ಹಂದಿಗುಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿ ಜೆ ಪಿ ಬೆಂಬಲಿತ ಅಭ್ಯರ್ಥಿ ಗೆಲುವು, ಪಿ ರಾಜು ಬೆಂಬಲಿಗರಿಗೆ ಮುಖಭಂಗ.
ಬೆಳಗಾವಿ =ರಾಯಬಾಗ ತಾಲೂಕು ಹಂದಿಗುಂದ ಗ್ರಾಮ ಪಂಚಾಯತ್ ವಾರ್ಡ್ ನಂ 5 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿ ಜೆ ಪಿ ಬೆಂಬಲಿತ ಅಭ್ಯರ್ಥಿ ಸಂಗಪ್ಪ ಮಿರ್ಜಿಯವರು 418 ಮತಗಳನ್ನು ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ ಇವರ ಪ್ರತಿ ಸ್ಪರ್ಧೆಯ ಪಿ ರಾಜು ಅಭಿಮಾನಿ ಅಭ್ಯರ್ಥಿ ಗೌಡಪ್ಪ ಪಾಟೀಲ್ ರವರು 398 ಮತಗಳನ್ನ ಪಡೆದು ಸೋಲು ಅನುಭವಿಸಿದ್ದಾರೆ.ಈ ಉಪ ಚುನಾವಣೆಯಲ್ಲಿ 06 ಜನ ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧಿಸಿದ್ದರು.

ಮೊದಲನೆಯ ಸ್ಥಾನದಲ್ಲಿ ಸಂಗಪ್ಪ ಮಿರ್ಜಿ418, ಎರಡನೇ ಸ್ಥಾನ ಗೌಡಪ್ಪ ಪಾಟೀಲ್ 398, ಮೂರನೇ ಸ್ಥಾನ ಸಿದ್ರಾಮ್ ಉಳ್ಳಾಗಡ್ಡಿ 82, ಸೀಮಂತ ಪೂಜೇರಿ 65, ಕುಮಾರ ಹಿರೇಮಠ್ 30, ನಾಗಪ್ಪ ಮೇಟಿ 27, ಈ ಉಪ ಚುನಾವಣೆಯಲ್ಲಿ ಸಂಗಪ್ಪ ಮಿರ್ಜಿಯವರು ವಿಜಯ ಮಾಲೆ ತಮ್ಮದಾಗಿಸಿಕೊಂಡರು…

ವರದಿ. ಮಹಾಲಿಂಗ ಗಗ್ಗರಿ ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
