ಹೆಣ್ಣಿನ ನೋವು ಹತಾಶೆ ಅನ್ಯಾಯಗಳನ್ನು ಸಾಹಿತ್ಯ-ನಾಟಕಗಳ ಮೂಲಕ ಹೊರ ಹಾಕಬೇಕು: ಮಂಡ್ಯ ರಮೇಶ್
ಹೊಳಲು : ರಂಗಭೂಮಿ ಚಾರಿತ್ರಿಕವಾದ ಮಾನವ ವಿಜ್ಞಾನವಾಗಿದ್ದು, ಬದುಕಿನ ಎಲ್ಲ ನೋವು ನಲಿವುಗಳನ್ನು ಸಮರ್ಥವಾಗಿ ಕಟ್ಟಿಕೊಡುವ ಶಕ್ತಿ ಹೊಂದಿದೆ ಎಂದು ಖ್ಯಾತ ರಂಗಕರ್ಮಿ ಮಂಡ್ಯ ರಮೇಶ್ ಅಭಿಪ್ರಾಯಪಟ್ಟರು. ಅವರು ಇಲ್ಲಿನ ಸ್ವಾಮಿ ವಿವೇಕಾನಂದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ರಂಗ ಸಂವಾದದಲ್ಲಿ ಮಾತನಾಡಿದರು.
ಎಲ್ಲರ ಬದುಕಿನಲ್ಲೂ ನೋವು ಅವಮಾನಗಳು ಸಾಮಾನ್ಯ. ಎಲ್ಲ ಅವಮಾನ ಅನುಮಾನಗಳನ್ನ ದಾಟಿ ಸನ್ಮಾನ ಪಡೆದುಕೊಳ್ಳುವುದೇ ಬದುಕು ಎಂದರು. ತಾಯಿ ಮಗುವಿಗೆ ಅತೀ ಹತ್ತಿರದ ಸಂಬಂದಿ ಆಗಿದ್ದು, ಮಗುವಿಗೆ ಒಳ್ಳೆ ಸಂಸ್ಕಾರ ನೀಡಲು ಮಹಿಳೆಯರು ಸಾಹಿತ್ಯದ, ರಂಗಭೂಮಿಯ ಒಲವು ಬೆಳಸಿಕೊಳ್ಳಬೇಕು. ಆ ಮೂಲಕ ತಮ್ಮ ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಸಲಹೆ ನೀಡಿದರು.
ರಂಗಭೂಮಿ ನಂಬಿದವರನ್ನು ಎಂದೂ ಕೈಬಿಟ್ಟಿಲ್ಲ. ಒಳ್ಳೆಯ ಚಾರಿತ್ರ್ಯ, ಭಾಷೆಯ ಶುದ್ಧಿ ಹಾಗೂ ಬದುಕಿನ ಶುದ್ಧಿಗೆ ರಂಗಭೂಮಿ ಒಳ್ಳೆಯ ವೇದಿಕೆ ಎಂದರು.
ಕಾಲೇಜಿನ ವತಿಯಿಂದ ಮಂಡ್ಯ ರಮೇಶ್ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಸಣ್ಣ ನೀಲಪ್ಪ, ಪ್ರಶಾಂತ್, ಮಲ್ಲಯ್ಯ, ಪರಶುರಾಮ ನಾಗೋಜಿ, ವೀರೇಶ್ ಇದ್ದರು…

ವರದಿ. ಅಜಯ್ ಛಲವಾದಿ. ಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
