ಗಂಡ ಬೊಮ್ಮನಹಳ್ಳಿ ಜಿಲ್ಲೆಯ ದೊಡ್ಡ ಕೆರೆ ಕೋಡಿ: ರೈತರಿಗೆ ಮಂದಹಾಸ…!!!

ಗಂಡ ಬೊಮ್ಮನಹಳ್ಳಿ ಜಿಲ್ಲೆಯ ದೊಡ್ಡ ಕೆರೆ ಕೋಡಿ: ರೈತರಿಗೆ ಮಂದಹಾಸ

ಕೂಡ್ಲಿಗಿ ತಾಲೂಕಿ ನಾದ್ಯಂತ ತಡರಾತ್ರಿ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಹಳ್ಳ, ಕೊಳ್ಳಗಳಿಗೆ ಜೀವಕಳೆ ಬಂದಿದ್ದು, ವಿಜಯನಗರ ಜಿಲ್ಲೆಯ ಅತಿ ದೊಡ್ಡ ಕೆರೆ ಗಂಡ ಬೊಮ್ಮನಹಳ್ಳಿ ಕೆರೆ 14 ವರ್ಷದ ಬಳಿ ಕೆರೆ ಕೋಡಿ ಬಿದ್ದಿದೆ. ಮೀನು ಗಾರರಿಗೆ ಸಂತಸ ತಂದಿದೆ ಶುಕ್ರವಾರ ರಾತ್ರಿ ವ್ಯಾಪಕವಾಗಿ ಮಳೆಯಾಗಿದ್ದು, ಹಳ್ಳ–ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಕೆರೆ ಕಟ್ಟೆಗಳು ಭರ್ತಿಯಾಗಿವೆ. ಜಮೀನುಗಳಿಗೆ ನೀರು ನುಗ್ಗಿದ್ದು, ಕೆರೆ ತುಂಬಿ ಕೋಡಿ ಬಿದ್ದಿರುವುದು ಸಂತಸ ತಂದಿದೆ. ಜನ ಜಾನುವಾರುಗಳಿಗೆ ನೀರಿನ ಕೊರತೆ ಇಲ್ಲದಂತಾಗಿದೆ. ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಕೆರೆ ತುಂಬಿ ಹರಿಯುತ್ತಿರುವುದರಿಂದ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿರುವ ಸಾವಿರಕ್ಕೂ ಅಧಿಕ ಕೊಳವೆ ಬಾವಿಗಳ ಅಂತರ್ಜಲ ಮಟ್ಟವು ಹೆಚ್ಚಾಗಿ ನೀರಾವರಿಗೆ ಅನುಕೂಲವಾಗಲಿದೆ. ಗ್ರಾಮದ ಜನರಿಗೆ ನೀರನ ಸಮಸ್ಯೆ ದೂರಾಗಲಿದೆ ಎಂದು ರೈತರು ಹಾಗೂ ಮೀನುಗಾರರು ತಿಳಿಸಿದರು..

ವರದಿ. ವಿರೇಶ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend