ಗುಡೇಕೋಟೆ ಗ್ರಾ ಪಂ ಸದಸ್ಯರನ್ನು ಬೇಟಿ ಮಾಡಿದ ಬಂಗಾರು ಹನುಮಂತು…!!!

ಗುಡೇಕೋಟೆ ಗ್ರಾ ಪಂ ಸದಸ್ಯರನ್ನು ಬೇಟಿ ಮಾಡಿದ ಬಂಗಾರು ಹನುಮಂತು.

ಗುಡೇಕೋಟೆ:- ಕೂಡ್ಲಿಗಿ ತಾಲೂಕಿನ ಜರ್ಮಲಿ.ರಾಮದುರ್ಗ.ಅಪ್ಪೇನಹಳ್ಳಿ.ಗುಂಡುಮುಣಗು ಗುಡೇಕೋಟೆ ಗ್ರಾ ಪಂ ಗೆ ದಸರಾ ಹಬ್ಬದ ಪ್ರಯುಕ್ತ ಗ್ರಾ ಪಂ ಸದಸ್ಯರಿಗೆ ಬೇಟಿ ಮಾಡಿದ ಬಿಜೆಪಿ ಮುಖಂಡ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಚಲನಚಿತ್ರ ನಟ ಬಂಗಾರು ಹನುಮಂತು ಅಲ್ಲಿನ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದು ಎಲ್ಲಾ ಸದಸ್ಯರಿಗೆ ದಸರಾ ಉಡುಗೊರೆ ನೀಡಿ ಶುಭಾಶಯಗಳು ತಿಳಿಸಿದರು.

ಬಳಿಕ ಮಾತನಾಡಿದ ಅವರು ಈ ಬಾರಿ ಸ್ಥಳೀಯರಿಗೆ ಅವಕಾಶ ಕೊಟ್ಟರೆ ಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ನಟ ಬಿಜೆಪಿ ಮುಖಂಡ ಬಂಗಾರು ಹನುಮಂತ ಹೇಳಿದ್ದಾರೆ. ಈಗಾಗಲೇ ಚುನಾವಣೆಗೆ ಐದು ಆರು ತಿಂಗಳು ಇರುವಾಗಲೇ ರಾಜಕೀಯ ವಲಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ರಾಜಕೀಯಕ್ಕೂ ಚಿತ್ರರಂಗಕ್ಕೂ ಮೊದಲಿನಿಂದಲೂ ಒಳ್ಳೆಯ ನಂಟಿದೆ ಅನೇಕ ಸೆಲೆಬ್ರಿಟಿಗಳು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಕಳೆದ 25 ವರ್ಷಗಳಿಂದಲೂ ಹೊರಗಿನವರಿಗೆ ಟಿಕೆಟ್ ಕೊಟ್ಟು ಆರಿಸಿ ಕಳಿಸಿದೆ. ಕ್ಷೇತ್ರದ ಜನತೆ ಈಗ ಬದಲಾವಣೆ ಬಯಸಿದ್ದಾರೆ ಸ್ಥಳೀಯರಿಗೆ ಟಿಕೆಟ್ ಸಿಗಬೇಕು ಎಂಬುದು ಇಡೀ ಕ್ಷೇತ್ರದ ಪಕ್ಷತೀತ ಮತದಾರರ ಅಭಿಪ್ರಾಯವಾಗಿದೆ ಎಂದು ತಿಳಿಸಿದರು. ನಿಮ್ಮೆಲ್ಲರ ಆಶೀರ್ವಾದ ಬಯಸಿ ಪಕ್ಷ ಗುರುತಿಸಿ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದರು.

 

ಎಲೆಕ್ಷನ್ ನಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೂ ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಬಿಜೆಪಿ ಕೆಲಸ ಮಾಡಿಕೊಂಡು ಕ್ಯಾಂಪೇನ್ ಮಾಡುತ್ತೇನೆ ಎಂದು ನಟ ಬಿಜೆಪಿ ಮುಖಂಡ ಬಂಗಾರ ಹನುಮಂತು ಹೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಗುಡೇಕೋಟೆ ಗ್ರಾ ಪಂ ಸದಸ್ಯರಾದ ಎನ್ ಕೃಷ್ಣ.ಕೆ.ಮಂಜುನಾಥ್.ಮುಖಂಡರಾದ ಬೇಕರಿ ಸುರೇಶ್.ಜೆ.ಶಿವಕುಮಾರ್.ಯರ್ರೀಸ್ವಾಮಿ.ಮಹೇಶ್.ಪ್ರಹ್ಲಾದ್.ಎಂ.ನಾಗರಾಜ್.ಸೇರಿದಂತೆ ಬಂಗಾರು ಪ್ಯಾನ್ಸ್ ಯುವಕರು ಅಭಿಮಾನಿಗಳು.ಬಿಜೆಪಿ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ.ಡಿ,ಎಂ, ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend