ವಿಶ್ವಕರ್ಮ ಜಯಂತಿಯ ಆಯವ್ಯಯ ಹಾಗೂ ಕಾಳಿಕಾದೇವಿ ದೇವಸ್ಥಾನದ ಜೀರ್ಣೋದ್ಧಾರ ಸಭೆ.
ಸಿಂಧನೂರು : ಸ. 22.ತಾಲೂಕಿನ ಕಾಳಿಕಾದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಮಾಡ ಬೇಕಾಗಿದೆ ಎಲ್ಲರೂ ಸಹಾಯ ಸಹಕಾರ ನೀಡಬೇಕು ಎಂದು ತಾಲೂಕು ವಿಶ್ವಕರ್ಮ ಸಮಾಜದ ಉಪಾಧ್ಯಕ್ಷರಾದ ದರ್ಮಣ್ಣ ಗುಂಜಳ್ಳಿ ತಿಳಿಸಿದರು.
ಹಳೆ ಬಜಾರ ಹಾಗೂ ವಾರ್ಡ ನಂ 4ರಲ್ಲಿ ಕಾಳಿಕಾದೇವಿ ದೇವಸ್ಥಾನದಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಶ್ರೀ ಕಾಳಿಕಾ ದೇವಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ವಿಶ್ವಕರ್ಮ ಜಯಂತಿಯ ಕಾರ್ಯಕ್ರಮದ ಆಯವ್ಯಯ ಸಭೆಯಲ್ಲಿ ಮಾತನಾಡಿದರು
ತಾಲೂಕಿನ ವಿಶ್ವಕರ್ಮ ಸಮಾಜ ಇಡೀ ರಾಜ್ಯಕ್ಕೆ ಮಾದರಿ ಯಾಗಿದೆ. ಯುವ ಮುಖಂಡ ಚನ್ನಪ್ಪ ವಿಶ್ವಕರ್ಮ ಕೆ.ಹೊಸಳ್ಳಿ ಅವರು ಸಮಾಜದ ಕಾರ್ಯ ಗಳನ್ನು ಸಾಮಾಜಿಕ ಜಾಲತಾಣದ ಮುಖಾಂತರ ರಾಜ್ಯದ ವಿಶ್ವಕರ್ಮ ಸಮಾಜದ ನಾಯಕ ಕೆ.ಪಿ.ನಂಜುಂಡಿ ಅವರಿಗೆ ಟೆಲಿಗ್ರಾಂ ಮೂಲಕ ಎಲ್ಲಾ ವಿಷಯಗಳನ್ನು ತಿಳಿಸುವಲ್ಲಿ ತುಂಬಾ ಕಾರ್ಯ ಪ್ರವೃತ್ತರಾಗಿದ್ದಾರೆ. ಇದನ್ನು ತಿಳಿದ ಕೆ.ಪಿ.ನಂಜುಂಡಿ ಅವರು ಇವರ ಕಾರ್ಯ ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟನಾತ್ಮಕ ಒಳ್ಳೆಯ ವಿಷಯಗಳನ್ನು ತಿಳಿಯ ಪಡಿಸಲಿ, ಟೆಲಿಗ್ರಾಂ ಗ್ರೂಪಿಗೆ ಸದಸ್ಯರನ್ನು ಸೇರಿಸಲಿ ಎಂದು ರಾಜ್ಯ ಕಾರ್ಯದರ್ಶಿಯಾದ ಸೋಮಣ್ಣ ಪತ್ತಾರ ಸುಕಾಲಪೇಟೆ ಇವರಿಗೆ ಕರೆ ಮಾಡುವ ಮೂಲಕ ತಿಳಿಸಿದರು ಇವರಿಗೆ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಎಂದರು.
ಸೆಪ್ಟೆಂಬರ್17 ರಂದು ಖರ್ಚು ವೆರ್ಚಗಳ ಬಗ್ಗೆ, ST ಮೀಸಲಾತಿ ಬಗ್ಗೆ , ಕಾಳಿಕಾದೇವಿ ದೇವಸ್ಥಾನದ ನಿರ್ಮಾಣ ಕುರಿತು,ಟೆಲಿಗ್ರಾಂ ಗ್ರೂಪಿಗೆ ಸದಸ್ಯರನ್ನು ಸೇರಿಸುವ ಕುರಿತು ಇನ್ನೂ ಹಲವಾರು ವಿಷಯಗಳ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ರಾಜ್ಯ ಕಾರ್ಯದರ್ಶಿ ಸೋಮಣ್ಣ ಪತ್ತಾರ ಸುಕಲಪೇಟೆ, ತಾಲೂಕ ಅದ್ಯಕ್ಷರಾದ ವೀರಭದ್ರಪ್ಪ ಹಂಚಿನಾಳ, ಶ್ರೀ ಕಾಳಿಕಾದೇವಿ ಟ್ರಸ್ಟ್ ಅದ್ಯಕ್ಷರಾದ ಮಂಜುನಾಥ ಬಡಿಗೇರ, ಉಪಾಧ್ಯಕ್ಷರಾದ ದರ್ಮಣ್ಣ ಗುಂಜಳ್ಳಿ, ಮೌನೇಶ ನಿಡಿಗೋಳ, ಕಾರ್ಯದರ್ಶಿ ಬಸವರಾಜ ಕಮತಗಿ, ಮುಖಂಡ ರಾದ ಗಣೇಶ ಸುಕಲಪೇಟೆ, ಶಂಕರ್ ಪತ್ತಾರ, ಮುತ್ತಣ್ಣ ಪತ್ತಾರ ರವಿ ಪತ್ತಾರ, ಮೌನೇಶ ಸಾಲಗುಂದ, ಷಣ್ಮುಖಪ್ಪ ಪತ್ತಾರ, ವಿನೋದ, ಶೇಖರ್ ಪತ್ತಾರ, ಮೌನೇಶ ಆರ್ಕೇಸ್ಟ್ರಾ, ಇನ್ನೂ ಮುಂತಾದವರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
