;

ಕಿನ್ನಾಳದಲ್ಲಿ ಸಂಶಯಾಸ್ಪದ ವಾಂತಿ-ಬೇಧಿ ಪ್ರಕರಣ ಸೂಕ್ತ ಚಿಕಿತ್ಸೆ, ಆಸ್ಪತ್ರೆಯಿಂದ ರೋಗಿಗಳು ಬಿಡುಗಡೆ…!!!

ಕಿನ್ನಾಳದಲ್ಲಿ ಸಂಶಯಾಸ್ಪದ ವಾಂತಿ-ಬೇಧಿ ಪ್ರಕರಣ
ಸೂಕ್ತ ಚಿಕಿತ್ಸೆ, ಆಸ್ಪತ್ರೆಯಿಂದ ರೋಗಿಗಳು ಬಿಡುಗಡೆ
ಆರೋಗ್ಯ ಇಲಾಖೆಯಿಂದ ಅಗತ್ಯ ಮುಂಜಾಗ್ರತ ಕ್ರಮ.
ಕೊಪ್ಪಳ: ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಕಂಡು ಬಂದ ಸಂಶಯಾಸ್ಪದ ವಾಂತಿ-ಬೇಧಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳೊಂದಿಗೆ ಸೇವೆ ನೀಡಲು ಆರೋಗ್ಯ ಇಲಾಖೆ ಸದಾ ಸಿದ್ಧವಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಅಲಕನಂದಾ ಮಳಗಿ ಅವರು ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನ ಫ್ರಾಥಮಿಕ ಆರೋಗ್ಯ ಕೇಂದ್ರ, ಕಿನ್ನಾಳ ವ್ಯಾಪ್ತಿಯ ಕಿನ್ನಾಳ ಗ್ರಾಮದಲ್ಲಿ ನವೆಂಬರ್ 05 ರಿಂದ ಒಟ್ಟು 28 ಸಂಶಯಾಸ್ಪದ ವಾಂತಿ-ಬೇಧಿ ಪ್ರಕರಣಗಳು ಕಂಡು ಬಂದಿರುತ್ತವೆ. ಇವುಗಳಲ್ಲಿ 05 ಪ್ರಕರಣಗಳನ್ನು ಜಿಲ್ಲಾ ಆಸ್ಪತ್ರೆಗೆ ನಿರ್ದೇಶನ ಮಾಡಲಾಗಿದ್ದು, ಸೂಕ್ತ ಚಿಕಿತ್ಸೆ ಪಡೆದು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ ಮತ್ತು ಉಳಿದ 23 ಪ್ರಕರಣಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ನವೆಂಬರ್ 08 ರಂದು ಸ್ಥಳೀಯ ವೈದ್ಯಾಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಮತ್ತು ಸಿಬ್ಬಂದಿ ತಂಡದೊಂದಿಗೆ ಕಿನ್ನಾಳ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಗಳ ಜೊತೆ ಕುಡಿಯುವ ನೀರಿನ ಸರಬರಾಜು ಬಗ್ಗೆ ಚರ್ಚಿಸಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಸಭೆ ಏರ್ಪಡಿಸಿ ಮುಂಜಾಗ್ರತ ಕ್ರಮಗಳ ಬಗ್ಗೆ ಚರ್ಚಿಸಲಾಗಿರುತ್ತದೆ.
ಎಸಿ, ತಹಶೀಲ್ದಾರರು, ಡಿಎಚ್ಓ ಭೇಟಿ: ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರರು ಕಿನ್ನಾಳ ಗ್ರಾಮಕ್ಕೆ ಭೇಟಿ ನೀಡಿ, ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಖಾಯಿಲೆ ನಿಯಂತ್ರಣದ ಬಗ್ಗೆ ಗ್ರಾಮದಲ್ಲಿ ಸೂಕ್ತ ಕ್ರಮ ಜರುಗಿಸಲು ಹಾಗೂ ಕಲುಷಿತ ನೀರಿನ ಮೂಲಗಳಾದ 03 ಬೋರ್‌ವೇಲ್‌ಗಳನ್ನು ಬಂದ್ ಮಾಡಿಸಿ, 06 ಶುದ್ಧ ಕುಡಿಯುವ ನೀರಿನ ಘಟಕದಿಂದ ಪೂರೈಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ತಾವು ಸಹ ನವೆಂಬರ್ 10 ರಂದು ಕಿನ್ನಾಳ ಗ್ರಾಮಕ್ಕೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾಗಿ ಹೇಳಿದ್ದಾರೆ.
ತುರ್ತು ನಿಯಂತ್ರಣ ಕ್ರಮ:
ಕಿನ್ನಾಳ ಗ್ರಾಮದಲ್ಲಿ ಆರೋಗ್ಯ ಸಂಸ್ಥೆಯ ಕಟ್ಟಡ ಕಾಮಗಾರಿಗಳು ನಡೆಯುತ್ತಿದ್ದರೂ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಆಸ್ಪತ್ರೆಯಲ್ಲಿ ಯಾವುದೇ ಔಷಧಿಗಳ ಕೊರತೆ, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ಕೊರತೆಯಾಗದಂತೆ ತುರ್ತು ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಾಗಿರುತ್ತದೆ
ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ: ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಮಾಡಿ, ಸಾರ್ವಜನಿಕರಿಗೆ ಕುದಿಸಿ-ಆರಿಸಿದ ನೀರು ಕುಡಿಯುವಂತೆ ಹಾಗೂ ಮನೆಯ ಒಳಗಡೆ ಮತ್ತು ಸುತ್ತಲು ಸ್ವಚ್ಛತೆಯಿಂದ ಇಟ್ಟುಕೊಳ್ಳವ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗಿದೆ. ಗ್ರಾಮದಲ್ಲಿರುವ ಚರಂಡಿಗಳನ್ನು ಪಂಚಾಯಿತಿಯವರ ಸಹಕಾರದೊಂದಿಗೆ ಸ್ವಚ್ಛತೆ ಮಾಡಿಸಲಾಗಿದೆ ಮತ್ತು ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್‌ಲೈನ ಸೋರಿಕೆ ಇರುವದನ್ನು ಕಂಡುಹಿಡಿದು ಅದನ್ನು ಸರಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ‌
ಆರೋಗ್ಯ ಇಲಾಖೆ ಸಧಾ ಸಿದ್ಧ: ಕಿನ್ನಾಳ ಗ್ರಾಮದಲ್ಲಿನ ಜನರು ಯಾವುದಕ್ಕೂ ಭಯಪಡುವ ಅಗತ್ಯವಿರುವುದಿಲ್ಲ ಹಾಗೂ ಜನರ ಚಿಕಿತ್ಸೆಗೆ ಬೇಕಾಗಿರುವ ಎಲ್ಲಾ ರೀತಿಯ ಔಷಧಿಗಳು, 24×7 ಆಂಬ್ಯಲೇನ್ಸ್ ಮತ್ತು ಅಗತ್ಯ ವೈದ್ಯಕೀಯ ಸೌಲಭ್ಯಗಳೊಂದಿಗೆ ಸೇವೆ ನೀಡಲು ಆರೋಗ್ಯ ಇಲಾಖೆ ಸಧಾ ಸಿದ್ದವಿದೆ.
ಹೆಚ್ಚುವರಿ ಮುಂಜಾಗೃತೆಗೆ ಕ್ರಮ:ಹೆಚ್ಚುವರಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲು ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದ್ದು, ಗ್ರಾಮದ ಕುಡಿಯುವ ನೀರಿನ ಬೋರವೇಲ್ ಸುತ್ತಲು ಮಣ್ಣು ಹಾಕಿಸುವಂತೆ ಗ್ರಾಮ ಪಂಚಾಯಿತಿ ಅವರಿಗೆ ಸೂಚಿಸಲಾಗಿದೆ. ಕುಡಿಯುವ ನೀರಿನ ಮೂಲಗಳನ್ನು ಜಿಲ್ಲಾ ಮಟ್ಟದ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಕ್ಲೋರಿನೇಷನ್ ಮಾಡಿಸಲಾಗಿದೆ. ಚರಂಡಿಗಳನ್ನು ಸ್ವಚ್ಛಗೊಳಿಸಿ ಬ್ಲೀಚಿಂಗ್ ಫೌಡರ್ ಹಾಕಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ ಪಂಚಾಯತ ಸಿಬ್ಬಂದಿಗೆ ಸಭೆ ಏರ್ಪಡಿಸಿ, ಆರೋಗ್ಯ ಶಿಕ್ಷಣ ನೀಡಲಾಗಿದೆ.
ಗ್ರಾಮದಲ್ಲಿ ಪ್ರತಿ ವಾರ ನಡೆಯುವ ಸಂತೆಯನ್ನು ರದ್ದುಪಡಿಸಲಾಗಿದೆ. ಗ್ರಾಮದಲ್ಲಿ ಎಲ್ಲ ಜನರಿಗೂ ಶುದ್ಧ ಕುಡಿಯುವ ನೀರನ್ನು ಬಳಸುವಂತೆ ಹಾಗೂ ಪ್ರತಿಯೋಬ್ಬರು ಶೌಚದ ನಂತರ ಸ್ವಚ್ಛವಾಗಿ ಕೈ ತೊಳೆದುಕೊಳ್ಳುವ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗಿದೆ. ಸಂಶಯಾಸ್ಪದ ವಾಂತಿ-ಬೇದಿ ಪ್ರಕರಣಗಳು ಕಂಡು ಬಂದ ಮನೆಯಲ್ಲಿ ಓ.ಆರ್.ಎಸ್ ಪಾಕೆಟ್ ವಿತರಣೆ ಮಾಡಲಾಗಿದೆ.
ಅಲ್ಲದೇ ಗ್ರಾಮದಲ್ಲಿ ಯಾರಿಗಾದರೂ ವಾಂತಿ-ಬೇದಿ ಪ್ರಕರಣಗಳು ಕಂಡು ಬಂದರೆ ಆಸ್ಪತ್ರೆಗೆ ಬರುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
ತುರ್ತು ಸೇವೆ: ದಿನದ 24 ಗಂಟೆ ಪ್ರಾಥಮಿಕ ಆರೋಗ್ಯ ಕೇಂದ್ರ ತುರ್ತು ಸೇವೆಗಾಗಿ ತೆರೆದಿರುತ್ತದೆ ಮತ್ತು ತುರ್ತಾಗಿ ಜಿಲ್ಲಾ ಆಸ್ಪತ್ರೆ ಸಾಗಿಸಲು ಅಗತ್ಯವಿರುವ ಅಂಬ್ಯುಲನ್ಸ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಹೆಚ್ಚಿನ ವೈದ್ಯಾಧಿಕಾರಿಗಳು ಮತ್ತು ಕಾರ್ಯಕ್ಷೇತ್ರ ಸಿಬ್ಬಂದಿಗಳನ್ನು ಚಿಕಿತ್ಸೆ ನೀಡಲು ನಿಯೋಜಿಸಲಾಗಿದೆ. ಪ್ರಸ್ತುತ ಪ್ರಕರಣಗಳು ನಿಯಂತ್ರಣದಲ್ಲಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…

ವರದಿ. ಸಂಗೀತ ಪಾಟೀಲ್, ಕೊಪ್ಪಳ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend