ಕೃಷಿ ಅಧಿಕಾರಿ ಬಸವರಾಜ ತೇರಿನ ಅವರ ಸಾರಥ್ಯದಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ…!!!

ಕೃಷಿ ಅಧಿಕಾರಿ ಬಸವರಾಜ ತೇರಿನ ಅವರ ಸಾರಥ್ಯದಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ

ಕೊಪ್ಪಳ ನವೆಂಬರ್ : ನವೆಂಬರ್ ರ ಮಂಗಳವಾರದಂದು ಕುಕನೂರು ಹೋಬಳಿಯ ಮನ್ನಾಪುರ ಗ್ರಾಮದಲ್ಲಿ ಕೃಷಿ ಅಧಿಕಾರಿ ಬಸವರಾಜ ತೇರಿನ ಅವರ ಸರಥ್ಯದಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ ಜರುಗಿತು.
ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ಕೃಷಿ ತಂತ್ರಜ್ಞರಾದ ಸಂಗನಗೌಡರ್ ಆದಾಪುರ .ಅವರು ಸಂಪನ್ಮೂಲ ವ್ಯಕ್ತಿಯಾಗಿ ರೈತರಿಗೆ ಸಮಗ್ರ ಮಾಹಿತಿ ನೀಡಿದರು. ಎನ್.ಎಫ್.ಎಸ್.ಎಮ್ ಯೋಜನೆಯ ತಾಂತ್ರಿಕ ಸಹಾಯಕರು ತೊಗರಿ ಬೆಳೆಯ ತಾಂತ್ರಿಕ ಮಾಹಿತಿ ನೀಡಿದರು. ಪ್ರಗತಿಪರ ರೈತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೃಷಿ ಅಧಿಕಾರಿಗಳು ಇಲಾಖೆಯ ಮಾಹಿತಿ ನೀಡಿದರು. ಇದೇ ಸಂದರ್ಭ ಆತ್ಮಾ ಯೋಜನೆಯ ತರಬೇತಿಯನ್ನು ನೀಡಿ, ರೈತರಿಗೆ ಬೀಜೋಪಚಾರದ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು.
ರೈತರೊಂದಿಗೆ ಕ್ಷೇತ್ರ ಭೇಟಿ ಮಾಡಿ ಕಡಲೆ, ತೊಗರಿ, ಸಿರಿಧಾನ್ಯಗಳಾದ ಊದಲು, ಸಜ್ಜೆ, ಬಿಳಿಜೋಳದ ಬೆಳೆಗಳ ಸಸ್ಯ ಸಂರಕ್ಷಣೆ ಮತ್ತು ಮೌಲ್ಯ ವರ್ಧನೆ ಮಾಹಿತಿ ನೀಡಲಾಯಿತು…

ವರದಿ. ಸಂಗೀತ ಕೊಪ್ಪಳ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend