ನಾಗರಹುಣಸೆ ದಸರಾ ಹಬ್ಬದ ಪ್ರಯುಕ್ತ ಮಕ್ಕಳ ಕ್ರಿಕೆಟ್ ಟೂರ್ನಮೆಂಟ್ ಡೆಂಜರ್ಸ್ ಬಾಯ್ಸ್ ಗೆ ಕಪ್…!!!

ನಾಗರಹುಣಸೆ ದಸರಾ ಹಬ್ಬದ ಪ್ರಯುಕ್ತ ಮಕ್ಕಳ ಕ್ರಿಕೆಟ್ ಟೂರ್ನಮೆಂಟ್ ಡೆಂಜರ್ಸ್ ಬಾಯ್ಸ್ ಗೆ ಕಪ್

ಗುಡೇಕೋಟೆ: ಕೂಡ್ಲಿಗಿ ತಾಲೂಕಿನ ನಾಗರಹುಣಸೆ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ ಸ್ಥಳೀಯ ಎನ್.ಪಿ.ಎಲ್.ಸೀಜನ್-1 ಚಿಕ್ಕ ಮಕ್ಕಳ ಕ್ರಿಕೆಟ್ ಟೂರ್ನಮೆಂಟ್ ಗ್ರಾಮದ ಕ್ರಿಕೆಟ್ ಬಯಲು ಮೈದಾನದಲ್ಲಿ ಗ್ರಾಮಸ್ಥರ ಹಾಗೂ ಕ್ರೀಡಾಭಿಮಾನಿಗಳ ಸಹಯೋಗತ್ವದಲ್ಲಿ ಅಯೋಜಿಸಲಾಗಿತ್ತು. ಈ ಪಂದ್ಯದಲ್ಲಿ ಈ ಬಾರಿ ಡೇಂಜರ್ಸ್ ಬಾಯ್ಸ್ ತಂಡ ಪ್ರಥಮ ಬಹುಮಾನ ಪಡೆದು ಆಕರ್ಷಕ ಟ್ರೋಫಿಗೆ ಭಾಜನವಾಯಿತು.

ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉತ್ತಮ ಆರೋಗ್ಯ ಶಿಸ್ತು ಏಕಾಗ್ರತೆ ಜೊತೆಗೆ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿಯಾಗಲಿದ್ದು ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಪಾಲ್ಗೊಳ್ಳುವಿಕೆ ಅತಿ ಮುಖ್ಯ. ಪ್ರತಿಯೊಬ್ಬ ಕ್ರೀಡಾಪಟುವೂ ಸೋಲು ಗೆಲುವನ್ನು ಕ್ರೀಡಾ ಮನೋಭಾವದಿಂದ ಸರಿಸಮಾನಾಗಿ ಸ್ವೀಕರಿಸಬೇಕು. ಹಾಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಎನ್.ಪಿ.ಎಲ್.ಸೀಜನ್-1ರ ನಾಗರಹುಣಸೆ ಕ್ರಿಕೆಟರ್ಸ್ ಅಭಿಮಾನಿಗಳ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಸ್ಥಳೀಯ ಶಾಲಾ ಚಿಕ್ಕ ಮಕ್ಕಳಿಂದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಡೇಂಜರ್ಸ್ ಬಾಯ್ಸ್ ತಂಡ ಪ್ರಥಮ ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ಪಡೆಯಿತು. ಈ ತಂಡದ ವಿಶೇಷ ಏನೆಂದರೆ ಕನ್ನಡ ಚಿತ್ರರಂಗದ ಬಹುತೇಕ ಚಂದನ ವನದ ಖ್ಯಾತ ಚಲನಚಿತ್ರ ನಟರ ಹೆಸರುಗಳು ಇರುವ ತಂಡದ ಆಟಗಾರರಾದ ದರ್ಶನ್.ಸುದೀಪ್. ಪುನೀತ್. ರವಿಚಂದ್ರ. ಸಚಿನ್. ಧನು. ಕಾರ್ತಿಕ್. ಯರ್ರೀಸ್ವಾಮಿ. ಸೇರಿದಂತೆ ಇತರರು ಇರುವುದೇ ವಿಶೇಷವಾಗಿದೆ. ಉತ್ತಮವಾಗಿ ಎಲ್ಲಾ ತಂಡಗಳನ್ನು ಸೋಲಿಸಿ ಪ್ರಥಮ ಬಹುಮಾನ ಪಡೆದು ವಿಜೇತರಾಗಿ ಕುಣಿದುಕುಪ್ಪಳಿಸಿ ಸಂಭ್ರಮಿಸಿದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend