ನರಸಿಂಹನಗಿರಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ…!!!

ನರಸಿಂಹನಗಿರಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ

ವಿಜಯನಗರ: ಡಿ,17 ಕೂಡ್ಲಿಗಿ ತಾಲೂಕಿನ ಬೆಳ್ಳಗಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಸಿಂಹನಗಿರಿ ಗ್ರಾಮದ ಎಸ್.ಡಿ.ಬಿ.ಟಿ ಪ್ರೌಢ ಶಾಲೆಯ ಆವರಣದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ತಹಶೀಲ್ದಾರ್ ಟಿ ಜಗದೀಶ್ ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವೈ ರವಿಕುಮಾರ್, ಬೆಳ್ಳಗಟೆ ಗ್ರಾಮ ಪಂಚಾಯಿತಿ ರಾಮಾಂಜನೇಯ ಗಿಡಕ್ಕೆ ನೀರು ಉಣಿಸುವುದರ ಮೂಲಕ ಉದ್ಘಾಟಿಸಿದರು. ಅದಕ್ಕೂ ಮೊದಲು ತಾಲೂಕು ಅಧಿಕಾರಿಗಳು ಕೆಲವು ಕಾಲೋನಿಗಳಿಗೆ ಭೇಟಿ ನೀಡಿ ಅಲ್ಲಿನಾ ಜನರ ವಾಸ್ತವ್ಯ ಹಾಗೂ ಅಲ್ಲಿನ ಜನರ ಸಮಸ್ಯೆಯನ್ನು ಖುದ್ದಾಗಿ ಆಲಿಸಿ ಸಮಸ್ಯೆಗಳ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ ತಿಳಿಸಿ ಪರಿಹರಿಸುವ ತಾಖಿತು ಮಾಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಅರ್ಜಿಯ ಮುಖಾಂತರ ತಹಸೀಲ್ದಾರ್ ಜಗದೀಶ್ ಅವರು ಸ್ವೀಕರಿಸಿದರು. ಒಟ್ಟು 103 ಆರ್ಜಿಗಳು ಸ್ವೀಕೃತವಾಗಿದ್ದು ಸ್ಥಳದಲ್ಲೇ 20 ಅರ್ಜಿಗಳು ಇತ್ಯರ್ಥಗೊಳಿಸಲಾಗಿ ಉಳಿದ 83 ಅರ್ಜಿಗಳು ಬಾಕಿ ಉಳಿದಿವೆ. ನಂತರ ಸರ್ಕಾರದ ಮೂಲಭೂತ ಸೌಕರ್ಯಗಳನ್ನು ಈ ಗ್ರಾಮದ ಎಲ್ಲಾ ಎಸ್ಸಿ ಎಸ್ಟಿ ಹಿಂದುಳಿದ ಸಾರ್ವಜನಿಕರು ಮೂಲಭೂತ ಸೌಕರ್ಯವನ್ನು ಪಡೆಯಬೇಕೆಂದು ಮಾನ್ಯ ತಾಹಶೀಲ್ದಾರ್ ತಿಳಿಸಿದರು. ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಂಧ್ಯಾಸುರಕ್ಷ ವೃದ್ಧಾಪ್ಯ ವೇತನ ವಿಕಲಚೇತನ ಇವೆಲ್ಲವನ್ನು ನೀವು ಪಡೆಯಬೇಕು ಗ್ರಾಮ ಪಂಚಾಯಿತಿ ಸಂಬಂಧಪಟ್ಟ ಮನೆಗಳು ಶೌಚಾಲಯಗಳು ದನದ ಕೊಟ್ಟಿಗೆ ಇವೆಲ್ಲವನ್ನು ಗ್ರಾಮ ಪಂಚಾಯತಿಯಲ್ಲಿ ಅರ್ಜಿಯ ಮುಖಾಂತರ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಕೊಟ್ಟು ನಿಮ್ಮ ಮೂಲಭೂತ ಸೌಕರ್ಯಗಳನ್ನು ಪಡೆಯಬೇಕೆಂದು ತಿಳಿಸಿದರು, ಇದೆ ವೇಳೆ ಆಯಾ ಇಲಾಖೆಯ ಅಧಿಕಾರಿಗಳು ಮಾತನಾಡಿ ಸಂಬಂಧಿಸಿದ ಇಲಾಖೆಯ ಸೌಲತ್ತುಗಳನ್ನು ಪಡೆದುಕೊಳ್ಳಿ ಎಂದು ಸಾರ್ವಜನಿಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ಸಹಾಯಕ ಕೃಷಿ ಸುನೀಲ್ ಕುಮಾರ್, ತಾಲೂಕು ವೈದ್ಯ ಅಧಿಕಾರಿ ಎಸ್.ಪಿ.ಪ್ರದೀಪ್, ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ್ ನಾಯಕ್, ಬಿಸಿಎಂ ಇಲಾಖೆ ಪಂಪಪತಿ, ಗುಡೇಕೋಟೆ ಅರಣ್ಯ ಅಧಿಕಾರಿ ರೇಣುಕಮ್ಮ, ಗುಡೆಕೋಟೆ ಪೋಲೀಸ್ ಠಾಣೆಯ ಪಿಎಸ್‌ಐ ಮಾಲೀಕ್ ಸಾಬ್, ಉಪ ತಹಶೀಲ್ದಾರ್ ಚಂದ್ರಮೋಹನ್, ಬೆಳ್ಳಗಟ್ಟ ಗ್ರಾಮ ಪಂಚಾಯತಿ ಸದಸ್ಯರಾದ ಮಹೇಶ್, ಕವಿತಾ, ಹನುಮೇಶ್, ಭಿಮಕ್ಕ, ಜೈರಾಮ್, ಬೋರಪ್ಪ, ಶರಣಪ್ಪ, ಇಂದ್ರಮ್ಮ, ಜಯಣ್ಣ, ದೊಡ್ಡ ಬೋರಯ್ಯ ಸೇರಿದಂತೆ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯತಿಯ ಸರ್ವ ಸದಸ್ಯರು ಶಾಲೆಯ ಶಿಕ್ಷಕರು, ವಿವಿಧ ಗ್ರಾಮಗಳ ಗ್ರಾಮಸ್ಥರು, ರೈತರು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ವರದಿಗಾರರು : ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend