ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೇಟ್ ಪ್ರಭಲ ಅಕಾಂಕ್ಷಿ ವೈ.ಡಿ.ಅಣ್ಣಪ್ಪನವರ 43ನೇ ವರ್ಷದ ಹುಟ್ಟುಹಬ್ಬ ಆಚರಣೆ…!!!

ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೇಟ್ ಪ್ರಭಲ ಅಕಾಂಕ್ಷಿ ವೈ.ಡಿ.ಅಣ್ಣಪ್ಪನವರ 43ನೇ ವರ್ಷದ ಹುಟ್ಟುಹಬ್ಬ ಆಚರಣೆ..

ಹರಪನಹಳ್ಳಿ:ಯೋಗನರಸಿಂಹ ಸೌಹಾರ್ದ ಬ್ಯಾಂಕಿನ ಅಧ್ಯಕ್ಷ, ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೇಟ್ ಅಕಾಂಕ್ಷಿ ವೈ.ಡಿ.ಅಣ್ಣಪ್ಪನವರ 43ನೇ ವರ್ಷದ ಹುಟ್ಟು ಹಬ್ಬವನ್ನು ತಾಲೂಕಿನ ಅವರ ಸ್ವಗ್ರಾಮ ಅರಸೀಕೆರೆಯಲ್ಲಿ ಅವರ ಸಮಾಜಮುಖಿ ಟ್ರಸ್ಟ್, ಅಭಿಮಾನಿ ಬಳಗ ಹಾಗೂ ಪ್ರಶಾಂತ ಪಾಟೀಲ್ ಅಭಿಮಾನಿ ಬಳಗವತಿಯಿಂದ ಆದ್ದೂರಿಯಾಗಿ ಆಚರಿಸಲಾಗುವುದು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ವೈ.ಡಿ.ಅಣ್ಣಪ್ಪ ಅಭಿಮಾನಿ ಬಳಗ, ಸಮಾಜಮುಖಿ ಟ್ರಸ್ಟ್ ವತಿಯಿಂದ ಸುದ್ದಿಗೋಷ್ಠಿಯಲ್ಲಿ ಪ್ರಶಾಂತ ಪಾಟೀಲ್ ಮಾತನಾಡಿದರು.
ವೈ.ಡಿ.ಅಣ್ಣಪ್ಪರವರು ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಗ್ರಾಪಂ ಸದಸ್ಯರಾಗಿ, ವಿಎಸ್‍ಎಸ್‍ಎನ್ ನಿರ್ದೇಶಕರಾಗಿ, ಯೋಗನರಸಿಂಹ ಸೌಹಾರ್ದ ಬ್ಯಾಂಕಿನ ಅಧ್ಯಕ್ಷರಾಗಿ ಸಾಕಷ್ಟು ಕೆಲಸಗಳನ್ನು ನಿರ್ವಹಿಸಿರುವ ವೈ.ಡಿ.ಅಣ್ಣಪ್ಪನವರು 2023ರ ಚುನಾವಣೆಯಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯು ಆಗಿದ್ದಾರೆ ಎಂದು ತಿಳಿಸಿದರು.
ಕಳೆದ 10ವರ್ಷಗಳಿಂದ ಅವರ ಜನ್ಮದಿನೋತ್ಸವವನ್ನು ಅಭಿಮಾನಿ ಬಳಗದಿಂದ ಆಚರಿಸಲಾಗುತ್ತಿತ್ತು, ಈ ಬಾರಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇಂದು ಅರಸೀಕೆರೆಯ ಕೋಲಶಾಂತೆಶ್ವರ ಮಠದ ಶಾಂತಲಿಂಗದೇಶಿಕೇಂದ್ರ ಸ್ವಾಮಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಚಲನಚಿತ್ರ ನಟಿ ಹರ್ಷಿಕ ಪೂಣಚ್ಚ ನೇತೃತ್ವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿವೆ.
ಅರಸೀಕೆರೆಯವರೇ ಆದ ರಾಷ್ಟ್ರೀಯಮಟ್ಟದ ಡ್ಯಾನ್ಸರ್ ಶಿವಮಣ ಯವರನ್ನು ಗೌರವಿಸಲಾಗುವುದು. ಗಾಯಕರಾದ ಮೇಹಬೂಬ್‍ಸಾಹೇಬ್, ನಜೀರಬಾನು, ಲೋಕೇಶ್, ಮನುಯಾದವ್, ದಿವ್ಯ ರಾಮಚಂದ್ರ, ಪಾಲ್ಗೊಳ್ಳುವರು. ಖ್ಯಾತ ನಿರೂಪಕಿ ಪ್ರತಿಭಾಗೌಡ ಕಾರ್ಯಕ್ರಮ ನಡೆಸಿಕೊಡುವರು.
ವಿವಿಧ ಸಮಾಜದ ಅಧ್ಯಕ್ಷರು, ಮುಖಂಡರು, ಗಣ್ಯರು ಸಮಾರಂಭದಲ್ಲಿ ಭಾಗವಹಿಸುವರು. ಹರಪನಹಳ್ಳಿ ಹಾಗೂ ಅರಸೀಕೆರೆ ಗ್ರಾಮದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೇಡ್ ವಿತರಿಸಲಾಗುವುದು.
ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಅಲ್ ಇಂಡಿಯಾ ಬಾದಷಾ ಕಿಚ್ಚ ಸುದೀಪ್ ಸೇನಾ ಸಮಿತಿಯ ವಿಜಯನಗರ ಜಿಲ್ಲೆಯ ಅಧ್ಯಕ್ಷ ಹಾದಿಮನಿ ಸಂತೋಷ್ ಮತ್ತು ಅವರ ತಂಡದಿಂದ ಅಣ್ಣಪ್ಪನವರಿಗೆ ಸನ್ಮಾನಿಸಿ ಗೌರವಿಸಲಾಗುವುದು.

ಈ ಸಂದರ್ಭದಲ್ಲಿ ವೈ.ಟಿ.ಕೊಟ್ರೇಶ್, ಜೆ.ಪರಶುರಾಮ, ಶಶಿಕುಮಾರ, ಹಾದಿಮನಿ ಸಂತೋಷ್, ನವೀನ್, ಮಹೇಶ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು…

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend