ವಿಜಯನಗರ ಜಿಲ್ಲಾ ಪೊಲೀಸ್
ದಿನಾಂಕ 23-11-2022 ರಂದು ಸರ್ಕಾರಿ ಪ್ರೌಢ ಶಾಲೆ, ಟಿ.ಬಿ ಡ್ಯಾಂ ಹೊಸಪೇಟೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ವಿಜಯನಗರ ಜಿಲ್ಲೆಯ ಆಯ್ದ 15 ಪ್ರಾಢ ಶಾಲೆಗಳಲ್ಲಿ 2022-23 ನೇ ಸಾಲಿನ ‘ಸ್ಟುಡೆಂಟ್ ಪೊಲೀಸ್ ಕೆಡೆಟ್’ ಯೋಜನೆಯ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಶ್ರೀ. ಶ್ರೀಹರಿಬಾಬು ಬಿ.ಎಲ್ ಮಾನ್ಯ ಪೊಲೀಸ್ ಅಧೀಕ್ಷಕರು, ವಿಜಯನಗರ ಜಿಲ್ಲೆ ಮತ್ತು ಶ್ರೀ. ಜಿ.ಕೊಟ್ರೇಶ್ ಮಾನ್ಯ ಉಪ ನಿರ್ದೇಶಕರು, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯನಗರ ಜಿಲ್ಲೆ ಮತ್ತು ಶ್ರೀ ವಿಶ್ವನಾಥ ಕುಲಕಣಿ೯ ಪೊಲೀಸ್ ಉಪಾಧೀಕ್ಷಕರು, ಹೊಸಪೇಟೆ ಉಪ ವಿಭಾಗ, ಸಹಾಯಕ ಆಡಳಿತ ಅಧಿಕಾರಿಗಳು ಜಿಲ್ಲಾ ಪೊಲೀಸ್ ಕಛೇರಿ, ವಿಜಯನಗರ , ಸಿ.ಪಿ.ಐ ಟಿ.ಬಿ ಡ್ಯಾಂ ವೃತ್ತ, ಹೊಸಪೇಟೆ, ಆರ್.ಪಿ.ಐ ಡಿ.ಎ.ಆರ್ ಹಾಗೂ ಪೊಲೀಸ್ ಇಲಾಖೆಯ ಇತರೆ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿರುತ್ತಾರೆ. ಸದರಿ ಯೋಜನೆಯ ಕುರಿತು , ಎಸ್.ಪಿ.ಸಿ ನೋಡಲ್ ಅಧಿಕಾರಿ ಆದ ಶ್ರೀ. ಸಾಮ್ರಾಟ್ ಕಿರಣ್ ಪಿ.ಐ(ನಿಸ್ತಂತು) ರವರು ಎಲ್ಲಾ ಗಣ್ಯರಿಗೆ ಮತ್ತು ಶಿಕ್ಷಕರಿಗೆ ಎಸ್.ಪಿ.ಸಿ ಬಗ್ಗೆ ವಿವರಿಸಿರುತ್ತಾರೆ…

ವರದಿ. ಗಣೇಶ್ ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
