ಚೆಸ್ ಸ್ಪರ್ಧೆಯಲ್ಲಿ ಸತತವಾಗಿ ಎರಡನೇ ಬಾರಿ ಜಿಲ್ಲಾ ಮಟ್ಟದಲ್ಲಿ ವಿಜಯ ಸಾದಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ…!!!

ಚೆಸ್ ಸ್ಪರ್ಧೆಯಲ್ಲಿ ಸತತವಾಗಿ ಎರಡನೇ ಬಾರಿ ಜಿಲ್ಲಾ ಮಟ್ಟದಲ್ಲಿ ವಿಜಯ ಸಾದಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ… ಕೊಪ್ಪಳ ಜಿಲ್ಲೆ ಕೊಪ್ಪಳ ತಾಲೂಕಿನ ಮುನಿರಾಬಾದ ಗ್ರಾಮದ ಕುಮಾರಿ ಸಹನಾರವರು ಸತತವಾಗಿ ಎರಡನೇ ಬಾರಿ ಕೂಡ ಜಿಲ್ಲಾಮಟ್ಟಕ್ಕೆ ಆಯ್ಕೆ ಯಾಗಿರುವುದು ಕೊಪ್ಪಳ ಜಿಲ್ಲೆಗೆ ಹೆಮ್ಮೆ ತರುವಂತಹ ವಿಷಯ. ಕುಮಾರಿ ಸಹನಾರವರು ಮುನಿರಾಬಾದ್ ನಿವಾಸಿಯಾಗಿದ್ದು,ತಂದೆ ಶ್ರೀ ದೇವಪ್ರಸಾದ್ ತಾಯಿ ಶ್ರೀಮತಿ ರೇಣುಕಾರವರ ದ್ವಿತೀಯ ಸುಪಾತ್ರಿಯಾಗಿ ಜನಿಸಿ  ಚೆಸ್ ಸ್ಪರ್ಧೆಯಲ್ಲಿ ಇಡಿ ಜಿಲ್ಲೆ ಮೆಚ್ಚುವಂತ ಕೆಲಸ ಮಾಡಿದ್ದಾಳೆ. ಕುಮಾರಿ ಸಹನಾರವರು ಇದೆ ಜಿಲ್ಲೆಯ ಶಿಕ್ಷಯತನ ಆಂಗ್ಲ ಮಾಧ್ಯಮ ಶಾಲೆ ಹುಲಿಗಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಈ ಶಾಲೆಗೆ ಗೌರವ ತರುವಂತಹ ವಿಷಯ. ಕಳೆದ ತಾಲೂಕು ಮಟ್ಟದ ಚೆಸ್ ಸ್ಪರ್ಧೆ ಕೊಪ್ಪಳದಲ್ಲಿ ವಿಜಯತಳಾಗಿ ದಿನಾಂಕ 30/09/22 ರಂದು ನೆಡದ ಚೆಸ್ ಸ್ಪರ್ಧೆ ಸಿದ್ದಾಪುರದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇಲ್ಲಿನ ಗ್ರಾಮಸ್ಥರು ಹಾಗೂ ಶಿಕ್ಷಯಾತನ ಶಾಲೆಯ ಮುಕ್ಯೋಪಾಧ್ಯಾರಾದ ಶ್ರೀ ಮಂಜುನಾಥ್ ನಾಯಕ್ ರವರು ಮತ್ತು ಈ ಶಾಲೆಯ ಶಿಕ್ಷಕವೃಂದದವರು ಈ ಬಾಲಕಿ ರಾಜ್ಯ ಮಟ್ಟದಲ್ಲಿ ವಿಜಯ ಪತಾಕೆಯನ್ನು ಹಾರಿಸಲಿ ಎಂಬುವುದು ಇವರೆಲ್ಲರ ಆಶಯ ಹಾಗೂ ನಮ್ಮ ಎಚ್ಚರಿಕೆ ಪತ್ರಿಕೆಯ  ಬಳಗದಿಂದ ಆಲ್ ದ ಬೆಸ್ಟ್ 👍..

ವರದಿ. ಉಮೇಶ್. ಕಂಪ್ಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend