ಡಾ. ಚನ್ನಬಸವ ಸ್ವಾಮಿ ಹಾಗೂ ಅಶೋಕ ನಲ್ಲಗೆ ಒಲಿದು ಬಂದ “ಕನ್ನಡ ಮಾಣಿಕ್ಯ” ರಾಜ್ಯ ಪ್ರಶಸ್ತಿ…!!!

ಡಾ. ಚನ್ನಬಸವ ಸ್ವಾಮಿ ಹಾಗೂ ಅಶೋಕ ನಲ್ಲಗೆ ಒಲಿದು ಬಂದ “ಕನ್ನಡ ಮಾಣಿಕ್ಯ” ರಾಜ್ಯ ಪ್ರಶಸ್ತಿ

ಸಿಂಧನೂರು : ಸೆ.19 ಬೆಂಗಳೂರಿನ ಮಲ್ಲೇಶ್ವರಂ ಸೇವಾ ಸದನದಲ್ಲಿ ಗೆಜ್ಜೆ ಹೆಜ್ಜೆ ರಂಗ ತಂಡ (ರಿ) 42ನೇ ವರ್ಷ ಪೂರೈಸಿ 43ರ ಕ್ರಿಯಾಶೀಲ ವಾರ್ಷಿಕ ಹೆಜ್ಜೆ ಹಾಗೂ ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮ ಪಿಂಕ್ ಪರ್ಲ್ ಲೇಡೀಸ್ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರ ಸಮಕ್ಷಮದಲ್ಲಿ ಅನಾಥಪರ ಸೇವೆಯನ್ನು ಗುರುತಿಸಿ ನಗರದ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದ ಆಡಳಿತ ಅಧಿಕಾರಿಗಳಾದ ಡಾ. ಚನ್ನಬಸವಸ್ವಾಮಿ ಹಿರೇಮಠ ಹಾಗೂ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ನ ಕಾರ್ಯದರ್ಶಿಗಳಾದ ಅಶೋಕ ನಲ್ಲ ಇವರುಗಳಿಗೆ “ಕನ್ನಡ ಮಾಣಿಕ್ಯ” ಎನ್ನುವ ಶ್ರೇಷ್ಠ ರಾಜ್ಯ ಪ್ರಶಸ್ತಿಯನ್ನು ವಿತರಿಸಿ ಸನ್ಮಾನಿಸಿ ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯದ ಖ್ಯಾತ ಶಸ್ತ್ರ ಚಿಕಿತ್ಸೆ ವೈದ್ಯರಾದ ಡಾ. ಆಂಜಿನಪ್ಪ ಇಂದು ಈ ತಂಡದ ಕಾರ್ಯಕ್ರಮ ವಿಶೇಷವಾದ ಕಾರ್ಯಕ್ರಮ ಸುಮಾರು 42 ವರ್ಷಗಳ ಕಾಲ ರಂಗಭೂಮಿಯ ಘನತೆ ಗೌರವವನ್ನು ಉಳಿಸಿಕೊಂಡಿರುವ ಈ ತಂಡ ಹಳ್ಳಿಯ ಸೊಬಗಿನ ನಾಟಕಗಳನ್ನು ನಟಿಸುವ ಮೂಲಕ ನಮ್ಮ ಹಳೆಯ ಪರಂಪರೆಯನ್ನು ಜನರಿಗೆ ತೋರಿಸುತ್ತದೆ. ಇಂದಿನ ಈ ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲೆ ಸಿಂಧನೂರಿನ ನನಗೆ ಪರಿಚಿತರಾದ ಅನಾಥ ಜೀವಿಗಳಿಗೆ ತಮ್ಮ ಜೀವನವನ್ನೇ ಮುಡುಪಿಟ್ಟಿರುವ ಡಾ. ಚನ್ನಬಸವ ಹಾಗೂ ಸಿಂಧನೂರು ಭಾಗದ ಯಾವುದೇ ಕಾರ್ಯಕ್ರಮಗಳಲ್ಲಿ ಉಳಿದಿರುವ ಆಹಾರವನ್ನು ಶೇಖರಣೆ ಮಾಡಿ ನಿರ್ಗತಿಕ ಬಡ ಕುಟುಂಬಗಳಿಗೆ ಆಹಾರವನ್ನು ತಲುಪಿಸಿ ಹಸಿವು ನೀಗಿಸುತ್ತಿರುವ ಅಶೋಕ ನಲ್ಲ ಇವರುಗಳಿಗೆ ಈ ರಂಗ ಭೂಮಿಯಲ್ಲಿ ನೀಡುತ್ತಿರುವ “ಕನ್ನಡ ಮಾಣಿಕ್ಯ” ಪ್ರಶಸ್ತಿ ಅರ್ಥಪೂರ್ಣವಾಗಿದೆ ಈ ಸಂಸ್ಥೆಯ ಅಧ್ಯಕ್ಷರು ಹಾಗೂ ಚಲನಚಿತ್ರ ನಟರಾದ ಮೈಸೂರು ರಮಾನಂದ ಅವರು ಕಡುಬಡತನದಲ್ಲಿ ರಂಗಭೂಮಿಯ ಕಲೆ ನಾಟಕಗಳನ್ನು ಉಳಿಸಿ ನಮ್ಮ ನಾಡಿನ ಕಲೆಗೆ ಶಕ್ತಿ ತುಂಬುತ್ತಿದ್ದಾರೆ ಎಂದು ಮಾತನಾಡಿದರು.

ನಂತರ ಮಾತನಾಡಿದ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಕರುನಾಡಿನ ಸಂಸ್ಕೃತಿ ನಟನೆ ರಂಗ ಭೂಮಿಯ ಇತಿಹಾಸವನ್ನು ನಾವೆಲ್ಲರೂಕೇಳಿದ್ದೇವೆ. ಇಂತಹ ಒಂದು ತಂಡ ನಮ್ಮಿಬ್ಬರನ್ನು ಗುರುತಿಸಿ ನೀಡಿರುವ ” ಕನ್ನಡ ಮಾಣಿಕ್ಯ ಪ್ರಶಸ್ತಿ” ಸರ್ವ ಸಮಸ್ತ ತಾಲೂಕಿನ ಮಹಾಜನತೆಗೆ ಅರ್ಪಣೆ ಇಂತಹ ಪ್ರಶಸ್ತಿಗಳು ಗೌರವಗಳು ನಮ್ಮ ಸೇವೆಗೆ ಶಕ್ತಿ ತುಂಬುತ್ತಿವೆ ಹಾಗೂ ಜವಾಬ್ದಾರಿಯನ್ನು ಹೆಚ್ಚಿಸುತ್ತಿವೆ ಈ ಕನ್ನಡ ಮಾಣಿಕ್ಯ ಎಂದು ಗುರುತಿಸಿರುವ ಗೆಜ್ಜೆ ಹೆಜ್ಜೆ ರಂಗ ತಂಡಕ್ಕೆ ತಾಲೂಕಿನ ಜನತೆಯ ಪರವಾಗಿ ಅಭಿನಂದನೆಗಳು ಎಂದರು.

ಈ ಕಾರ್ಯಕ್ರಮದಲ್ಲಿ ಖ್ಯಾತ ಶಸ್ತ್ರ ಚಿಕಿತ್ಸೆ ವೈದ್ಯರಾದ ಡಾ. ಆಂಜಿನಪ್ಪ, ಗೆಜ್ಜೆ ಹೆಜ್ಜೆ ರಂಗ ತಂಡದ ಅಧ್ಯಕ್ಷರು ಹಾಗೂ ಚಲನಚಿತ್ರ ನಟರಾದ ಮೈಸೂರು ರಮಾನಂದ, 2022 ಭುವನ ಸುಂದರಿ ವಿಜೇತರಾದ ಡಾ.ಸತ್ಯವತಿ ಬಸವರಾಜ, ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿರ್ದೇಶಕರಾದ ಲಕ್ಷ್ಮಿ ಪತಯ್ಯ, ಪಿಂಕ್ ಪರ್ಲ್ ಲೇಡೀಸ್ ಕ್ಲಬ್ ಅಧ್ಯಕ್ಷ ರಾದ ವೀಣಾ, ಚಲನಚಿತ್ರ ನಟರು ನಿರ್ದೇಶಕರಾದ ಸ್ಮೈಲ್ ಶಿವು ಮತ್ತು ಅನೇಕ ರಂಗಭೂಮಿ ಕಲಾವಿದರುಗಳ ಸಮಕ್ಷಮದಲ್ಲಿ ಈ ಪ್ರಶಸ್ತಿಯನ್ನು ವಿತರಿಸಲಾಯಿತು.

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend