;

ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಹಿರಿಯ ಸಲಹೆಗಾರ ಬಿ.ಎಸ್.ಹಿರೇಮಠ ಹೊಸಕೋಟೆ ಭೇಟಿ :ಮನೆ ಮನೆ ಸಮೀಕ್ಷೆ ಕಾರ್ಯ ಪರಿಶೀಲನೆ…!!!

ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಹಿರಿಯ ಸಲಹೆಗಾರ ಬಿ.ಎಸ್.ಹಿರೇಮಠ ಹೊಸಕೋಟೆ ಭೇಟಿ :ಮನೆ ಮನೆ ಸಮೀಕ್ಷೆ ಕಾರ್ಯ ಪರಿಶೀಲನೆ

ಬೆಂಗಳೂರು ಗ್ರಾಮಾಂತರ:

ಮುಖ್ಯ ಚುನಾವಣಾಧಿಕಾರಿಗಳ ಕಛೇರಿಯ ಮಾನಿಟರಿಂಗ್ ಕೋಶದ ಹಿರಿಯ ಸಲಹೆಗಾರ ಬಿ.ಎಸ್.ಹಿರೇಮಠ ಅವರು ಇಂದು ಹೊಸಕೋಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮತಗಟ್ಟೆ ಸಂಖ್ಯೆ 185 ಮತ್ತು 191ಕ್ಕೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ,ಮನೆ ಮನೆ ಸಮೀಕ್ಷೆ ಕಾರ್ಯಗಳನ್ನು ಪರಿಶೀಲಿಸಿದರು.

ಮತದಾರರ ಪಟ್ಟಿಯಲ್ಲಿ ಒಂದು ಕುಟುಂಬ ಒಂದೇ ಕಡೆ ಇರುವಂತೆ ಕ್ರಮವಹಿಸಲು ಸೂಚಿಸಿದರು.ಮನ ಮನೆ ಸಮೀಕ್ಷೆಯಲ್ಲಿ ಯಾವ ರೀತಿ ಮಾಹಿತಿಯನ್ನು ಸಂಗ್ರಹಿಸಬೇಕು, ಯುವ ಮತದಾರರನ್ನು ಹಾಗೂ ವಿಕಲಚೇತನ ಮತದಾರರನ್ನು ಪಟ್ಟಿಗೆ ನೋಂದಾಯಿಸಲು ಹೆಚ್ಚಿನ ಆಸಕ್ತಿ ವಹಿಸಲು ನಿರ್ದೇಶನ ನೀಡಿದರು.

ನಂತರ ತಹಸೀಲ್ದಾರ ಕಚೇರಿಯಲ್ಲಿ ಸಭೆ ಕೈಗೊಂಡು ಪರಿಶೀಲನೆ ನಡೆಸಿದರು.
ಸಭೆಯಲಿ ತಹಶೀಲ್ದಾರ ಮಹೇಶಕುಮಾರ್, ಪೌರಾಯುಕ್ತರು, ಉಪತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ನಗರಸಭೆಯ ಬಿ.ಎಲ್‌.ಓ, ಮೇಲ್ವಿಚಾರಕರು ಹಾಜರಿದ್ದರು,..

ವರದಿ. ಕಲಾವತಿ, ಎನ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;