ಕರ್ತವ್ಯಕ್ಕೆ ಹೋಗುವ ಮುನ್ನವೇ ಬಸ್ ನಿಲ್ದಾದಲ್ಲಿ ಅಧಿಕಾರಿಯೊಬ್ಬ ಮದ್ಯ ಸೇವಿಸಿ ಮತ್ತಿನಲ್ಲಿ ತೇಲಾಡುವ ದೃಶ್ಯ ಕಂಡು ಬಂದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮಪಂಚಾಯಿತಿ ಕಚೇರಿಯ ಅಭಿವೃದ್ಧಿ ಅಧಿಕಾರಿ ಎಸ್.ಹನುಮಂತಕುಮಾರ್ ಗ್ರಾಪಂ ಕಚೇರಿಗೆ ಕರ್ತವ್ಯಕ್ಕೆ ಹೋಗಲು ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಶನಿವಾರ ಬೆಳಗ್ಗೆ 11-15ರ ಸಮಾರಿಲ್ಲಿ ಮದ್ಯ ಸೇವಿಸಿ ಬಸ್ ನಿಲ್ದಾಣದಲ್ಲಿ ಮಲಗಿರುವುದನ್ನು ಕಂಡು ಎಬ್ಬಿಸಿದ್ದಾರೆ ನಂತರ ಅಲ್ಲೇ ತೂರಾಡುತ್ತಿರುವುದನ್ನು ಕಂಡು ಬಿಟ್ಟು ಹೋಗಿದ್ದಾರೆ.
ಅಮಾನತು
ಘನತ್ಯಾಜ್ಯ ನಿರ್ವಹಣೆ, ಕಸ ಸಂಗ್ರಹಣೆ ವಾಹನ ಬಳಕೆ ಮಾಡದೆ , ಜನಸಂಜೀವಿನ ಕ್ರಿಯಾಜನೆ ತಯಾರಿಸದೆ ಇರುವುದು, ಪದೇ ಪದೇ ಕರ್ತವ್ಯಕ್ಕೆ ಗೈರು, ಸೇರಿದಂತೆ ವಿವಿಧ ಕಾರಣ ಕೇಳಿ 17-9-2022ದು ಕಾರಣ ಕೇಳಿ ತಾಲೂಕು ಪಂಚಾಯತ್ ಕಾರ್ಯಾಲಯದಿಂದ ನೋಟಿಸ್ ಜಾರಿಮಾಡಿದರೂ ಉತ್ತರ ನೀಡದೆ ಪೂರ್ವಾನುಮತಿ ಪಡೆಯದೆ ಪದೇ ಪದೇ ಅನಧಿಕೃತವಾಗಿ ಗೈರು ಹಾಜರಿಯಾಗಿರುವ ಎಸ್.ಹನುಮಂತಕುಮಾರ್ ಇವರನ್ನು ಅಂದಿನ ಜಿಪಂ ಸಿಇಒ ಡಾ.ಕೆ.ನಂದಿನಿದೇವಿ 23-9-2022 ರಂದು ಅಮಾನತು ಮಾಡಲಾಗಿತ್ತು.
ಅಮಾನತು ತೆರವು
ಪಿಡಿಒ ಹನುಮಂತಕುಮಾರ್ ಕರ್ತವ್ಯ ಲೋಪದಡಿಯಲ್ಲಿ ಅಮಾನತ್ತು ಆಗಿ ಒಂದೇ ತಿಂಗಳಿಗೆ ಮತ್ತೆ ಅದೇ ಗ್ರಾಪಂ ಕಚೇರಿಗೆ ವಿಚಾರಣೆಯನ್ನು ಕಾಯ್ದಿರಿಸಿ ದಿನಾಂಕ 25-10-2022ರಂದು ಅಮಾನತ್ತನ್ನು ತೆರವುಗೊಳಿಸಿ ಬೇಡರಡ್ಡಿಹಳ್ಳಿ ಗ್ರಾಪಂ ಕಚೇರಿಗೆ ಮರುಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ ಕೂಡಲೆ ನೌಕರ ಕರ್ತವ್ಯಕ್ಕೆ ಹಾಜರಿಯಾಗುವಂತೆ ಜಿಪಂ ಸಿಇಒ ಡಾ.ಕೆ.ನಂದಿನಿದೇವಿ ಅಮಾನತ್ತು ಆದೇಶ ಹಿಂಪಡೆದ ಅಮಾನತ್ತುಗೊಂಡ ಗ್ರಾಪಂ ಕಚೇರಿಗೆ ನಿಯೋಜನೆ ಮಾಡಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆ ಮಾಡಿದೆ.
ಗ್ರಾಮಸ್ಥರ ದೂರು.
ಬೇಡರಡ್ಡಿಹಳ್ಳಿ ಗ್ರಾಪಂ ಕಾರ್ಯಾಲಕ್ಕೆ ಪಿಡಿಒ ಎಸ್,ಹನುಂತಕುಮಾರ್ ಕರ್ತವ್ಯಕ್ಕೆ ಸರಿಯಾಗಿ ಬರುತ್ತಿಲ್ಲ ಹಾಗೂ ಮದ್ಯ ಸೇವನೆ ಮಾಡಿ ಬರುತ್ತಾರೆ ಕೂಡಲೆ ಪಿಡಿಒ ವರ್ಗಾವಣೆ ಮಾಡಿ ಬೇರೆ ಪಿಡಿಒ ನಿಯೋಜನೆ ಮಾಡುವಂತೆ ಗ್ರಾಮಸ್ಥರು ದಿನಾಂಕ 6-1-2023 ರಂದು ತಾಲೂಕು ಪಂಚಾಯತ್ ಕಾರ್ಯಾಲಯಕ್ಕೆ ಮನವಿ ನೀಡಿ ಇನ್ನು ಒಂದು ದಿನ ಕಳೆದಿಲ್ಲ ಕರ್ತವ್ಯಕ್ಕೆ ಹೋಗುವ ಮುನ್ನವೇ ನಗರ ಖಾಸಗಿ ಬಸ್ ನಿಲ್ದಾಣದಲ್ಲಿ ಮದ್ಯಸೇವೆ ಮಾಡಿ ಮಲಗಿರುವುದು ಗ್ರಾಮಸ್ಥರನ್ನು ಕೆರಳಿಸುವಂತೆ ಮಾಡಿದೆ.
ಹುದ್ದೆಯ ಹೇಸರೇ ಗ್ರಾಮಾಭಿವೃದ್ಧಿ ಅಧಿಕಾರಿ ಹುದ್ದೆಯ ಹೆಸರಿಗೆ ಕಳಂಕ ಬರುವಂತೆ ಕರ್ತವ್ಯ ನಿರ್ವಹಿಸುವ ಅಧಿಕಾರಿ ಇನ್ನು ಗ್ರಾಮಗಳ ಅಭಿವೃದ್ಧಿ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆಗಳು ಕಾಡದೊಗಿದೆ.
ಈಗಾಗಲೆ ಚಳ್ಳಕೆರೆ ತಾಲೂಕಿನ ಗಡಿ ಭಾಗಕ್ಕೆ ಹೊಂದಿಕೊoಡ ಹಳ್ಳಿಗಳು ಸಾಷಕ್ಟು ಅಭಿವೃದ್ಧಿಯಿಂದ ವಂಚಿತರಾಗಿದ್ದು ಗ್ರಾಮಗಳ ಸಮಸ್ಯೆ ಕೇಳವ ಜನಪ್ರತಿನಿಗಳು ಇಲ್ಲವಾಗಿದ್ದು ಈಗ ಅಧಿಕಾರಿಗಳೂ ಸಹ ಸರಿಯಾಗಿ ಕಚೇರಿಗೆ ಬರದೆ ಕುಡಿದು ತೇಲಾಡಿದರೆ ಹಳ್ಳಿಯ ಜನರ ಸಮಸ್ಯೆ ಕೇಳುವವರು ಯಾರು ಎಂಬ ಪ್ರಶ್ನೆಗಳು ಜನರನ್ನು ಕಾಡುವಂತಾಗಿದೆ.
ಕೂಡಲೆ ಗ್ರಾಮಗಳ ಅಭಿವೃದ್ಧಿಗೆ ಉತ್ತಮ ಆಡಳಿತ ನಡೆಸುವ ಅಧಿಕಾರಿಯನ್ನು ನೇಮಕ ಮಾಡುವಂತೆ ಗ್ರಾಮಸ್ಥರು ಒತ್ತಾಸಿದ್ದರೆ…

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
