ಕಾನಹೊಸಹಳ್ಳಿ ಯಲ್ಲಿ ಭಾರತ್ ಜೋಡೊ ಯೂತ್ ಜೋಡೊ ಪೂರ್ವಭಾವಿ ಸಭೆ…!!!

ಕಾನಹೊಸಹಳ್ಳಿ ಯಲ್ಲಿ ಭಾರತ್ ಜೋಡೊ ಯೂತ್ ಜೋಡೊ ಪೂರ್ವಭಾವಿ ಸಭೆ.

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭಾರತ ಜೋಡೂ ಯೂತ್ ಜೋಡೋ ಕಾರ್ಯಕ್ರಮದ ಪೂರ್ವಭಾವಿ ಸಭೆ ಕರೆಯಲಾಯಿತು ಈ ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಅಬ್ದುಲ್ ರಜಾಕ್ ರವರು ಮತ್ತು ಯೂತ್ ಕಾಂಗ್ರೆಸ್ ನ ವಿಜಯನಗರ ಜಿಲ್ಲಾ ಉಪಾಧ್ಯಕ್ಷರಾದ ಗಂಗಾಧರ ಗೌಡ ರವರು ಆಗಮಿಸಿದ್ದರು ಹಾಗೂ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆ ಜಿ ಕುಮಾರ ಗೌಡ ರವರ ನೇತೃತ್ವದಲ್ಲಿ ಯೂತ್ ಕಾಂಗ್ರೆಸ್ಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅಧ್ಯಕ್ಷರನ್ನಾಗಿ ಎ ಚಿತ್ರೇಶ್ ಹಾರಕಭಾವಿ ರವರನ್ನು ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ ಎ ಮನೋಜ್ ಕುಮಾರ್. ಹಿರೇಕುಂಬಳಗುಂಟೆ ರವರು ಭಾರತ್ ಜೋಡೊ ಯೂತ್ ಜೋಡೊ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಯವರ ಸಾರಥ್ಯದಲ್ಲಿ ಭಾರತ್ ಜೋಡೊ ಪಾದಯಾತ್ರೆಯು ಭಾರತ ಐಕ್ಯತಾ ಯಾತ್ರೆ ನಡೆಯುತ್ತಿದೆ ಈ ಯಾತ್ರೆಯು ಕರ್ನಾಟಕವನ್ನು ಹಾದು ಹೋಗುವ ಸಂದರ್ಭದಲ್ಲಿ ಪ್ರತಿದಿನವೂ ಅದು ಯಶಸ್ವಿಯಾಗಿ ಐತಿಹಾಸಿಕವಾಗಿ ಜರುಗಬೇಕು ಎನ್ನುವುದು ಎಲ್ಲರ ಆಶಯವಾಗಿದೆ ಈ ಸಭೆಯಲ್ಲಿ ಮಾತನಾಡಿದರು ಈ ಸಭೆಯಲ್ಲಿ ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಜಿ ಕುಮಾರ ಗೌಡ್ರು ಹಾಗು ಗಫರ್ ಸಿದ್ದಲಿಂಗಪ್ಪ ಇಜಾಜ್ ಎಳ್ನೀರ್ ಗಂಗಣ್ಣ ಯೂಥ್ ಕಾಂಗ್ರೆಸ್ನ ಅಧ್ಯಕ್ಷರಾದ ಚಿತ್ರೆಶ್ ಹಾರಕಬಾವಿ ಎಸ್ ಕೆ ಮಹಾಂತೇಶ್ ಗೌಸ್ ಎಂ ಸಿದ್ದನಗೌಡ ಹಾಗೂ ಇನ್ನೂ ಮುಂತಾದ ಮುಖಂಡರು ಆಗಮಿಸಿದ್ದರು..

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend