;

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ (ಪಿ ಎಲ್ ಡಿ) ಬ್ಯಾಂಕ್, ನಿ. ನೂತನ ಕಚೇರಿ ಉದ್ಘಾಟನೆ…!!!

ಕೂಡ್ಲಿಗಿ.ದಿನಾಂಕ,5-1-23 ಶುಕ್ರವಾರ ತಾಲೂಕಿನ ಕೂಡ್ಲಿಗಿ ಪಟ್ಟಣದಲ್ಲಿ ನಡೆದ ಉದ್ದೇಶಿತ ಕೂಡ್ಲಿಗಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ (ಪಿ ಎಲ್ ಡಿ) ಬ್ಯಾಂಕ್, ನಿ. ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಅವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕಷ್ಟ ಸುಖದಲ್ಲಿ ರೈತರ ಜೊತೆಯಾಗಿ ನಾವುಗಳು ಅವರ ಜೊತೆ ನಿಂತು ಸದಾ ಬೆನ್ನೆಲುಬಾಗಿ ಕಾರ್ಯನಿರ್ವಹಿಸಬೇಕಾಗಿದೆ, ಹಾಗೂ ಹಾಗೂ ಈ ಬ್ಯಾಂಕಿನ ಸೌಲಭ್ಯವನ್ನು ಬಡ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ರೈತರನ್ನು ಷೇರುದಾರರನ್ನಾಗಿ ಮಾಡಿಸಿ ,ಬಡ ಜನರಿಗೂ ಅನುಕೂಲವಾಗಲಿ ಎಂದು ಬ್ಯಾಂಕಿನ ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಶ್ರೀ ಶಾರದಾ ಬಾಯಿ, ಉಪಾಧ್ಯಕ್ಷೆ ಶ್ರೀಮತಿ ಶ್ರೀ ರೇಣುಕಾ ದುರುಗೇಶ್,ತಾ.ಪಂ.ಕಾ.ನಿ ಅಧಿಕಾರಿ ವೈ ರವಿಕುಮಾರ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ಗಳಾದ ನಾಗನಗೌಡ, ಸುದರ್ಶನ್ ರೆಡ್ಡಿ, ಹಾಗೂ ಕೂಡ್ಲಿಗಿ ಬಿಜೆಪಿ ಮಂಡಲ ಅಧ್ಯಕ್ಷ ಕೆ ಚನ್ನಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯ ಪಾಪಣ್ಣ, ಭೀಮೇಶ್,ಹೆಚ್.ರೇವಣ್ಣ ಹುರುಳಿಹಾಳು, ಕೆ ವೀರನಗೌಡ, ಹೂಡೇಂ ಪಾಪ ನಾಯಕ, ಪಟ್ಟಣ ಪಂಚಾಯತಿ ಸದಸ್ಯರಾದ ಪಿ ಚಂದ್ರು, ವೆಂಕಟೇಶ್, ಸಿರಿಬಿ ಮಂಜುನಾಥ್, ಡಿಎಸ್ಎಸ್ ಮುಖಂಡ ದುರುಗೇಶ್, ರೈತ ಮುಖಂಡರಗಳು, ಹಾಗೂ ಸಾರ್ವಜನಿಕರು ಹಾಜರಿದ್ದರು..

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;