ಸೆ. 20 ರಂದು ಗಣೇಶ ವಿಸರ್ಜನೆಬೃಹತ್ ಶೋಭಾಯಾತ್ರೆ…!!!

ಸೆ. 20 ರಂದು ಗಣೇಶ ವಿಸರ್ಜನೆಬೃಹತ್ ಶೋಭಾಯಾತ್ರೆ

ಜೇವರ್ಗಿ :ರಾಮ ಸೇನಾ ಸಮಿತಿಯ ಗಣೇಶ ಮೂರ್ತಿಯನ್ನು ಸೆ. 20 ರ ಮಂಗಳವಾರದಂದು ವಿಸರ್ಜನೆ ಮಾಡಲಾಗುವದು ಎಂದು ರಾಮ ಸೇನೆಯ ತಾಲೂಕ ಅಧ್ಯಕ್ಷ ವೀರೇಶ್ ಪಾಟೀಲ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರವಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಗಣೇಶ ಮೂರ್ತಿಯನ್ನು 21 ದಿನಗಳಕಾಲ ಸ್ಥಾಪಿಸಿ 8ದಿನಗಳ ಸಂಸ್ಕøತಿಕಾ, ಮನೋರಂಜನೆ ಕಾರ್ಯಕ್ರಮಗಳ ಮೂಲಕ ಯುವ ಪ್ರತಿಭೆಗಳಿಗೆ ವೇದಿಕೆ ಮಾಡಿಕೊಡಲಾಗಿತ್ತು. 156 ಸ್ಪರ್ಧಾರ್ಥಿಗಳು ಪಾಲ್ಗೊಂಡಿದ್ದರು ಅದರಲ್ಲಿ 12ಜನ ವಿಜೇತರಾಗಿದ್ದಾರೆ ಎಂದು ಹೇಳಿದರು.

ಶ್ರೀರಾಮನ ಮೂರ್ತಿ, ಹನುಮಂತನ ಮೂರ್ತಿ, ಶಿವಾಜಿ ಮಹಾರಾಜರ ಮೂರ್ತಿ, ಸ್ತಬ್ದ ಚಿತ್ರ ಮೆರವಣಿಗೆ, ರಾಮ ಸೀತಾ ಹನುಮಂತ ಲಕ್ಷ್ಮಣ ವೇಷದಾರಿಗಳು ಪಾಲ್ಗೊಳ್ಳಲಿದ್ದಾರೆ.

ಶಾಸ್ತ್ರಿ ಚೌಕ್ ಇಂದ ಬಸವೇಶ್ವರ ವೃತ್ತ, ಜೋಪಡ್ಪಟ್ಟಿಯ ಮೂಲಕ ಮೆರವಣಿಗೆ ಭೀಮ ನದಿಗೆ ತಲುಪುವುದು ಎಂದರು.

ಶೋಭಾಯಾತ್ರೆಯನ್ನು ಭಾಷಣ ಮಾಡುವರು ಅಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು ಚಾಲನೆ ನೀಡುವರು, ವಿಜಯಪುರ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ದಿಕ್ಸೂಚಿ ಭಾಷಣ ಮಾಡುವರು.

ರಾಮಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ್, ವಿವಿಧ ಜಿಲ್ಲೆಯ ಅಧ್ಯಕ್ಷರು ಆಗಮಿಸುವವರು ಹಾಗೂ ವಿವಿಧ ಮಠಾಧೀಶರು ಸಾನಿಧ್ಯವಹಿಸುವರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗಣೇಶ ಉತ್ಸವ ಸಮಿತಿಯ ಅಧ್ಯಕ್ಷ ಶರಣು ಕೊಳಕೂರ್ ಹಿಂದೂ ಮುಖಂಡರಾದ ಈಶ್ವರ ಹಿಪ್ಪರಗಿ, ಆನಂದ ಜೇರಟಗಿ ಉಪಸ್ಥಿತರಿದ್ದರು..

ವರದಿ.ಬಸಯ್ಯ ಹಿರೇಮಠ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend