;

ಜನವರಿ 7ಕ್ಕೆ ಹಳೆ ವಿದ್ಯಾರ್ಥಿಗಳ ಸಭೆ…!!!

ಜನವರಿ 7ಕ್ಕೆ ಹಳೆ ವಿದ್ಯಾರ್ಥಿಗಳ ಸಭೆ

ಹೂವಿನಹಡಗಲಿ: ಇಲ್ಲಿನ ಪ್ರತಿಷ್ಠಿತ ಜಿ.ಬಿ.ಆರ್.ಕಾಲೇಜ್ ಜನವರಿ 2023ರಲ್ಲಿ ತನ್ನ ಸುವರ್ಣ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಪ್ರಯುಕ್ತ ಪೂರ್ವಭಾವಿಯಾಗಿ ಹಳೆ ವಿದ್ಯಾರ್ಥಿಗಳ ಸಭೆಯನ್ನು ಶನಿವಾರ 07 ಜನವರಿ 2023ರ ಸಂಜೆ 4 ಗಂಟೆಗೆ ಕಾಲೇಜು ಆವರಣದಲ್ಲಿರುವ ಶ್ರೀ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಪ್ರಾಚಾರ್ಯ ಎಸ್.ಎಸ್.ಪಾಟೀಲ್ ತಿಳಿಸಿದರು. ಈ ಸಭೆಯಲ್ಲಿ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷರಾದ ಅಕ್ಕಿ ಶಿವಕುಮಾರ್, ಕಾಲೇಜ್ ಆಡಳಿತ ಮಂಡಳಿ ಸದಸ್ಯರು ಹಾಗೂ ಹಳೆ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾದ ಅಟವಾಳಗಿ ಕೊಟ್ರೇಶ್ ಅವರು ಭಾಗವಹಿಸಲಿದ್ದಾರೆ. ನಮ್ಮೆಲ್ಲ ಹಳೆ ವಿದ್ಯಾರ್ಥಿಗಳ ಜೀವನದ ಸಂಭ್ರಮದ ಭಾಗವಾಗಿರುವ ಸುವರ್ಣ ಸಂಭ್ರಮ ಯಶಸ್ವಿಯಾಗಲು ಈ ಹಳೆ ವಿದ್ಯಾರ್ಥಿಗಳ ಸಭೆಯಲ್ಲಿ ಎಲ್ಲ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ 9902261970 ಸಂಖ್ಯೆಗೆ ಕರೆ ಮಾಡಬಹುದು..

ವರದಿ. ಅಜಯ್ ಛಲವಾದಿ ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;