ಕಾರುಣ್ಯ ಆಶ್ರಮಕ್ಕೆ ದೇವರ ಅನುಗ್ರಹ ಸದಾವಕಾಲ ಇರುತ್ತದೆ – ಸಿದ್ದರಾಮೇಶ್ವರ ಶರಣರು…!!!

ಕಾರುಣ್ಯ ಆಶ್ರಮಕ್ಕೆ ದೇವರ ಅನುಗ್ರಹ ಸದಾವಕಾಲ ಇರುತ್ತದೆ – ಸಿದ್ದರಾಮೇಶ್ವರ ಶರಣರು

ಸಿಂಧನೂರು:ಸ.27. ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮ ಕುಷ್ಟಗಿ ರಸ್ತೆಯಿಂದ ಒಳಬಳ್ಳಾರಿರಸ್ತೆಯಲ್ಲಿ ನ ನೂತನ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಕಾಮಗಾರಿ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ವೆಂಕಟಗಿರಿ ಕ್ಯಾಂಪಿನ ಸಿದ್ದಾಶ್ರಮದ ಡಾ. ಸಿದ್ದರಾಮೇಶ್ವರ ಶರಣರ ಅಮೃತ ಹಸ್ತದಿಂದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಅಂಬಾದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು.

ದಿವ್ಯ ಸಾನಿಧ್ಯ ವಹಿಸಿದ್ದ ವೆಂಕಟಗಿರಿ ಸಿದ್ದಾಶ್ರಮದ ಡಾ.ಸಿದ್ದರಾಮೇಶ್ವರ ಶರಣರು ಕಾರುಣ್ಯ ಆಶ್ರಮಕ್ಕೆ ದೇವರ ಅನುಗ್ರಹ ಸದಾವಕಾಲ ಇರುತ್ತದೆ. ಅನೇಕ ಅಂಧ ಅನಾಥರ ಬಾಳಿಗೆ ಬೆಳಕಾಗಿ ನಾಡಿನಾದ್ಯಂತ ದಾನಿಗಳ ಪ್ರೀತಿಗೆ ಪಾತ್ರವಾದ ಯಾವುದಾದರೂ ಸಂಸ್ಥೆ ಅಂದರೆ ಅದು ಕಾರುಣ್ಯ ಸಂಸ್ಥೆ ಎನ್ನುವ ನಿಟ್ಟಿನಲ್ಲಿ ಕಾರುಣ್ಯ ಆಶ್ರಮ ಮನೆ ಮಾತಾಗಿದೆ. ಮನುಷ್ಯ ತನಗಾಗಿ ತನ್ನ ಕುಟುಂಬಕ್ಕಾಗಿ ಬದುಕು ವಂತಹ ದಿನಮಾನಗಳಲ್ಲಿ ಹರೇಟನೂರಿನ ಒಬ್ಬ ಬಡ ಜಂಗಮ ಡಾ. ಚನ್ನಬಸವ ಸ್ವಾಮಿ ಹಿರೇಮಠ ತನ್ನ ಜೋಳಿಗೆಯ ಮೂಲಕ ಎಷ್ಟೋ ಅನಾಥ ಜೀವಿಗಳನ್ನು ಬದುಕಿಸುವ ಕಾರ್ಯ ಶ್ಲಾಘನೀಯ. ತನ್ನ ಇಡೀ ಕುಟುಂಬವನ್ನೇ ಸಮಾಜ ಸೇವೆಯಲ್ಲಿ ತೊಡಗಿಸಿ ಶರಣರ ಪ್ರೀತಿಗೆ ಪಾತ್ರನಾಗಿ ಎಲ್ಲರ ಮಾರ್ಗದರ್ಶನದೊಂದಿಗೆ ಮುನ್ನಡೆಯುತ್ತಿರುವ ಈ ಕಾರುಣ್ಯ ಆಶ್ರಮ ಮಾನವ ಧರ್ಮದ ಮಾನವೀಯತೆಯನ್ನು ಎತ್ತಿ ಹಿಡಿದಿದೆ. ಇಂದು ಇಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಟ್ಟಡಕ್ಕೆ ನಮ್ಮೆಲ್ಲಾ ಭಕ್ತರಿಗೆ ಸಹಾಯ ಮಾಡುವಂತೆ ಸೂಚಿಸುತ್ತೇವೆ ಸಿಂಧನೂರಿನ ಎಲ್ಲಾ ಜನತೆಯೂ ಕೂಡ ತಮ್ಮ ಕೈಲಾದ ಸಹಾಯ ಮಾಡಿ ಅನಾಥರ ಶಾಶ್ವತ ನೆಲೆಯಾಗಿ ನಿರ್ಮಾಣವಾಗುತ್ತಿರುವ ಕಾರುಣ್ಯ ಆಶ್ರಮಕ್ಕೆ ಸಹಾಯ ಮಾಡಿರಿ ಎಂದು ಆಶೀರ್ವಚನ ನೀಡಿದರು.

ಆಶ್ರಮದ ಪದಾಧಿಕಾರಿಗಳಾದ ಶರಣು. ಪಾ. ಹಿರೇಮಠ, ಅಮರಯ್ಯ ಸ್ವಾಮಿ ಹಿರೇಮಠ ಅಲಬನೂರು, ವೀರೇಶ ಯಡಿಯೂರುಮಠ, ಶೇಖರಯ್ಯ ಸ್ವಾಮಿ ಗೊರೇಬಾಳ, ವೀರಭದ್ರಗೌಡ ಗಿಣಿವಾರ, ದತ್ತಾತ್ರೆಯ ಶೆಟ್ಟಿ ಬಾದರ್ಲಿ, ಹೊಸಗೇರಪ್ಪ ಗೊರೇಬಾಳ, ವೀರಭದ್ರಗೌಡ ಬಾದರ್ಲಿ,ಹಾಗೂ ಆಡಳಿತ ಅಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಹರೇಟನೂರು ಇವರುಗಳಿಗೆ ಸನ್ಮಾನಿಸಿ ಶುಭಾಶೀರ್ವಾದ ಕರುಣಿಸಿದರು.

ಈ ಕಾರ್ಯಕ್ರಮದಲ್ಲಿ ಆಶ್ರಮದ ಸಿಬ್ಬಂದಿಗಳಾದ ಅಮರೇಶ ಸೋನು ದೀಕ್ಷಿತ್, ಅಮರೇಶ ಸ್ವಾಮಿ. ಮರಿಯಪ್ಪ, ಕರಿಯಪ್ಪ, ಗಿರಿಜಮ್ಮ, ಹರ್ಷವರ್ಧನ, ಶರಣಮ್ಮ, ದೇವಮ್ಮ,ಇನ್ನಿತರರು ಉಪಸ್ಥಿತರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend