ಹೊಸಪೇಟೆ ಪಟ್ಟಣ ಪೊಲೀಸರ ಮಿಂಚಿನ ಕಾಯ೯ಚರಣೆ,ನಕಲಿ ಚಿನ್ನದ ನಾಣ್ಯಗಳನ್ನು ಮಾರಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ…!!!

ಹೊಸಪೇಟೆ ಪಟ್ಟಣ ಪೊಲೀಸರ ಕಾಯ೯ಚರಣೆ, ನಕಲಿ ಚಿನ್ನದ ನಾಣ್ಯಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ.
ದಿನಾಂಕ 18-10-2022 ರಂದು ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ KSRTC ಬಸ್ ನಿಲ್ದಾಣದ ಹತ್ತಿರ ನಕಲಿ ಚಿನ್ನದ ನಾಣ್ಯಗಳನ್ನು ಆಸಲಿ ಚಿನ್ನದ ನಾಣ್ಯಗಳೆಂದು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಮೇರೆಗೆ. ಹೊಸಪೇಟೆ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ , ಪಿಐ ಹೊಸಪೇಟೆ ಪಟ್ಟಣ ಠಾಣೆ ಮತ್ತು ಸಿಬ್ಬಂದಿಯವರ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಇಬ್ಬರು ಆರೋಪಿತನನ್ನು ಬಂಧಿಸಿ , ಆರೋಪಿತರಿಂದ 1) 2.606 ಗ್ರಾಂ ತೂಕದ ನಕಲಿ ಚಿನ್ನದ ನಾಣ್ಯಗಳು 2) 2000 ನಗದು ಹಣ 3 ) 1 ಮೊಬೈಲ್ ಅಂದಾಜು ಬೆಲೆ 1000 ರೂಪಾಯಿಗಳನ್ನು ಜಪ್ತಿ ಮಾಡಿ, ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ ಹಾಗೂ ಆರೋಪಿಗಳ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ತನಿಖೆಯನ್ನು ಕೈಗೊಳ್ಳಲಾಗುವುದು ಎಂಬ ಮಾಹಿತಿ ದೊರಕಿದೆ…

ವರದಿ. ಗಣೇಶ್. ಹೊಸಪೇಟೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend