ತೋಟಗಾರಿಕೆ ನಿರ್ದೇಶಕ ನೀಲಪ್ಪ ಅವರಿಗೆ ವಯೋ ನಿವೃತ್ತಿ ಬಿಳ್ಕೊಡುಗೆ…!!!

ತೋಟಗಾರಿಕೆ ನಿರ್ದೇಶಕ ನೀಲಪ್ಪ ಅವರಿಗೆ ವಯೋ ನಿವೃತ್ತಿ ಬಿಳ್ಕೊಡುಗೆ

ಕೂಡ್ಲಿಗಿ ಪಟ್ಟಣದ ತೋಟಗಾರಿಕೆ ಇಲಾಖೆಯ ಅಧಿಕಾರಿ ನೀಲಪ್ಪ ಎಂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಇವರ ವಯಾ ನಿವೃತ್ತಿ ಬಿಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು. ಇದೆ ವೇಳೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ನೀಲಪ್ಪ ಮಾತನಾಡಿ ಸರ್ಕಾರಿ ನೌಕರರಿಗೆ ವರ್ಗಾವಣೆ ಅನಿವಾರ್ಯ ಆದರೆ, ಕೆಲಸ ನಿರ್ವಹಿಸಿದ ಸ್ಥಳದಲ್ಲಿ ಅಧಿಕಾರಿ ನಿರ್ವಹಿಸಿದ ಕೆಲಸ ಸ್ಥಳೀಯರಲ್ಲಿ ಶಾಶ್ವತವಾಗಿ ಉಳಿಯುವಂತಾದಾಗ ಮಾತ್ರ ಸೇವೆಗೆ ನಿಜವಾದ ಅರ್ಥ ಬರುತ್ತದೆ ಎಂದರು. ಈ ಸಂದರ್ಭದಲ್ಲಿ ವರ್ಗಾವಣೆಯಾದ ಸಹಾಯಕ ನಿರ್ದೇಶಕ ನೀಲಪ್ಪ ಎಂ‌ ಅವರನ್ನು ಮಾಲಾರ್ಪಣೆ ಮಾಡಿ ಶಾಲುಹೊದಿಸಿ ಸನ್ಮಾನಿಸುವ ಮೂಲಕ ಬೀಳ್ಕೊಡೆಗೆ ನೀಡಲಾಯಿತು.‌ ಇವರು ಸರ್ಕಾರಿ ನೌಕರರಿಗೆ ಪ್ರಾರಂಭಿಸಿದ್ದು ದಿನ10-02-1999 ರಿಂದ ಹಿಸತೋನಿ ಜಿ.ಪಂ ಕೂಡ್ಲಿಗಿ ತಾಲೂಕಿನ 01-06-2018 ರಿಂದ 30-09-2022 ಕೂಡ್ಲಿಗಿಯಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾಗಿ ಐದು ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಈ ಒಂದು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಹನುಮೇಶ್ ನಾಯಕ್, ನಾಗರಾಜ್ ಕೊಟ್ಟೂರು, ಎಂಎಂ ಶಿವಕುಮಾರ್ ಚಿಕ್ಕ ಜೋಗಿಹಳ್ಳಿ, ಕೊಟ್ರೇಶ್ ಗುಡೆಕೋಟೆ, ನಂದೀಶ್ ಕೂಡ್ಲಿಗಿ, ಯೋಗೇಶ್ ಬಳ್ಳಾರಿ, ರೈತ ಸಂಘದ ಮುಖಂಡ ಮಹೇಶ್, ಕೊಟ್ಟೂರ್ ಕಾವೇರಿ, ನಂದಿನಿ ಕೊಟ್ಟೂರು, ಎಚ್ ಓ ಬಸವೇಶ್ ಸಿಎಸ್ ಪುರ, ಕಚೇರಿ ಸಹಾಯಕ ಖಾಜಾ ಹುಸೇನ್ ಎಫ್ ಡಿ ಎ, ತಿಪ್ಪೇಸ್ವಾಮಿ ಸಂಡೂರು, ಪ್ರಶಾಂತ್ ನಾಯಕ್, ಸೊಂಡೂರ್ ಶಿವಣ್ಣ, ಸಾಸಲವಾಡು ವಿಜಯಕುಮಾರ್, ಯಶ್ಮಾ ಕಂಪ್ಯೂಟರ್ ಆಪರೇಟರ್, ಶಾಂಭೋಗ್, ಶ್ರೀನಾಥ್, ರಾಜಶೇಖರ್, ಭರತೇಶ್ ಸೇರಿದಂತೆ ಸಿಬ್ಬಂದಿಗಳು, ತಾಲೂಕಿನ ರೈತರು, ವಿವಿಧ ಸಂಘ-ಸಂಸ್ಥೆಗಳ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend