;

ಕೂಲಿಯಾಳುಗಳ ಕೊರತೆ ನೀಗಿಸಿ ಖರ್ಚು ತಗ್ಗಿಸಿದ ಸೈಕಲ್ ಕುಂಟೆ…!!!

ಕೂಲಿಯಾಳುಗಳ ಕೊರತೆ ನೀಗಿಸಿ ಖರ್ಚು ತಗ್ಗಿಸಿದ ಸೈಕಲ್ ಕುಂಟೆ

ತಾಲೂಕಿನ ಚಿರತಗುಂಡು ಗ್ರಾಮದ ರೈತರಾದ ಪಂಪಾಪತಿ ಅವರ ಹೊಲದಲ್ಲಿ ಬೆಳೆಗಳ ಕಳೆ, ಕಸ ತೆಗೆಯಲು ಕೂಲಿಯಾಳುಗಳ ಕೊರತೆ ಹಿನ್ನೆಲೆ ರೈತರ ಸೈಕಲ್‌ ಗಾಲಿ ಎಡೆ ಕುಂಟೆಗೆ ಐದು ವರ್ಷಗಳಿಂದ ಮೊರೆ ಹೋಗುತ್ತಿದ್ದಾರೆ. ಇದು ಸರಳ ಮತ್ತು ಸುಲಭ ವಿಧಾನ ಕೂಡ ಹೌದು. ಹೊಲದಲ್ಲಿ ವಿವಿಧ ರೀತಿಯ ಬೆಳೆ, ಜೋಳ, ಶೇಂಗಾ, ಟೊಮೊಟೊ, ರಾಗಿ ಇತ್ಯಾದಿ ಬೆಳೆಗಳಲ್ಲಿ ಕಸ ತೆಗೆಯಲು ಕೂಲಿಯಾಳು ಕೊರತೆ ಎದುರಾಗಿದೆ. ಪ್ರತಿ ಕೂಲಿಯಾಳುವಿಗೆ 200 ರಿಂದ 250 ಕೂಲಿ ಕೊಡುವುದು ರೈತರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಸರಿಯಾದ ಸಮಯಕ್ಕೆ ಕೂಲಿಯಾಳುಗಳು ಸಹ ಲಭ್ಯವಾಗುವುದಿಲ್ಲ. ಈ ಹಿನ್ನೆಲೆ ರೈತನ ಮನೆಯಲ್ಲಿ ಇದ್ದಂತಹ ಸೈಕಾಲನ್ನು ಬಳಸಿ ಸೈಕಲ್‌ ಎಡೆ ಕುಂಟೆಯನ್ನು ತಯಾರಿಸಿದ್ದಾನೆ, ಇದನ್ನು ಬಳಸಿ ಹೊಲದಲ್ಲಿನ ಬೆಳೆಗಳ ನಡುವೆ ಇರುವ ಕಳೆ, ಕಸವನ್ನು ತೆಗೆಯಬಹುದು. ಈ ಕುಂಟೆ ಹಗುರವಾಗಿದ್ದು, ಒಬ್ಬರೆ ಇದನ್ನು ನಿರ್ವಹಿಸಲು ಸಾಧ್ಯವಿದೆ. ಸರಳ, ಸುಲಭವಾಗಿ ಇದರಿಂದ ಕಳೆ ತೆಗೆಯಬಹುದು. ಇದನ್ನು ಒಬ್ಬರೇ ಮುಂದೆ ದಬ್ಬಿಕೊಂಡು ಹೋಗಬಹುದು. ಬಳಸಲು ಈ ಮಾದರಿ ತೀರಾ ಸುಲಭವಾಗಿದೆ. ಕೃಷಿ ಚಟುವಟಿಕೆಯ ವೆಚ್ಚವೂ ದುಬಾರಿಯಾಗಿದೆ. ದುಬಾರಿ ವೆಚ್ಚದಿಂದ ಪಾರಾಗಲು ಇಂತಹ ಹೊಸ ಪ್ರಯೋಗ ಕೈ ಹಿಡಿದಿದೆ. ಸೈಕಲ್‌ ಎಡೆಕುಂಟೆ ಬಳಸಿದರೆ, ನಾಲ್ಕು ತಾಸಿನಲ್ಲಿ ಒಂದು ಎಕರೆ ಹೊಲದಲ್ಲಿ ಎಡೆ ಹೊಡೆಯಬಹುದು ಎಂದು ಪಂಪಾಪತಿ ರೈತ ಹೇಳಿದ್ದಾರೆ. ತಮ್ಮ ಎರಡು ಎಕರೆ ಪ್ರದೇಶದಲ್ಲಿ ಜೋಳ ಹಾಗೂ ಟೊಮೊಟೊ, ಶೇಂಗಾ, ರಾಗಿ ಬೆಳೆಯಲ್ಲಿ ಹಸಿ ಕಸ ತೆಗೆಯಲು ಈ ಯಂತ್ರ ಸುಲಭವಾಗಿದೆ. ನಾಲಕ್ಕು ತಾಸಿನಲ್ಲಿ ಒಂದು ಎಕರೆ ಕಸ ತೆಗೆಯಬಹುದು ಎಂದು ತಿಳಿಸಿದರು.

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;