;

ಮುನಿರಾಬಾದ್ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ ಕುಖ್ಯಾತ ಕಳ್ಳರ ಬಂಧನ…!!!

ಮುನಿರಾಬಾದ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಬಾರ್ ಬಂದನ ಮತ್ತು ಆರೋಪಿತರಿಂದ 140000=00. ನಗದು ಹಣ,67,336=00 ಮದ್ಯ ವಶ ಹಾಗೂ 41800=00 ರೂ ಬೆಲೆ ಬಾಳುವ ಮೋಟಾರ್ ಸೈಕಲ್ ಮತ್ತು ಕಂಪ್ಯೂಟರ್ ಮಾನಿಟರ್ ವಷ (ಒಟ್ಟು,249,136=00 ರೂ ಮೌಲ್ಯ ವುಳ್ಳ ವಸ್ತುಗಳು ವಶಕ್ಕೆ )
ದಿನಾಂಕ 10/ 2 /2023 ರಂದು ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿ ಹಿರೇಬಗಿನಾಳ ಸೀಮಾದ, A-01 ಬಾರ್ ಅಂಡ್ ರೆಸ್ಟೋರೆಂಟ್ ಕಳ್ಳತನವಾದ ಬಗ್ಗೆ ಮುನಿಯಬಾದ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ದೂರು ದಾಖಲಾಗಿತ್ತು ಸದರಿ ಪ್ರಕರಣ ತನಿಖೆ ಕೈಗೊಂಡ ಪೋಲಿ ಸಿಬ್ಬಂದಿಗಳು ಆರೋಪಿತರಾದ ಎ1 ತಂದೆ ಮಡಿವಾಳರ ಈರಪ್ಪ ವಯ 28, ಉ : ಚಾಲಕ ಸಾ : ಹಿರೇ ಕಾಸನಕಂಡಿ ತಾ : ಕೊಪ್ಪಳ ಜಿಲ್ಲಾ,02, ಹನುಮಪ್ಪಕಾಟ್ರಾಳ್ಳಿ ವಯ 35, ಜಾತಿ ಉಪ್ಪಾರ್ ಕೂಲಿ ಕೆಲಸ ಹೊಸ ಹಿರೇ ಕಾಸನಕಂಡಿ ತಾಲೂಕು ಜಿಲ್ಲೆ ಕೊಪ್ಪಳ ರವರನ್ನು ವೈಜ್ಞಾನಿಕ ವಿಧಾನಗಳ ಮುಖಾಂತರ ವಿಚಾರಣೆ ಮಾಡಿ ದಸ್ತಗಿರಿ ಮಾಡಿ ಸದರಿಯವರಿಂದ ಈ ಪ್ರಕರಣಕ್ಕೆ ಹಾಗೂ ಜೂನ್ 2022 ರಲ್ಲಿ ನಡೆದ ಆಗಕೇರ ಗ್ರಾಮದ ಶ್ರೀ ವೆಂಕಟೇಶ್ವರ ಬಾರ್ ಕಳ್ಳತನ ಪ್ರಕರಣದಲ್ಲಿ ನಗದುಹಣ 140000=00ಮದ್ಯ ರೂ, 67336=00 ಹಾಗೂ 41800=00 ರೂ ಬೆಲೆಬಾಳುವ ಮೋಟಾರ್ ಸೈಕಲ್ ಮತ್ತು ಕಂಪ್ಯೂಟರ್ ಮಾನಿಟರ್ ಒಟ್ಟು 2,49,136=00 ರೂ ಮೌಲ್ಯ ಉಳ್ಳವುಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ.
ಮೇಲ್ಕಂಡ ರಾತ್ರಿ ಕನ್ನಕಳವು ಪ್ರಕರಣವನ್ನು ಭೇದಿಸಲು ಮಾನ್ಯ ಶ್ರೀ ಅರುಣಾoಸ್ಸು ಗಿರಿ ಐಪಿಎಸ್ ಜಿಲ್ಲಾ ಪೊಲೀಸ್ ಅಧಿಕ್ಷಕರ ಕೊಪ್ಪಳ ಶ್ರೀ ಶರಣಬಸಪ್ಪ ಸುಬೇದಾರ್ ಡಿ ಎಸ್ ಪಿ ಕೊಪ್ಪಳ ರವರ ಮಾರ್ಗದರ್ಶನದಲ್ಲಿ ಶ್ರೀ ಮಹಾಂತೇಶ್ ಸಜ್ಜನ್ ವೃತ್ತ ನಿರೀಕ್ಷಕರು ಕೊಪ್ಪಳ ಗ್ರಾಮೀಣ ವೃತ್ತ ನೇತೃತ್ವದಲ್ಲಿ ಶ್ರೀ ಅಮರೇಗೌಡ, ಪಿಎಸ್ಐ (ಕಾ&ಸು) ಮುನಿರಾಬಾದ್ ಶ್ರೀ ಎಸ್ ಪಿ ನಾಯಕ್, ಪಿಎಸ್ಐ ತನಿಖೆ ಮುನಿರಾಬಾದ್ ಮತ್ತು ಸಿಬ್ಬಂದಿಯವರಾದ ಶ್ರೀ ಕೃಷ್ಣ ವಿ,ಎ ಎಸ್ ಐ ಶ್ರೀ ವಿನೋದಪ್ಪ ಎ ಎಸ್ ಐ ಶ್ರೀ ಮಹೇಶ್ ಸಜ್ಜನ್, ಶ್ರೀ ಅಶೋಕ, ಶ್ರೀ ಅಂಜನಪ್ಪ,ಶ್ರೀ ಮಾರುತಿ,ಶ್ರೀ ಶಿವಪುತ್ರಪ್ಪ, ಶ್ರೀ ಮಹಮ್ಮದ್ ರಫಿ,ಶ್ರೀ ಮಂಜುನಾಥ,ಶ್ರೀ ಹನುಮೇಶ,ಶ್ರೀ ಮಂಜುನಾಥ,ಶ್ರೀ ಶರಣಪ್ಪ ಚಾಲಕರಾದ ಶ್ರೀ ಶಿವಕುಮಾರ್,ಶ್ರೀ ಚಂದ್ರಶೇಖರ,ಶ್ರೀ ವೆಂಕಟೇಶ್ವರ ಅವರು ಶ್ರಮಿಸಿದ್ದು ಕಳ್ಳತನವಾದ 36 ಗಂಟೆ ಒಳಗಾಗಿ ಆರೋಪಿತರನ್ನು ಪತ್ತೆ ಮಾಡಿ ಎರಡು ಕಳ್ಳತನ ಪ್ರಕರಣವನ್ನು ಭೇದಿಸಿದ ಬಗ್ಗೆ ಮಾನ್ಯ ಎಸ್ ಪಿ ಕೊಪ್ಪಳ ರವರು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ..

ವರದಿ. ಮಂಜುನಾಥ್ ದೊಡ್ಡಮನಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;