ಕರಡಿ ದಾಳಿಯಿಂದ ಮೆಕ್ಕೆಜೋಳದ ಬೆಳೆ ನಾಶ: ರೈತ ಆತಂಕ
ಕೂಡ್ಲಿಗಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮದ ರೈತರ ಜಮೀನಿಗೆ ಕರಡಿಗಳು ದಾಳಿ ಮಾಡಿ ಹಲವು ಎಕೆರೆಯಷ್ಟು ಮೈಕಜೋಳದ ಬೆಳೆಯನ್ನು ಕರಡಿ ತಿಂದು ನಾಶ ಪಡಿಸಿದ್ದು ರೈತರು ಕಂಗಲಾಗಿದ್ದಾರೆ. ನಿನ್ನೆ ರಾತ್ರಿ ಸಮಯದಲ್ಲಿ ನಾಗಲಾಪುರ ಕಂದಾಯಕ್ಕೆ ಸೇರಿದ ಬಡೇಲಡಕು ಜೆ ಶಂಕ್ರಪ್ಪ ತಂದೆ ಜೆ ಕೃಷ್ಣಪ್ಪ ಎಂಬುವರ ಹೋಲದಲ್ಲಿ ಕಾಳುಕಟ್ಟಿದ ಅಪಾರಪ್ರಮಾಣದ ಮೆಕ್ಕೆಜೋಳವನ್ನು ನಾಶಪಡಿಸಿವೆ. ಹತ್ತು ದಿನಗಳ ಯಿಂದೆಯಷ್ಠೆ ಇದೆ ಗ್ರಾಮದ ಹೆಚ್ ವೆಂಕಟೇಶ್ ಮತ್ತು ಮಲ್ಲೇಶಪ್ಪ ಎಂಬುವರ ಹೋಲದಲ್ಲಿ ಅಪಾರ ಪ್ರಾಮಾಣದ ಬೆಳೆ ನಾಶ ಮಾಡಿದ್ದಾವೆ. ಇದರ ಬೆನ್ನಲ್ಲೆ ಇಗ ಜೆ ಕೃಷ್ಣಪ್ಪ ಇವರ ಹೋಲದಲ್ಲಿ ಕರಡಿಗಳು ದಾಳಿ ನೇಡೆಸಿದ್ದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕೂಡ್ಲಿಗಿ, ಕುಪ್ಪಿನಕೇರಿ ಪ್ರದೇಶದಲ್ಲಿನ ಅರಣ್ಯದಲ್ಲಿ ವನ್ಯಜೀವಿಗಳಿಗೆ ಯಾವುದೇ ಆಹಾರ, ನೀರು ಸಿಗದಿರುವುದರಿಂದ ಅರಣ್ಯ ಬಿಟ್ಟು ರೈತರ ಜಮೀನಿಗೆ ಬರುತ್ತವೆ. ತಡರಾತ್ರಿಯಲ್ಲಿ ಲಗ್ಗೆ ಇಟ್ಟ ಕರಡಿಗಳು ಕಾಳು ಕಟ್ಟಿದ ಅಪಾರ ಪ್ರಮಾಣದ ಮೆಕ್ಕೆಜೋಳವನ್ನು ನಾಶಪಡಿಸಿವೆ. ಈ ಮೂರು ವರ್ಷದಲ್ಲಿ ಇದೆ ವರ್ಷದಲ್ಲಿ ಉತ್ತಮ ಬೆಳೆಯ ಕನಸನ್ನು ಹೊತ್ತಿದ್ದರೈರಿಗೆ. ಇದೇ ಮೊದಲಭಾರಿಗೆ ಕಾಡು ಪ್ರಾಣಿದಾಳಿಯಿಂದ ರೈತನ ಮೋಗದಲ್ಲಿ ಆತಂಕ ಮನೆಮಾಡಿದೆ ಸಂಬಧ ಪಟ್ಟ ಇಲಾಖೆ ಅಧಿಕಾರಿಗಳು ಕಾಡು ಪ್ರಾಣಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಬಡೇಲಡಕು ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಈ ಮೂಲಕ ಮನವಿ ಮಾಡಿದ್ದಾರೆ…

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
