ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ – ಪಂಪಾಪತಿ ದೇವರಗುಡಿ….!!!

ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ – ಪಂಪಾಪತಿ ದೇವರಗುಡಿ.

ಸಿಂಧನೂರು:ಅ.10.ಪ್ರತಿಯೊಬ್ಬ ಮನುಷ್ಯನಿಗೆ ಗಾಳಿ, ನೀರು,ಆಹಾರ ಅತ್ಯಾವಶ್ಯಕ, ಇವುಗಳನ್ನೆಲ್ಲ ನಾವು ಸಸ್ಯಗಳಿಂದಲೇ ಪಡೆಯುತ್ತೇವೆ ಇಂತಹ ಸಸ್ಯಗಳನ್ನು ಉಳಿಸುವ ನಿಟ್ಟಿನಲ್ಲಿ ಅಮರೇಗೌಡ ಮಲ್ಲಾಪೂರ ಅವರ ಶ್ರಮ ತುಂಬಾ ಇದೆ.ಕೇವಲ ಅಮರೇಗೌಡ ಮಲ್ಲಾಪೂರ ಅವರಿಗೆ ಮಾತ್ರ ಸಸಿಗಳನ್ನು ಉಳಿಸುವ ಕಾರ್ಯ ಸೀಮಿತವಾಗ ಬಾರದು ಪ್ರತಿಯೊಬ್ಬರೂ ಇಂತಹ ಕಾರ್ಯಗಳನ್ನು ಮಾಡುತ್ತಿರಬೇಕು. ಪರಿಸರ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ.ಈ ಕರ್ತವ್ಯವನ್ನು ನಾವು ಎಂದೂ ಮರೆಯಬಾರದು ಎಂದು ಪಂಪಾಪತಿ ದೇವರಗುಡಿ. ತಿಳಿಸಿದರು.
ನಗರದ ಗಂಗಾನಗರದ ವಿದ್ಯಾವಾಹಿನಿ ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತು ಹತ್ತಿರದ ಉದ್ಯಾನವನದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ 50ಸಸಿಗಳನ್ನು ನೆಟ್ಟು ನಂತರ ಮಾತನಾಡಿದರು.
ನಾವುಗಳು ಇಂತಹ ಕಾರ್ಯಗಳನ್ನು ಮಾಡಲು ಸಾದ್ಯವಾಗದೇ ಹೋದರು ಪರಿಸರ ಪ್ರೇಮಿಗಳಿಗೆ ಸಹಕಾರ ನೀಡೋಣ,ಈ ವನಸಿರಿ ಫೌಂಡೇಶನ್ ಇನ್ನಷ್ಟು ಹೆಚ್ಚಿನ ಕಾರ್ಯ ಮಾಡಲಿ ಈ ತಂಡದ ಸದಸ್ಯರೆಲ್ಲರೂ ಒಗ್ಗೂಡಿ ಇನ್ನಷ್ಟು ಕಾರ್ಯ ಮಾಡುವ ಮೂಲಕ ಸಸಿಗಳನ್ನು ಉಳಿಸಿ ಬೆಳಸುವಂತಾಗಲಿ, ನೀವುಗಳು ಕೂಡಾ ನಿಮ್ಮ ಮನೆಯ ಸುತ್ತ ಮುತ್ತ ಸಸಿಗಳನ್ನು ಬೆಳೆಸಲು ಮುಂದಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ಶಾಲೆಯ ಅದ್ಯಕ್ಷರಾದ ಬಸವರಾಜ ವಲ್ಕಂದಿನ್ನಿ, ಕಾರ್ಯದರ್ಶಿ ಮಲ್ಲಿಕಾರ್ಜುನ ಸದರಡ್ಡಿ,ವನಸಿರಿ ಫೌಂಡೇಶನ್ ಬುದೇಶ್ ಮರಾಠ, ರುದ್ರಗೌಡ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಶಾಲೆಯ ಮಕ್ಕಳು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend