ರಾಜ್ಯ ಹೆದ್ದಾರಿ ಬಂದ್ ಮಾಡಿ 2ಎ ಮೀಸಲಾತಿಗಾಗಿ ಪ್ರತಿಭಟನೆ

ಮಹಾಲಿಂಗಪುರ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಗರದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ರಾಜ್ಯ ಹೆದ್ದಾರಿಗಳನ್ನು ಟೈರ್ ಗೆ ಬೆಂಕಿ ಹಚ್ಚಿ ಬಂದ್ ಮಾಡುವ ಮೂಲಕ ಪ್ರತಿಭಟನೆ ಮಾಡಲಾಯಿತು. ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು ಕೂಡಲಸಂಗಮದಿಂದ ಬೆಂಗಳೂರುವರೆಗೆ ಪಾದಯಾತ್ರೆ ಮೂಲಕ ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಸಹ ಸರ್ಕಾರ ಮೀಸಲಾತಿಯನ್ನು ನೀಡದೆ ಕೊಟ್ಟ ಭರವಸೆಯಂತೆ ನಡೆದುಕಳ್ಳದೆ ಮುಖ್ಯಮಂತ್ರಿಗಳು ತಾಯಿ ಮೇಲೆ ಆಣೆ ಮಾಡಿ ಮಾತು ಕೊಟ್ಟು ತಪ್ಪಿರುವುದಕ್ಕಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ 50 ದಿನ ಕಳೆದರು ಮೀಸಲಾತಿ ಬಗ್ಗೆ ಮಾತು ಎತ್ತದೆ ಇರುವ ಕಾರಣ ಇಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ರಾಜ್ಯಾದ್ಯಂತ ರಸ್ತೆ ಬಂದ್ ಕರೆ ಮೇರೆಗೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಮುಧೋಳ್-ನಿಪ್ಪಾಣಿ ಮತ್ತು ರಬಕವಿ-ಜಾಂಬೋಟಿ ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಿ ಪಂಚಮಸಾಲಿ ಸಮಾಜದ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೋರ ಹಾಕಿದರು. ಈಗಾಗಲೇ ಬೆಂಗಳೂರಿನಲ್ಲಿ ನಿರಂತರವಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರೊಡನೆ ರಾಜ್ಯದ ಬೇರೆ ಬೇರೆ ಉರುಗಳಿಂದ ಬೆಂಬಲ ನೀಡಿ ಬಾರಕೋಲು ಚಳುವಳಿ,ಅರಬೆತ್ತಲೆ ಹೋರಾಟ ಮತ್ತು ಬೊಬ್ಬೆ ಹೊಡೆಯುವ ಚಳುವಳಿ ಮಾಡಿ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಸರ್ಕಾರ ಮೀಸಲಾತಿ ಬಗ್ಗೆ ಸ್ಪಷ್ಟನೆ ನೀಡದೆ ವಿಳಂಬ ನೀತಿ ಅನುಸರಿಸತ್ತಿದೆ ಎಂದು ಪಂಚಮಸಾಲಿ ಸಮಾಜದ ಮುಖಂಡರ ಅಸಮಾಧಾನಕ್ಕೆ ಗುರಿಯಾಗಿದ್ದು ಚುನಾವಣೆ ಹತ್ತಿರ ಬರುತ್ತಿದ್ದು ನೀತಿ ಸಂಹಿತೆ ಜಾರಿಯಾದರೆ ಮೀಸಲಾತಿ ನೀಡಲು ಅವಕಾಶ ಇರದೇ ಇರುವ ಕಾರಣ ಆದಷ್ಟು ಬೇಗ ಸರ್ಕಾರ ಮೀಸಲಾತಿ ನೀಡಿ ಸಮಾಜದ ಬಡ ಕೂಲಿ ಕಾರ್ಮಿಕರ ಮಕ್ಕಳ ಕಲ್ಯಾಣಕ್ಕಾಗಿ ಅನುವು ಮಾಡಿಕೊಂಡಬೇಕು ಎಂದು ತಮ್ಮ ತೋಳಲನ್ನು ತೊಡಿಕೂಂಡರು. ಇದೇ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾದ ಡಾ॥ ಎ.ಆರ್.ಬೆಳಗಲಿ,ಎಸ್.ಎಮ್.ಉಳ್ಳಾಗಡ್ಡಿ,ದುಂಡಪ್ಪ ನಂದೆಪ್ಪನವರ,ಡಾ॥ ಅಶೋಕ,ಹಣಮಂತ ಶಿರೋಳ, ಈರಪ್ಪ ದಿನ್ನಿಮನಿ, ಮಹಾದೇವ ಮೇಟಿ,ಸಂತೋಷ ಹುದ್ದಾರ, ಮುತ್ತಪ್ಪ ದಲಾಲ, ಶಿವಲಿಂಗ ಕೌಜಲಗಿ, ವಿಜಯಕುಮಾರ ಕುಳಲಿ, ಮಹಾಲಿಂಗಪ್ಪ ಕಂಠಿ,ಹಣಮಂತ ಕೊಪ್ಪದ,ಅಲ್ಲಪ್ಪ ಕಲ್ಲೊಳ್ಳಿ,ಬಸವರಾಜ ದಲಾಲ, ಬಸವರಾಜ ಗಿರಿಸಾಗರ,ರುದ್ರಪ್ಪ ಬೀರನಗಡ್ಡಿ, ರವಿ ಗಿರಿಸಾಗರ ಉಪಸ್ಥಿತರಿದ್ದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
