ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಅನ್ನಪೂರ್ಣಮ್ಮ ರುದ್ರಯ್ಯ ಅವಿರೋಧ ಆಯ್ಕೆ…!!!

ಗ್ರಾ.ಪಂ.ಉಪಾಧ್ಯಕ್ಷರ ಚುನಾವಣೆ , ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಅನ್ನಪೂರ್ಣಮ್ಮ ರುದ್ರಯ್ಯ ಅವಿರೋಧ ಆಯ್ಕೆ.
ಹ.ಬೊ. ಹಳ್ಳಿ. ಕಡಲ ಬಾಳು ಗ್ರಾ. ಪಂ.ಉಪಾಧ್ಯಕ್ಷರ ಸ್ಥಾನವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ಅನ್ನಪೂರ್ಣಮ್ಮ ರುದ್ರಯ್ಯ ಇವರು ಮಾನ್ಯ ತಾಲೂಕ್ ತಹಶೀಲ್ದಾರ್ ಅವರ ಸಮ್ಮುಖದಲ್ಲಿ ಸರ್ವಾನುಮತದಿಂದ ಅವಿರೋಧವಾಗಿ, ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿಯ ತಾಲೂಕು ಮಂಡಲ ಪ್ರಧಾನ ಕಾರ್ಯದರ್ಶಿ ಬ್ಯಾಟಿ ನಾಗರಾಜ್, ಮಾಧ್ಯಮ ದವರೊಂದಿಗೆ, ಮಾತನಾಡಿ, ಈ ನಮ್ಮ ಗ್ರಾಫಂ 16 ಜನ ಸದಸ್ಯರಿಂದ ಕೂಡಿದ್ದು, ಈ ಎರಡು ವರ್ಷದ ಅವಧಿಗೆ ಉಪಾಧ್ಯಕ್ಷರ ಮೀಸಲಾತಿ ಸಾಮಾನ್ಯ ಮಹಿಳೆ ಬಂದಿದ್ದು, ಅದರಂತೆ ಎಲ್ಲ ಹಿರಿಯರ ಮುಖಂಡರು ನಮ್ಮ ಗ್ರಾಫಂ ಸದಸ್ಯರು, ಜೊತೆ ಮಾತುಕತೆಯಾಗಿ ಎರಡು ವರ್ಷದ ಅವಧಿಯಲ್ಲಿ ಮೂರು ಜನ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು. ಎಂದು ತೀರ್ಮಾನಿಸಲಾಗಿತ್ತು ‌. ಸಂದರ್ಭ ಬಂದಾಗ ಎಲ್ಲರೂ ಸೇರಿಕೊಂಡು ಒಂದೊಂದು ಅವಧಿ ಅಂದರೆ 10 ತಿಂಗಳ ಅವಧಿಯನ್ನು ನೇಮಕ ಮಾಡಿಕೊಂಡು ನಮ್ಮ ಹಿರಿಯರ ಮಾತಿನಂತೆ ಎಲ್ಲರ ಸಹ ಮತದೊಂದಿಗೆ, ಮೂರನೇ ಅವಧಿಗೆ ಉಪಾಧ್ಯಕ್ಷ ಸ್ಥಾನಕ್ಕೆಸಾಮಾನ್ಯ ಮಹಿಳೆ ಬಂದಿದ್ದು, ಅದರಂತೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ,ಶ್ರೀಮತಿ ಅನ್ನಪೂರ್ಣಮ್ಮ ರುದ್ರಯ್ಯ ಇವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಎಲ್ಲಾ ಸದಸ್ಯರು ಮತ್ತು ನಮ್ಮ ಪಕ್ಷದ ಎಲ್ಲಾ ಮುಖಂಡರಿಗೂ ನನ್ನ ಅಭಿನಂದನೆಗಳು ಸಲ್ಲಿಸುತ್ತೇನೆ. ನಮ್ಮ ಕಡಲ ಬಾಳು ಗ್ರಾ. ಪಂ. ಈ ಹಿಂದೆ ಸುಮಾರು ವರ್ಷಗಳ ಕಾಲ ಬಿಜೆಪಿ ಅಧಿಕಾರ ಪಡೆದು ಕೈಗೊಳ್ಳಬೇಕೆಂದು 2015 ರಿಂದ ಸತತವಾಗಿ ಎರಡನೇ ಬಾರಿಗೆ ಬಿಜೆಪಿಯ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೆಲ್ಲ ನಮ್ಮ ಬಿ.ಜೆ.ಪಿ.ಯ ನಿಷ್ಠಾವಂತ ಕಾರ್ಯಕರ್ತರು, ಪಕ್ಷದ ಮುಖಂಡರು, ಪರಿಶ್ರಮದಿಂದ ಈ ಸ್ಥಾನಕ್ಕೆ ಬರಲು ಅವಕಾಶ ಸಿಕ್ಕಿದೆ ಎಂದು ಹೇಳಿದ ರು. ಈ ವೇಳೆಯಲ್ಲಿ ಕಂದಾಯ ಇಲಾಖೆಯ, ಉಪತಹಸಶೀಲ್ದಾರ ರಾದ ಶ್ರೀ ಅನ್ನದಾನೇಶ್ವರ, ಕಂದಾಯ ನಿರೀಕ್ಷಕರದ, ರಾಜು ಸ್ವಾಮಿ , ಗ್ರಾಮ ಲೆಕ್ಕಾಧಿಕಾರಿ, ಮಂಜುನಾಥ, ಗ್ರಾ.ಪಂ. ಅಧ್ಯಕ್ಷರಾದ ಚಲವಾದಿ ಶಾಂತಮ್ಮ ನಾಗರಾಜ್, ಹಾಗೂ ಸದಸ್ಯರಾದ, ದೊಡ್ಡ ಬಸವರಾಜ, ಕರ್ಕಿಹಳ್ಳಿ ಸಂತೋಷ, ಒಂಟಿಗೋಡಿ ವೀರಪ್ಪಣ್ಣ, ಮಾಜಿ ಅಧ್ಯಕ್ಷ ಛಲವಾದಿ ರಮೇಶ, ಅನ್ನಪೂರ್ಣಮ್ಮ, ರಾಮಣ್ಣ, ಶ್ರೀಮತಿ ಶಾಂಭವಿ ವಿಶ್ವನಾಥ್,, ಲತಾ ರಾಜಕುಮಾರ್, ಬಿಜೆಪಿ ಪಕ್ಷದ ಮುಖಂಡರಾದ, ಬಾರಿ ಕರ ಬಸವರಾಜ್, ಕೊಟ್ರೇಶ್, ಸಣ್ಣ ಕೊಟ್ರಗೌಡ್ರು, ಪುಟಾಣಿ ಹಾಲಪ್ಪ, ಮಾಜಿ ಗ್ರಾ.ಪಂ. ಸದಸ್ಯ, ರೂಪ ಶಶಿಧರ್, ಗವಿಸಿದ್ದಯ್ಯ, ಸಕ್ರಪ್ಪ, ಚಂದ್ರಪ್ಪ, ರುದ್ರೇಶ್ ಯುವಮೋರ್ಚಾ ಬಿಜೆಪಿ. ಎಸ್ ಎಸ್ ಎಮ್ ಕೊಟ್ರೇಶ, ಎ.ಎಂ. ನಾಗರಾಜ್. ಶಿಕಾಣಿ ಚಪ್ಪರದ ಬಸವರಾಜ್, ಚಲವಾದಿ ನಾಗರಾಜ್, ಮತ್ತು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಪಾಲ್ಗೊಂಡಿದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend