ಜುಮ್ಮೊಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಿಕಲಚೇತನರ ಪೂರ್ವಭಾವಿ ಸಭೆ
ಕೂಡ್ಲಿಗಿ : ತಾಲೂಕಿನ ಜುಮ್ಮೊಬನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ವಿಕಲಚೇತನರ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಯಿತು. ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯದ ಮಹಾಂತೇಶಯ್ಯ ರವರು ವಿಕಲಚೇತನರ ಕುಂದು ಕೊರತೆಯನ್ನು ಚರ್ಚಿಸಿದರು, ನಂತರ ಪಂಚಾಯತಿ ಸಿಬ್ಬಂದಿಯಾದ ಕಾಮಯ್ಯ ರವರು ವಿಕಲಚೇತನರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಹಾಗೂ ವಿಕಲಚೇತನರ ಕಚೇರಿಯಿಂದ ಸೌಲಭ್ಯಗಳನ್ನು. ವಿಕಲಚೇತನರಿಗೆ ಅರ್ಥಪೂರ್ವಕವಾಗಿ ತಿಳಿಸಿದರು ಈ ವೇಳೆ ವಿಕಲಚೇತನರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕಾಮಗಾರಿ ಕೆಲಸ ನಡೆಯುತ್ತಿದ್ದು ಈ ಕೆಲಸಕ್ಕೆ ಪ್ರತಿಯೊಬ್ಬ ವಿಕಲಚೇತನರು ಇರಬೇಕೆಂದು ತಿಳಿಸಿದ್ದಾರೆ ಆದರೆ ಗ್ರಾಮದಿಂದ ಕೆಲಸ ಮಾಡುವ ಸ್ಥಳಕ್ಕೆ ನಡೆದುಹೋಗುವುದು ತುಂಬಾ ಕಷ್ಟವಾಗಿದೆ ಆದ್ದರಿಂದ ಅಧಿಕಾರಿಗಳು ವಿಕಲಚೇತನರಿಗೆ ನರೇಗಾ ಕೆಲಸಕ್ಕೆ ಹಾಜರಾಗಲು. ವಾಹನವನ್ನು ವ್ಯವಸ್ಥೆ ಮಾಡಬೇಕು ಮಾತನಾಡಿದರು ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಮಹಾಂತೇಶಯ್ಯ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ದುರ್ಗಮ್ಮ ದುರ್ಗಪ್ಪ. ಉಪಾಧ್ಯಕ್ಷರಾದ ತಿಪ್ಪಮ್ಮ ನಾಗರಾಜ್, ಸರ್ವ ಸದಸ್ಯರುಗಳು ಮತ್ತು ವಿಕಲಚೇತನರು ಹಾಗೂ ಊರಿನ ಗ್ರಾಮಸ್ಥರು ಪಂಚಾಯಿತಿ ಸಿಬ್ಬಂದಿಗಳು ಲೈಬ್ರರಿ ಮುಖ್ಯಸ್ಥರು ಇದ್ದರು.

ವರದಿಗಾರರು : ಸಿ ಅರುಣ್ ಕುಮಾರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
