ಸಿದ್ದಾಪುರ ಸ.ಹಿ.ಪ್ರಾ ಶಾಲೆ ಹಿಂಭಾಗದಲ್ಲಿರುವ ಸಾರ್ವಜನಿಕರ ರಸ್ತೆಯನ್ನು ದುರಸ್ತಿಗೊಳಿಸಲು ಆಗ್ರಹ
ಕಾನ ಹೊಸಹಳ್ಳಿ :- ಸಮೀಪದ ಗುಂಡುಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ, ಸಿದ್ದಾಪುರ ಗ್ರಾಮದ ಸಹಿಪ್ರಾ ಶಾಲೆಯ ಹಿಂಭಾಗದಲ್ಲಿರುವ ಸಾರ್ವಜನಿಕರು ಹಾಗೂ ವಾಹನ ಗಳು ಓಡಾಡುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರಿಂದ ಆಗ್ರಹ.ಸುಮಾರು ವರ್ಷಗಳಿಂದ ಈ ರಸ್ತೆಯನ್ನು ನಿರ್ಮಿಸಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಸಿದ್ದಾಪುರ ಗ್ರಾಮಸ್ಥರಿಂದ ಮನವಿ ಮಾಡಲಾಗಿದ್ದು ಯಾವುದೇ ತರಹದ ಪ್ರಯೋಜನವಾಗಿಲ್ಲ. ಈ ರಸ್ತೆಯು ತಗ್ಗು ಗುಂಡಿ ಗಳಿಂದ ಬಿದ್ದಿದ್ದು. ಮಳೆಯ ನೀರು ಹಾಗೂ ಸಾರ್ವಜನಿಕರ ಬಚ್ಚಲು ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಸಾರ್ವಜನಿಕರಿಗೂ ಹಾಗೂ ವಾಹನಗಳ ಸಂಚಾರಕ್ಕೆ ತುಂಬಾ ತೊಂದರೆಯಾಗಿರುತ್ತದೆ ಎಂದು ಸುಮಾರು ಬಾರಿ ಪತ್ರಿಕೆಯಲ್ಲಿ ಪ್ರಕಟ ಮಾಡಲಾಗಿದೆ, ಸಂಬಂಧಪಟ್ಟ ಅಧಿಕಾರಿಗಳಿಗೂ ಸಹ ತಿಳಿಸಲಾಗಿದೆ ಆದರೂ ಕೂಡ ಅಧಿಕಾರಿಗಳು ಈವರೆಗೂ ಈ ರಸ್ತೆಯನ್ನು ದುರಸ್ತಿಗೊಳಿಸಲು ಮುಂದಾಗುತ್ತಿಲ್ಲ. ಈ ರಸ್ತೆಯ ಕಾಮಗಾರಿ ಮಾಡದಿರಲು ಕಾರಣವೇನು ಎಂಬುದು ಸಹ ಗೊತ್ತಾಗುತ್ತಿಲ್ಲ.ಸುಮಾರು ಜನರು ಈ ರಸ್ತೆಯಲ್ಲಿ ಬಿದ್ದು ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುವ ಉದಾಹರಣೆಗಳಿವೆ. ನಂತರ ಶಾಲೆಯ ಕಾಂಪೌಂಡ್ ಹಿಂಭಾಗದಲ್ಲಿ ಕಸದ ರಾಶಿಗಳನ್ನು ಕೆಲವು ಜನರು ಹಾಕಿರುತ್ತಾರೆ. ಬೀಸುವ ಗಾಳಿಗೆ ಕಸ ದಾರಿಗೆ ಬಂದು ಕಣ್ಣಿಗೆ ಕಾಣದಂತೆ ಕೆಲವು ವಿಷ ಜಂತುಗಳು ಸಾರ್ವಜನಿಕರು ಓಡಾಡುವ ದಾರಿಗೆ ಬರುತ್ತವೆ. ಇಲ್ಲಿನ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಸ್ಥಳೀಯ ಸದಸ್ಯರಿಗೂ ಕೂಡ ತಿಳಿಸಲಾಗಿದೆ ಆದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಅತಿ ಶೀಘ್ರದಲ್ಲಿ ರಸ್ತೆಯ ಕಾಮಗಾರಿಯನ್ನು ಮಾಡಿಸಿ, ಇಲ್ಲಿ ಹಾಕಿರುವ ಕಸದ ರಾಶಿಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಗ್ರಾಮಸ್ಥರಿಂದ ಆಗ್ರಹ.
ಈ ರಸ್ತೆಯ ಕಾಮಗಾರಿಯನ್ನು ಮಾಡಲು ವಿಳಂಬ ಮಾಡುವುದರಿಂದ ಸಿದ್ದಾಪುರ ಗ್ರಾಮಸ್ಥರು ಅತಿ ಶೀಘ್ರದಲ್ಲಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ
ಡಿ.ಎಂ.ಈಶ್ವರಪ್ಪ ದಲಿತ ಮುಖಂಡ ಹಾಗೂ ಪತ್ರಕರ್ತ ಸಿದ್ದಾಪುರ,

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
