ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ನಾಡಕಚೇರಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಜಿ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನಗಳನ್ನು ಸಲ್ಲಿಸಲಾಯಿತು.
ನಂತರ ಕಂದಾಯ ಪರಿವೀಕ್ಷಕರಾದ ಮುರಳಿಕೃಷ್ಣ ಮಾತನಾಡಿ ಸತ್ಯಾಗ್ರಹ. ಕ್ವಿಟ್ ಇಂಡಿಯಾ ಚಳುವಳಿ ಅನೇಕ ಹೋರಾಟಗಳನ್ನು ರುವಾರಿ ಮತ್ತು ಜಗತ್ತಿಗೆ ಶಾಂತಿ ಮತ್ತು ಅಹಿಂಸೆ ಸಂದೇಶವನ್ನು ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಎಂದು ಇದೇ ಸಂದರ್ಭದಲ್ಲಿ ಸ್ಮರಿಸಿದರು.
ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ರವರು ಧೀಮಂತ ವ್ಯಕ್ತಿತ್ವ ಸರಳ ಸಜ್ಜನಿಕೆಯ ರಾಜಕಾರಣಿ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸಿದ ಮಾಜಿ ಪ್ರಧಾನಿ ಭಾರತರತ್ನ ಇವರು ಜೈ ಜವಾನ್ ಜೈ ಕಿಸಾನ್ ಎಂಬ ಘೋಷವಾಕ್ಯ ಮೊಳಗಿಸಿದರು . ಎಂದರು.
ಇದೇ ಸಂದರ್ಭದಲ್ಲಿ ನಾಡಕಛೇರಿಯ ಉಪತಹಶೀಲ್ದಾರ್ ಜಿ ಚಂದ್ರಮೋಹನ್. ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ್ ಕೊಂಡಿ. ನಾಡಕಚೇರಿ ಮಹಿಳಾ ಸಿಬ್ಬಂದಿ ರೋಷಿಲ. ಆಪರೇಟರ್ ಗಳಾದ ರಮೇಶ್. ಅಗ್ರಹಾರ ಮಂಜುನಾಥ್.
ಗ್ರಾಮಸಹಾಯಕರ ಆದ ಬೋರಪ್ಪ. ತಿಪ್ಪೇಸ್ವಾಮಿ. ಸೇರಿ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು..
ವರದಿ. ವಿರೇಶ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
