;

ಮಾದಕ ವ್ಯಸನದಿಂದ ಬದುಕು ಹಾಳು- ನ್ಯಾಯಮೂರ್ತಿ ದೀಪಾ…!!!

ಮಾದಕ ವ್ಯಸನದಿಂದ ಬದುಕು ಹಾಳು- ನ್ಯಾಯಮೂರ್ತಿ ದೀಪಾ.

ಸಿಂಧನೂರು.ಸೆ.29-ಮಾದಕ ವ್ಯಸನದಿಂದ ಬದುಕು ಹಾಳಾಗುವದರ ಜೋತೆಗೆ ಇಡೀ ಜೀವನ ಕಣ್ಣಿರಿನಲ್ಲಿ ಕೈ ತೊಳೆಯಬೇಕಾಗುತ್ತದೆ ಆದ್ದರಿಂದ ಮಾದಕ ವ್ಯಸನದಿಂದ ಮುಕ್ತರಾಗಿ ಸುಂದರ ಸಂತೋಷಮಯ ಜೀವನ ಸಾಗಿಸಿ ಸಮಾಜದಲ್ಲಿ ಗೌರವಯುತವಾಗಿ ಬಾಳಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ದೀಪಾ ಮನೇರಕರ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಆಕ್ಸ್ಫರ್ಡ್ ಪದವಿ ಹಾಗೂ ಪದವಿ ಪೂರ್ವ ಕಾಲೇಜ್ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಆಕ್ಸ್ಫರ್ಡ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಾದಕ ವ್ಯಸನ ಮುಕ್ತ ಯುವ ಪೀಳಿಗೆ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

22 ವರ್ಷದ ತನಕ ವಿದ್ಯಾರ್ಥಿ ಯುವ ಜನರು ದುಶ್ಚಟಗಳಿಂದ ‌ದೂರ ಇರುತ್ತಾರೊ ಅಂಥವರ ಜೀವನ ಉತ್ತಮವಾಗಿರುವುದರ ಜೊತೆಗೆ ಸಮಾಜದಲ್ಲಿ ಏನಾದರೂ ಸಾಧಿಸಲು ಸಾಧ್ಯ. ಓದುವ ಸಮಯದಲ್ಲಿ ಯಾವುದೆ ದುಶ್ಚಟಗಳಿಗೆ ದಾಸರಾಗದೆ ಗುರು ಹಿರಿಯರ ಮಾರ್ಗದರ್ಶನದಲ್ಲಿ ಹಾಗೂ ಶಿಕ್ಷಕರು ಹೇಳಿದ ಪಾಠವನ್ನು ಕಲಿತ ದೇಶದ ಉತ್ತಮ ನಾಗರಿಕರಾಗಿ ಬಾಳಿ ಪಾಲಕರು ಮತ್ತು ವಿದ್ಯಾ ಕಲಿಸಿದ ಗುರುಗಳಿಗೆ ಕಾಲೇಜಿಗೆ ಉತ್ತಮ ಹೆಸರು ತರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾನೂನು ಸೇವಾ ಸಮಿತಿಯಿಂದ ಉಚಿತ ಕಾನೂನು ನೆರವು ನೀಡಲಾಗುತ್ತಿದೆ ಹಣ ಇಲ್ಲದ ದುರ್ಬಲರು,ಮಹಿಳೆಯರು,ವಿದ್ಯಾರ್ಥಿಗಳು ,ಯುವಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನ್ಯಾಯಾಧೀಶರಾದ ದೀಪ ಮನೇರಕರ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಪ್ರದಾನ ಸಿವಿಲ್ ನ್ಯಾಯಾಧೀಶ ರಾದ ಕೋಟೆಪ್ಪ ಕಾಂಬ್ಳೆ, ಒಂದನೆಯ ಅಪರ ಸಿವಿಲ್ ನ್ಯಾಯಾಧೀಶರಾದ ಆನಂಧಪ್ಪ, ಎರಡನೆ ಅಪರ ಸಿವಿಲ್ ನ್ಯಾಯಾಧೀಶರಾದ ಆಚಪ್ಪ ದೊಡ್ಡ ಬಸವರಾಜ,ಸಹಾಯಕ ಸರ್ಕಾರಿ ಅಬಿಯೋಜಕ ರಾದ ಮಾರುತಿ ಕಲ್ಲೂರ, ವಕೀಲರ ಸಂಘದ ಖಜಾಂಚಿ ವೀರಭದ್ರಗೌಡ,ಕಾಲೇಜಿನ ಉಪ ಪ್ರಾಚಾರ್ಯರಾದ ಸಂಜೀವ ಕುಮಾರ, ಸಹನ ಹಿರೇಮಠ ವಕೀಲರು, ಸೇರಿದಂತೆ ಇತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಗೌರಮ್ಮ ವಕೀಲರು ಉಪನ್ಯಾಸ ನೀಡಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;