ನನ್ನ ಸಮಾಜ ನನ್ನ ಕರ್ತವ್ಯ ಎಂದು ಕಾರ್ಯ ಪೂರೈಸಿದ ಉಸ್ಮಾನ ಪಾಶ ಮಾಕಾಂದಾರ….!!!

ನನ್ನ ಸಮಾಜ ನನ್ನ ಕರ್ತವ್ಯ ಎಂದು ಕಾರ್ಯ ಪೂರೈಸಿದ ಉಸ್ಮಾನ ಪಾಶ ಮಾಕಾಂದಾರ.

ಸಿಂಧನೂರು :ಸ. 22.ಇಂದು ಬೆಳಿಗ್ಗೆ ನಗರದ ಹಣ್ಣಿನ ಮಾರುಕಟ್ಟೆಯಲ್ಲಿ ಒಬ್ಬ ಅಪರಿಚಿತ ಸುಮಾರು ದಿನಗಳಿಂದ ಅಲ್ಲಿಯೇ ಸುತ್ತಾಡಿಕೊಂಡು ಊಟ ಉಪಚಾರ ಮಾಡಿ ಇಲ್ಲಿಯೇ ಮಲಗುತ್ತಿದ್ದ ಇಂದು ದಿಡೀರನೆ ವ್ಯಕ್ತಿ ಮಲಗಿಕೊಂಡ ಹಾಗೆಯೇ ಸಾವನ್ನಪ್ಪಿದ ಘಟನೆ ನಡೆದಿದೆ.

ಜನರು ಕಂಡರು ಕಾಣದ ಹಾಗೆ ಓಡಾಡುತ್ತಿದ್ದರು ಇದನ್ನು ಗಮನಿಸಿದ ಒಬ್ಬ ವ್ಯಕ್ತಿ ಸಮಾಜ ಸೇವಕ ಎಂದೇ ಹೆಸರಾದ ಉಸ್ಮಾನ್ ಪಾಶ ಅವರಿಗೆ ಮಾಹಿತಿ ನೀಡಿದರು.ಆಟೋ ಚಾಲಕ ಹಾಗೂ ಸಮಾಜ ಸೇವಕ ಉಸ್ಮಾನ್ ಪಾಶ ಮಕಾಂದಾರ ತಕ್ಷಣ ಸ್ಥಳಕ್ಕೆ ಆಗಮಿಸಿ ಶವವನ್ನು ನೋಡಿ ಪೊಲೀಸರ ಗಮಕ್ಕೆ ತರಲಾಯಿತು.

ಆ ಅಪರಿಚಿತ ವ್ಯಕ್ತಿ ಬಗ್ಗೆ ಯಾರು ಎಲ್ಲಿ ಇರುತ್ತಾರೆ ಎಂದು ತಿಳಿದು ಕೊಂಡು ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿಲಾಯಿತು. ಸ್ಥಳಕ್ಕೆ ಬಂದ ಕುಟುಂಬಸ್ಥರು ನಂತರ ಅವರ ಅಂತಿಮ ಕಾರ್ಯಗಳಿಗೆ ಸಹಕಾರ ನೀಡಿದರು. ಸ್ಥಳೀಯರು ಮತ್ತು ಸಂಬಂಧಿಕರು ಸ್ನೇಹಿತರು ಮತ್ತು ಅವರ ತಮ್ಮನ ಜೊತೆಗೆ ಉಸ್ಮಾನ್ ಪಾಶ ಮಕಾಂದಾರ ಅವರು ಅಂತಿಮ ಕಾರ್ಯಗಳನ್ನು ನೆರವೇರಿಸಿದರು.ಅನೇಕ ವರ್ಷಗಳಿಂದ ಹೊರಗಡೆ ಬದುಕುತ್ತಿದ್ದ ವ್ಯಕ್ತಿ ಮನೆಗೆ ಹೋಗುತ್ತಿರಲಿಲ್ಲ ಎಂದು ತಿಳಿದು ಬಂತು. ನನ್ನ ಸಮಾಜ ನನ್ನ ಕರ್ತವ್ಯ ಎಂದು ಕಾರ್ಯ ಪೂರೈಸಿದ ಉಸ್ಮಾನ ಪಾಶ ಮಾಕಾಂದಾರ ಸಮಾಜ ಸೇವಕರ ಕಾಯಕ ಶ್ಲಾಗನೀಯವಾದದ್ದು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend