ಎಸ್.ಸಿ-ಎಸ್.ಟಿ ಮೀಸಲಾತಿ ಹೆಚ್ಚಳ:ಸೂರ್ಯಪಾಪಣ್ಣ ಅಭಿನಂದನೆ ಸಲ್ಲಿಕೆ…!!!

ಎಸ್.ಸಿ-ಎಸ್.ಟಿ ಮೀಸಲಾತಿ ಹೆಚ್ಚಳ:ಸೂರ್ಯಪಾಪಣ್ಣ ಅಭಿನಂದನೆ ಸಲ್ಲಿಕೆ.

ಗುಡೇಕೋಟೆ : ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ಕನಸು ಬಹುದಿನಗಳ ಬೇಡಿಕೆಯಾಗಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿ ಜಾರಿಯ ಕುರಿತು ಎಸ್ಸಿ ಗೆ 17.ಹಾಗೂ ಎಸ್ಟಿ ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ ವಿಚಾರದಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯಥಾವತ್ತಾಗಿ ಮೀಸಲಾತಿ ಹೆಚ್ಚಳ ಮಾಡಿ ಘೋಷಣೆ ಮಾಡಿರುವುದಕ್ಕೆ ವಿಜಯನಗರ ಜಿಲ್ಲಾ ಹಾಗೂ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ವಿಜಯನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸೂರ್ಯ ಪಾಪಣ್ಣ ಅಭಿನಂದನೆ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿಯನ್ನು ಪರಿಶೀಲಿಸಿ ನಂತರ ವರದಿಯು ನ್ಯಾಯತವಾಗಿದೆ ಎಂದು ಮೀಸಲಾತಿ ಹೆಚ್ಚಿಸಿರುವ ರಾಜ್ಯದ ಜನಪ್ರಿಯ ಬಿಜೆಪಿ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ.ಹಾಗೂ ಛಲ ಬಿಡದ ಜಗದ್ಗುರು ರಾಜನಹಳ್ಳಿ ಗುರುಪೀಠ ಮಹರ್ಷಿ ವಾಲ್ಮೀಕಿ ಸಂಸ್ಥಾನದ ಗುರುಗಳಾದ ಪ್ರಸನ್ನನಂದಪುರಿ ಸ್ವಾಮೀಜಿಗಳು.ಸಮುದಾಯದ ಹಿರಿಯರು ಸಾರಿಗೆ ಸಚಿವ ಬಿ. ಶ್ರೀರಾಮುಲು. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಸೇರಿದಂತೆ ರಾಜ್ಯ ಸರ್ಕಾರದ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಸಮುದಾಯದ ಹಾಗೂ ಕೇಂದ್ರ ಹಾಗೂ ಮೀಸಲಾತಿಗೆ ಸಹಕರಿಸಿದ ರಾಜ್ಯದ ಬಿಜೆಪಿ ನಾಯಕರುಗಳಿಗೆ ರಾಜ್ಯದ ದಲಿತಪರ ಸಂಘಟನೆಗಳಿಗೆ ಸಮುದಾಯದ ಸಮಸ್ತ ಮುಖಂಡರಿಗೆ ಹೃತ್ಪೂರ್ವಕ ಅಭಿನಂದನೆಗಳು ತಿಳಿಸಿದ್ದಾರೆ…

ವರದಿ.ಡಿ.ಎಂ.ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend