ಹಿರೇಕುಂಬಳಗುಂಟೆ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಗಾಂಧಿಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಯವರ ಜಯಂತಿಯನ್ನು ಆಚರಣೆ ಮಾಡಲಾಯಿತು…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹಿರೇಕುಂಬಳಗುಂಟೆ ಗ್ರಾಮದ ಸ.ಹಿ.ಪ್ರಾ.ಶಾಲೆ.ಹಿರೇಕುಂಬಳಗುಂಟೆಯಲ್ಲಿ “ಜೈಜವಾನ್ ಜೈ ಕಿಸಾನ್”ನ ಹರಿಕಾರ ಪೂಜ್ಯ ಲಾಲ್ ಬಹದ್ದೂರ್ ಶಾಸ್ತ್ರೀಜೀ ಹಾಗೂ ಅಹಿಂಸಾ ಹರಿಕಾರ ಮಹಾತ್ಮ ಗಾಂಧೀಜಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಜಯಂತಿಗಳನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಗಾಂಧೀಜಿಯವರ ಬಗ್ಗೆ ನುಡಿನಮನಗಳನ್ನು ಹೇಳಿದರು.
ಶ್ರೀ ಶಾಸ್ತ್ರೀಯ ಸರಳ ಸಜ್ಜನಿಕೆಯ ಬಗ್ಗೆ ಮುಖ್ಯ ಗುರುಗಳಾದ ಶ್ಯಾಮಸುಂದರ ಸಪಾರೆ ಅವರು ಮಾತನಾಡಿ ನಿದರ್ಶನಗಳನ್ನು ಮಕ್ಕಳಿಗೆ ತಿಳಿಸಿದರು.ಒಮ್ಮೆ ಶಾಸ್ತ್ರೀಯ ಮಗಳು ಶಾಲೆಯಲ್ಲಿ ಫಲಕವನ್ನು ಮುರಿದುಕೊಂಡು ಬಂದಿದ್ದಳು ದೇಶದ ಪ್ರಧಾನ ಮಂತ್ರಿಗಳಾದ ತಮ್ಮತಂದೆಗೆ ಹೊಸ ಫಲಕವನ್ನು ಕೊಡಿಸಲು ಕೇಳಿದಾಗ ಅವರು ಸ್ವತಃ ಕಪ್ಪುಕಲ್ಲಿನಲ್ಲಿ ಹಲಗೆ ಮಾಡಿದ ನಿದರ್ಶನ ಎಂಥವರಿಗೂ ಮಾದರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮ ದಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ದಾದಾಪೀರ್ ಹಾಗೂ ಸರ್ವ ಸದಸ್ಯರು, ಶಾಲೆಯ ಸಹ ಶಿಕ್ಷಕರಾದ ಹನುಮಂತರಡ್ಡಿ,ಬಸವರಾಜ,ಶಾರದ,ರೂಪ,ಮಂಜುನಾಥ,ರಫೀಕ್,ಶರಣಯ್ಯನವರು ಹಾಗೂ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಗ್ರಾಮದ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು..

ವರದಿ.ವಿರೇಶ್ ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend