ಸಾರ್ವಜನಿಕ ಶೌಚಾಲಯವನ್ನು ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ.!
ಕೂಡ್ಲಿಗಿ: ಪಟ್ಟಣದ 9 ನೇ ವಾರ್ಡ್‌ನಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ತೆರವುಗೊಳಿಸಿರುವುದನ್ನು ವಿರೋದಿಸಿ ಗುರುವಾರ CITU ಹಾಗೂ CWFI ತೀವ್ರವಾಗಿ ಖಂಡಿಸಿ ಪ್ರಸ್ತುತ ಈ ಶೌಚಾಲಯವನ್ನು ಅಕ್ಕಪಕ್ಕದ ಮೂರು ವಾರ್ಡ್‌ಗಳ ಜನರು ಉಪಯೋಗಿಸುತ್ತಿದ್ದರು, ಸುಮಾರು 50 ರಿಂದ 60 ಲಕ್ಷ ಖರ್ಚುಮಾಡಿ ನಿರ್ಮಿಸಿರುವ ಹೈಟೆಕ್ ಶೌಚಾಲಯವನ್ನು ಏಕಾಏಕಿ ತೆರವುಗೊಳಿಸಿದರು. ಸಾರ್ವಜನಿಕ ಹಣವನ್ನು ಖರ್ಚು ಮಾಡಿ ನಿರ್ಮಿಸಿರುವ ಶೌಚಾಲಯವನ್ನು ತೆರವುಗೊಳಿಸಿ, ವಾರ್ಡ್ ಸಭೆ ಮಾಡದೇ ರಾತ್ರೋರಾತ್ರಿ ತೆರವುಗೊಳಿಸಿದ್ದಾರೆ.

ಬಯಲು ಮುಕ್ತ ಪಟ್ಟಣವನ್ನು ಮಾಡದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮುಗ್ಧ ಜನರ ಜೊತೆ ಆಟ ಆಡುತ್ತಿದ್ದಾರೆ. ಮುಖ್ಯಾಧಿಕಾರಿಯನ್ನು ಈ ಕೂಡಲೇ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕೆಂದು ಸಾರ್ವಜನಿಕರು ಹಾಗೂ ಸಿಎಟಿವ್ ಸಿಡಬ್ಲ್ಯೂ ಕಾರ್ಮಿಕರು ತೀವ್ರವಾಗಿ ಖಂಡಿಸಿ ಒತ್ತಾಯ ಮಾಡಿ. ತಾಹಶೀಲ್ದಾರ್ ಜಗದೀಶ್ ಟಿ ರವರೆಗೆ ಮನವಿ ಪತ್ರ ಸಲ್ಲಿಸಿದರು. ಇದೆ ವೇಳೆ ಸಿಐಟಿ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ, ಟಿ.ಭಾಗ್ಯಮ್ಮ, ಗಂಗಮ್ಮ, ಮಮತಮ್ಮ, ಹನುಮಂತಮ್ಮ, ಮೊಹಮ್ಮದ್ ಸಾಬ್ ಸೇರಿದಂತೆ ಪಟ್ಟಣದ ಮಹಿಳೆಯರು ಕಟ್ಟಡ ಕಾರ್ಮಿಕರು ಮುಂತಾದವರು ಇದ್ದರು.
ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
