ಬೀದರ ಉತ್ಸವದ ಸಿದ್ಧತೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು
ಬೀದರ : ಜನವರಿ 7 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಬೀದರ ಉತ್ಸವದ ಸಿದ್ಧತೆ ಕುರಿತು ಶುಕ್ರವಾರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು ಪರಿಶೀಲನೆ ನಡೆಸಿದರು.
ಅವರು ಉತ್ಸವ ನಡೆಯಲಿರುವ ಬೀದರ ಕೋಟೆಯೊಳಗಡೆ ಇರುವ ಮುಖ್ಯ ವೇದಿಕೆ ಮತ್ತು ಇತರೆ ಸ್ಥಳಗಳನ್ನು ಪರಿಶೀಲನೆ ನಡೆಸಿ ಸಂಬಧಿಸಿದ ಅಧಿಕಾರಿಗಳಿಂದ ಸಿದ್ಧತೆ ಕುರಿತು ಮಾಹಿತಿ ಪಡೆದು ಅಚ್ಚುಕಟ್ಟಾಗಿ ಬೀದರ ಉತ್ಸವವನ್ನು ಮೂರು ದಿನಗಳ ಕಾಲ ಯಾವುದೇ ಸಮಸ್ಯೆಗಳಾಗದಂತೆ ಅಧಿಕಾರಿಗಳು ನಿರ್ವಹಿಸಬೇಕು. ಹೆಚ್ಚಿನ ಜನರು ಬೀದರ ಕೋಟೆ ಒಳಗಡೆ ಈ ದಿನಗಳಂದು ಆಗಮಿಸುತ್ತಿರುವುದರಿಂದ ಪೊಲೀಸ್ ಬಂದೋಬಸ್ತ ಸೇರಿದಂತೆ ಇತರೆ ಕಾರ್ಯಗಳ ಬಗ್ಗೆ ಪರಿಶೀಲಿಸಿದರು..

ವರದಿ. ಸುನಿಲ್ ಮೆಟ್ರಿ, ಬೀದರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
