಿ ಈ ಗ್ರಾಮಗಳು ಹಿಂದಿಗೂ ಸಹ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಿಕೊಡದ ಶಾಸಕರು ರಸ್ತೆ ಅಭಿವೃದ್ಧಿ ಮಾಡಿದೆ ಹಲವಾರು ಬಿಲ್ಡಿಂಗ್ ಗಳ ಅಭಿವೃದ್ಧಿ ಮಾಡಿದೆ ಹಲವಾರು ಸರ್ಕಾರಿ ಕಚೇರಿಗಳ ಅಭಿವೃದ್ಧಿಯನ್ನು ಮಾಡಿದೆ ಎನ್ನುವ ಹೇಳಿಕೆಗಳನ್ನು ಬಿಟ್ಟರೆ.

ಸಾರ್ವಜನಿಕರಿಗೆ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ ಮನೆಗಳನ್ನು ಮಾಡಿಸಿಕೊಟ್ಟೆ ಶೌಚಾಲಯ ಮಾಡಿಸಿಕೊಟ್ಟೆ ಸಾರ್ವಜನಿಕರ ಮಕ್ಕಳಿಗೆ ಏನಾದರೂ ವಿತರಣೆ ಮಾಡಿದೆ ಎನ್ನುವ ಉದಾಹರಣೆ ಕೊಡಿ ಸರ್ ನಾವೆ ಕ್ಷೇತ್ರದ ಅಭಿವೃದ್ಧಿ ಅಧಿಕರಾರು ಇವರೇ ಎಂದು ಒಪ್ಪಿಕೊಂಡು ಮನಸಾಕ್ಷಿಯಾಗಿ ಈ ತಡ ಬರುವ ಎಲೆಕ್ಷನ್ ನಲ್ಲಿ ಗೆಲ್ಲಿಸಿ ಕೊಡುತ್ತೇವೆ ಇಂತಹ ಡೋಂಗಿ ರಾಜಕೀಯವನ್ನು ನೋಡಲಾರದೆ ಮೊಳಕಾಲ್ಮುರು ಕ್ಷೇತ್ರದಿಂದ ಕೂಡ್ಲಿಗಿ ಕ್ಷೇತ್ರಕ್ಕೆ ಬಂದಿರುವ ಇಂತಹ ವ್ಯಕ್ತಿಯನ್ನು ನಾವು ನಂಬಲು ಸಾಧ್ಯವೇ, ಇಷ್ಟು ದಿನ ನೋಡಿದ್ದು ಸಾಕು ನಮಗೆ ನಮ್ಮ ಕ್ಷೇತ್ರದ ಮನೆ ಮಗ ಬೇಕು ಎನ್ನುವ ಒಂದು ಕೂಗು ಬಲು ಜೋರಾಗಿ ಕೇಳಿಬರುತ್ತಿದೆ ಈ ಒಂದು ಕ್ಷೇತ್ರದಲ್ಲಿ ಮತದಾರ ಪ್ರಭುಗಳಿಂದ ಇದನ್ನೆಲ್ಲಾ ನೋಡಿದರೆ ಮುಂದಿನ ಬೆಳವಣಿಗೆ ಏನಾಗಬಹುದು ಎಂದು ಕಾದು ನೋಡೋಣ.!!!

ವಿ ಲೋಕಶ್ ನಾಯಕ ಎಂಬ ಅಭಿವೃದ್ಧಿ ಹರಿಕಾರ…!!!

ಅಧಿಕಾರವಿಲ್ಲದಿದ್ದರೂ ಹಠಬಿಡದಾ ಇಂತಹ ವ್ಯಕ್ತಿ ಸಮಾಜಕ್ಕೆ ಬೇಕು ಸುಮಾರು ವರ್ಷಗಳಿಂದ ಕೂಡ್ಲಿಗಿ ಕ್ಷೇತ್ರದ ಮನೆ ಮಗನಂದೆ ಹೆಸರುವಾಸಿಯಾಗಿರುವ ಈ ಒಂದು ವ್ಯಕ್ತಿ ಯಾರ ಅಧಿಕಾರದ ಆಮಿಷವನ್ನು ಒಡ್ಡದೆ ತನ್ನ ಸ್ವಂತ ಖರ್ಚಿನಲ್ಲಿ ಇಂದಿಗೂ ಸಹ ಕ್ಷೇತ್ರವನ್ನು ನೆಲೆ ಕಚ್ಚಿ ಎಲ್ಲಾ ಸಾರ್ವಜನಿಕರ ಪ್ರತಿಯೊಂದು ಗ್ರಾಮಗಳಿಗೆ ಭೇಟಿ ಮಾಡುವುದನ್ನು ನೋಡಿದರೆ ಇವರಿಗೆ ನಿಜವಾದ ನಾಯಕರ ಗುಣವಿದೆ ಎನ್ನುವುದು ಕ್ಷೇತ್ರದ ಎಲ್ಲಾ ಗ್ರಾಮಗಳ ಸಾರ್ವಜನಿಕರಿಂದ ಬಲು ಜೋರಾಗಿ ಕೇಳಿ ಬರುವ ಮಾತಿದಾಗಿದೆ.

ನೋಡಿ ಸರ್ ನೀವೇ ಸಹ ಬರುವುದು ಕಷ್ಟ ಹಿಂದಿಗೂ ಸಹ ಸಾಮಾನ್ಯ ವ್ಯಕ್ತಿ ಯಾರೇ ಆತನನ್ನು ಮದ್ಯ ರೋಡಲ್ಲಿ ನಿಂತು ಮಾತನಾಡಿಸಿದರೂ ನಗುಮುಖದಿಂದ ಮಾತನಾಡುವ ಇವರು ಕ್ಷೇತ್ರದ ಯಾವ ಹಳ್ಳಿಗೆ ಹೋದರು ಇವರ ಹೆಸರು ಚಿರಪರಿಚಿತ ಇಂದಿಗೂ ಅಧಿಕಾರದ ಒಂದು ಹುಚ್ಚನ್ನು ಒಂದಿರೋದೆ ಕ್ಷೇತ್ರವನ್ನು ನೆಲಕಚ್ಚಿ ನಿಂತು ಪ್ರತಿಯೊಂದು ಕಾರ್ಯಕ್ರಮಕ್ಕೆ ತನ್ನದೇ ಆದ ಕೊಡುಗೆಯನ್ನು ಕೊಟ್ಟ ಮಹಾನ್ ವ್ಯಕ್ತಿ ಇಂಥ ವ್ಯಕ್ತಿ ನಮ್ಮ ಕ್ಷೇತ್ರಕ್ಕೆ ಬೇಕು ಎನ್ನುವುದು ತುಂಬಾ ಬಲು ಜೋರಾಗಿ ಕೇಳಿ ಬರುತ್ತಿರುವ ಮಾತು ಸಾರ್ವಜನಿಕರಲ್ಲಿ ಈ ಬಾರಿ ಇವರಿಗೆ ಯಾವ ಪಕ್ಷದಿಂದ ಟಿಕೆಟ್ ಕೊಟ್ಟರು ಕೊಡದಿದ್ದರೂ ಸಹ ಸ್ವತಂತ್ರ ಅಭ್ಯರ್ಥಿಯಾಗಿ ನಿಂತರೂ ಸಹ ನಾಮ ಕ್ಷೇತ್ರದ ಎಲ್ಲಾ ಒಂದು ಸಾರಜನಿಕರು ಇವರಿಗೆ ಕೈಹಿಡಿಯುವುದು ಸತ್ಯ ಸಂಗತಿ ಮಾತು, ಏಕೆಂದರೆ ಬಡ ಮಕ್ಕಳಿಗೆ ಸರೋಜನಿಕರಿಗೆ ಪ್ರತಿಯೊಂದು ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮಗಳಿಗೆ ತನ್ನ ಕೈಲಾದಷ್ಟು ಸಹಾಯವನ್ನು ಮಾಡಿಕೊಂಡೆ ಬಂದಿರುವ ಇಂತಹ ವ್ಯಕ್ತಿ ನಮ್ಮ ಕ್ಷೇತ್ರಕ್ಕೆ ಬೇಕು ಇಂಥವರಿಗೆ ಅಧಿಕಾರ ಸಿಕ್ಕರೆ ನಿಜವಾಗಿಯೂ ಸಹ ಕ್ಷೇತ್ರ ಅಭಿವೃದ್ಧಿಯಾಗುವುದು ಎನ್ನುವುದೇ ನಮ್ಮ ಉದ್ದೇಶ ಎನ್ನುತ್ತಾರೆ.

ತಾಲೂಕಿನ ಎಲ್ಲಾ ಗ್ರಾಮಗಳ ಮತದಾರ ಪ್ರಭುಗಳು, ಇವರ ಒಂದು ಅನಿಸಿಕೆಗೆ ನಮ್ಮ ಒಂದು ಪತ್ರಿಕ ಮಾಧ್ಯಮದ ವರದಿಗಾರ ಕೇಳಿದ ಪ್ರಶ್ನೆ. ಯಾಕೆ ಹಿಂದೆ ನಡೆದ ಚುನಾವಣೆಯಲ್ಲಿ ಇವರನ್ನು ಆಯ್ಕೆ ಮಾಡಿ ತರಬಹುದಿತ್ತಲ್ವ ನೀವು ಏಕೆ ಆ ಒಂದು ಕೆಲಸ ಮಾಡಲಿಲ್ಲ ಎನ್ನುವ ಒಂದು ಪ್ರಶ್ನೆಗೆ, ಮತದಾರ ಪ್ರಭುಗಳು ಕೊಟ್ಟ ಉತ್ತರವಿದು, ಸರ್ ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಇವರಿಗೆ ಟಿಕೆಟ್ ಕೊಟ್ಟಿದ್ದಾರೆ ಇವರೇ ಈ ಕ್ಷೇತ್ರದ ಹಾಲಿ ಶಾಸಕರಾಗಿರುತ್ತಿದ್ದರು ಆದರೆ ಟಿಕೆಟ್ ಕೊಡದ ಪಕ್ಷ ಬೇರೊಬ್ಬರ ಆಯ್ಕೆ ಮಾಡಿ ಬಲು ದೊಡ್ಡ ತಪ್ಪನ್ನು ಮಾಡಿದೆ ಎನ್ನುವುದು ನಮಗೂ ಸಹ ತುಂಬಾ ನೋವಾಗಿದೆ ಸರ್ ಈ ಬಾರಿ ಅವರು ಯಾವ ಪಕ್ಷದಿಂದ ನಿಂತರೂ ಸಹ ನಾವು ಅವರನ್ನು ಕೈ ಹಿಡಿಯುವುದು ಸತ್ಯ ಸಂಗತಿಯ ಮಾತು ಎನ್ನುತ್ತಾರೆ ಸಾರ್ವಜನಿಕರು ಕಾಯ್ದು ನೋಡೋಣ ಕೈಹಿಡಿಯುವರೋ ಅಥವಾ ಕೈ ಬಿಡುವರೋ ಎನ್ನುವುದನ್ನು ನೀವೇ ಉತ್ತರಿಸಿ.

ಲೋಕೇಶ್ ನಾಯಕ್ ಎಂದರೆ ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಚಿರಪರಿಚಿತವಾದ ವ್ಯಕ್ತಿ ಮನೋರಂಜನ ಕಾರ್ಯಕ್ರಮಗಳಿಗಾಗಿರಬಹುದು, ತಾಲೂಕಿನ ಪ್ರತಿಯೊಂದು ಗ್ರಾಮದ ಮದುವೆ ಸಮಾರಂಭಗಳಿಗೆ ಎಂತಹ ವ್ಯಕ್ತಿಯು ಆಹ್ವಾನ ಕೊಟ್ಟರೂ ತುಂಬು ಹೃದಯದಿಂದ ಹೋಗಿ ಆಶೀರ್ವದಿಸಿ ತಮ್ಮ ಕೈಲಾದ ಸಾಹೇಯನ್ನು ಮಾಡುವ ಇಂತಹ ಸರಳ ಸಜ್ಜನಿಕೆ ವ್ಯಕ್ತಿ ನಮ್ಮ ಕ್ಷೇತ್ರಕ್ಕೆ ಬೇಕು ಸರ್ ಎನ್ನುತ್ತಾರೆ ಕ್ಷೇತ್ರದ ಮತದಾರ ಪ್ರಭುಗಳು.

ಗುರುರಾಜ್ ನಾಯಕ್ ಎನ್ನುವ ಯುವ ನಾಯಕರು ಕ್ಷೇತ್ರವನ್ನು  ವಿಭಿನ್ನ ರೀತಿಯಲ್ಲಿ ಅಭಿವೃದ್ಧಿಗೆ ಪಣ..!!!

[3/9, 09:55] Komala: ಇವರು ಸಹ ಕ್ಷೇತ್ರವನ್ನು ಅಭಿವೃದ್ಧಿ ಮಾಡಲೆಂದೆ ಪಣತೊಟ್ಟು ನಿಂತ ವ್ಯಕ್ತಿ, ಇವರ ಆಲೋಚನೆ ವಿಭಿನ್ನ ಯಾಕೆ ನಮ್ಮ ರಾಜ್ಯದ ಕ್ಷೇತ್ರ ವಿವಿಧ ದೇಶಗಳ ರಾಜಕೀಯಗಳಂತೆ ಮುಂದುವರಿಯಬಾರದು ಅದನ್ನು ಇಲ್ಲಿ ಏಕೆ ನಮ್ಮ ರಾಜಕೀಯ ವ್ಯಕ್ತಿಗಳಿಂದ ಮಾಡಲು ಸಾಧ್ಯವಿಲ್ಲ ಎನ್ನುವ ಮನಸ್ಥಿತಿಯನ್ನು ಹೊಂದಿರತಕ್ಕಂಥವ್ಯಕ್ತಿ.

ಇವರು ಸಹ ಹಲವಾರು ಕ್ಷೇತ್ರಗಳಲ್ಲಿ ಕ್ರೀಡಾ ಕ್ಷೇತ್ರ ಕಲಾ ಕ್ಷೇತ್ರಕ್ಕೆ ತಮ್ಮ ಕೈಲಾದಷ್ಟು ಸಹಾಯದ ಹಸ್ತವನ್ನು ಮಾಡಿರುವ ವ್ಯಕ್ತಿ ಇವರು ಸಹ ಕ್ಷೇತ್ರದಲ್ಲಿ ತಮ್ಮದೇ ಆದ ವ್ಯಕ್ತಿತ್ವದ ಗುಣವುಳ್ಳ ರಾಜಕೀಯ ವ್ಯಕ್ತಿ ಹಾಗೂ ಇವರ ಕುಟುಂಬವೇ ಕಾಂಗ್ರೆಸ್ ಪಕ್ಷ ತಮ್ಮ ಪಕ್ಷವೆಂದು ದುಡಿದಿರುವ ಕುಟುಂಬವಿದು ನೋಡೋಣ ಕ್ಷೇತ್ರಕ್ಕೆ ಯಾರು ಬಂದರೆ ಒಳಿತು ಎನ್ನುವುದು ನಿಗೂಢ ಪ್ರಶ್ನೆಯಾಗಿ ಕಾಡುತ್ತಿದೆ ಎನ್ನುತ್ತಾರೆ ಕ್ಷೇತ್ರದ ಮತದಾರ ಪ್ರಭುಗಳು.

ಇಷ್ಟು ದಿನವಿಲ್ಲದ ಕಾಳಜಿ ಇoದೇಕೆ ಎನ್ನುವುದೇ ಕ್ಷೇತ್ರದ ಜನತೆಗೆ ಅರ್ಥವಾಗುತ್ತಿಲ್ಲ???

ಎನ್, ಟಿ, ಬಿ, ಶ್ರೀನಿವಾಸ್ , ಹೇಳಿಕೇಳಿ ಕ್ಷೇತ್ರದಲ್ಲಿ ಈಗ ಮುಂಚೂಣಿಯಲ್ಲಿರುವ ವ್ಯಕ್ತಿ ಯಾಕೆ ಇಷ್ಟು ದಿನ ಇವರು ಎಲ್ಲಿದ್ದರೂ ರಾಜಕೀಯ ವ್ಯಕ್ತಿತ್ವ ಗುಣ ಇವರ ಕುಟುಂಬದ ರಕ್ತದಲ್ಲಿಯೇ ಬಂದಿದೆ ಆದರೆ ಚುನಾವಣೆ ಸಮಯಲ್ಲೆ ಅದನ್ನು ತೋರಿಸಬೇಕೆ?
ದಿ “ಎನ್, ಟಿ, ಬೊಮ್ಮಣ್ಣ ನವರ ಎರಡನೇ ಮಗನಾದ ಇವರು ಇವರು ವೃತ್ತಿಯಲ್ಲಿ ನೇತ್ರ ತಜ್ಞರು ಆದರೂ ಇಷ್ಟು ದಿನಗಳು ತಾಲೂಕಿನ ಜನತೆಗೆ ಅಭಿವೃದ್ಧಿ ಮಾಡುವ ಉದ್ದೇಶವೇಕೆ ಇರಲಿಲ್ಲ , ಯಾವ ರಾಜಕೀಯ ಕುತಂತ್ರವಾದರೂ ಬರಿ ಚುನಾವಣಾ ಸಂದರ್ಭದಲ್ಲಿ ಏಕೆ? ಅದನ್ನು ತೋರ್ಪಡಿಸಬೇಕು ತಾಲೂಕು ನಮ್ಮದು ಜನ ನಮ್ಮವರು ಅನ್ನುವ ಒಂದು ಮನಸ್ಥಿತಿ ಹೊಂದಿದ್ದರೆ ಯಾವಾಗಲಾದರೂ ಅಭಿವೃದ್ಧಿಯ ಕೆಲಸಗಳನ್ನು ಮಾಡಬಹುದು, ಇವರು ಸಹ ಹಲವಾರು ಕ್ಷೇತ್ರದ ಜನತೆಗೆ ತಮ್ಮ ಒಂದು ಆಸ್ಪತ್ರೆಯಲ್ಲಿ ತಮ್ಮ ಕಾಳಜಿ ಯಿಂದ ನೇತ್ರ ಚಿಕಿತ್ಸೆ ಮಾಡಿ ಕಳುಹಿಸಿರುವ ಉದಾಹರಣೆಗಳು ಸಾಕಷ್ಟಿವೆ.

ಅದನ್ನು ಕ್ಷೇತ್ರದ ಜನತೆ ಯಾವತ್ತು ಮರೆಯುವುದಿಲ್ಲ ಆದರೆ, ಮೊನ್ನೆ ಮಾಡಿದ ಕಾನಹೊಸಹಳ್ಳಿ, ನರಸಿಂಹಗಿರಿ, ಕಾರ್ಯಕ್ರಮಗಳನ್ನು ಈ ಹಿಂದೆ ಯಾಕೆ ಮಾಡಲು ಇವರು ಮುಂದೆ ಬರಲಿಲ್ಲ ಮಾಡಬಹುದಿತ್ತಲ್ಲ ಬರೀ ಚುನಾವಣೆ ಸಂದರ್ಭದಲ್ಲಿ ಏಕೆ ಸಾರ್ವಜನಿಕರನ್ನು ಉಪಯೋಗಿಸಿಕೊಂಡು ತಮ್ಮ ದೊಡ್ಡಸ್ತಿಕೆಯನ್ನು ಗಿಟ್ಟಿಸಿಕೊಳ್ಳಲು ಮುಂದಾಗಬೇಕು, ಎನ್ನುವುದು ಎಲ್ಲಾ ತಾಲೂಕಿನ ಮತದಾರರ ಮನದಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ, ನೋಡೋಣ ಇವರ ಒಂದು ಕಾರ್ಯ ಬರೀ ಚುನಾವಣೆಗೆ ಸೀಮತವಾಗಿರಬಹುದೇ ಅಥವಾ ಅಧಿಕಾರ ಸಿಗದಿದ್ದರೂ ಸಹ ಕ್ಷೇತ್ರದ ಜನತೆಯ ಅಭಿವೃದ್ಧಿಗೆ ಹೀಗೆ ಮುಂದುವರೆಯುವುದೇ ಎನ್ನುವುದನ್ನು ಕಾಯ್ದು ನೋಡೋಣ, ಎನ್ನುತ್ತಾರೆ ಕ್ಷೇತ್ರದ ಮತದಾರ ಪ್ರಭುಗಳು.

ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ…

ಅಪ್ಪನ ಆಶೀರ್ವಾದ ಅಣ್ಣನ ಸಹಕಾರ, ಮತ್ತು ತಾಲೂಕಿನ ಮನೆಮಗನಾದ ಎನ್ಟಿಬಿ ಶ್ರೀನಿವಾಸ್ ರವರಿಗೆ ತಾಲೋಕಿನ ಮತದಾರರು ಕೈಹಿಡಿಯುವರೇ ಅಥವಾ ಕೈ ಬಿಡುವರೇ ಎನ್ನುವ ಒಂದು ಮುನ್ಸೂಚನೆಯನ್ನು ಮುಂದೆ ಕಾಯ್ದು ನೋಡೋಣ ಸದ್ಯದ ಮಟ್ಟದಲ್ಲಿ ಅಪ್ಪನಂತೆ ಕ್ಷೇತ್ರದ ಅಭಿವೃದ್ಧಿಯನ್ನು ಮಾಡುವ ಸಲುವಾಗಿ ಕ್ಷೇತ್ರಕ್ಕೆ ಕಾಲಿಟ್ಟ ಇವರಿಗೆ ಕ್ಷೇತ್ರದ ಎಲ್ಲಾ ಗ್ರಾಮಗಳ ಮತದಾರ ಪ್ರಭುಗಳು ಆಶೀರ್ವದಿಸಲು, ತಾ ಮುಂದು ನಾ ಮುಂದು ಎನ್ನುವ ಒಂದು ಹಿತ ಹೆಜ್ಜೆಯನ್ನು ಇಟ್ಟುಕೊಂಡು ಸಹಕರಿಸುವುದನ್ನು ನೋಡಿದರೆ ಇವರೇ ಕ್ಷೇತ್ರದ ಮುಂದಿನ ಶಾಸಕರು ಎನ್ನುವ ಒಂದು ಆಶಾಭಾವನೆ ಎಲ್ಲರಲ್ಲಿ ಮೂಡಿಬಂದಿದೆ ಆಯ್ತು ನೋಡೋಣ ಇದು ಟೈಪ್ಸ್ ಆಫ್ ಬಳ್ಳಾರಿ ಪತ್ರಿಕೆಯ ಚುನಾವಣೆಯ ಕೂಡ್ಲಿಗಿ ತಾಲೂಕಿನ ಗ್ರೌಂಡ್ ರಿಪೋರ್ಟ್..

ವರದಿ. ಮುಕ್ಕಣ್ಣ ಹುಲಿಗುಡ್ಡ, ಕ್ರೈಂ ರಿಪೋರ್ಟರ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *