ವಿದ್ಯುತ್ ಅದಾಲತ್ ಕಾರ್ಯಕ್ರಮ…!!!

ವಿದ್ಯುತ್ ಅದಾಲತ್ ಕಾರ್ಯಕ್ರಮ
ಕಾನಹೊಸಹಳ್ಳಿ :- ಕೂಡ್ಲಿಗಿ ತಾಲೂಕಿನ ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆ ಜಾರಿಗೆ ತಂದಿರುವ ವಿದ್ಯುತ್ ಅದಾಲತ್ ಸಹಕಾರಿಯಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಏಕಾಂತರೆಡ್ಡಿ ಎಮ್.ಹೇಳಿದರು.
ಅವರು ಖಾನಹೋಸಹಳ್ಳಿ ಹೋಬಳಿಯಲ್ಲಿ ಬರುವ ಲೋಕಿಕೇರಿ ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ವಿದ್ಯುತ್ ಅದಾಲತ್ ಸಭೆಯಲ್ಲಿ ಮಾತನಾಡಿದರು.
ಗ್ರಾಮದ ಭಾಗಗಳಲ್ಲಿ ಹಲವಾರು ವಿದ್ಯುತ್ ಸಮಸ್ಯೆಗಳ್ನು ಸ್ವೀಕರಿಸಿ ತ್ವರೀತಗತೀಯಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಜನರ ಸಮಸ್ಯೆಗಳ ಅಳಲನ್ನು ಬೇಗನೆ ಸ್ಪಂದಿಸುವ ಗುರಿ ಜೆಸ್ಕಂ ಇಲಾಖೆ ಮಾಡುತ್ತದೆ ಎಂದರು.

ವಿದ್ಯುತ್ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಯೋಜನೆಗಳು ಜನರಿಗೆ ತ್ವರಿತವಾಗಿ ತಲುಪಬೇಕು. ಹಾಗೂ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕೆಂಬ ಉದ್ದೇಶದಿಂದ ಇಂಧನ ಇಲಾಖೆ ಅಡಿಯಲ್ಲಿ ಪ್ರತಿ ತಿಂಗಳು ಮೂರನೇ ಶನಿವಾರ ಎಲ್ಲ ಹೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಅದಾಲತ್ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿದ್ಯುತ್ ಅದಾಲತ್ ಮೂಲಕ ಗ್ರಾಮೀಣ ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಖಾಧಿಕಾರಿಗಳು ಬಿ,ಮಾರುತಿ, ಟಿ.ಮಾರಪ್ಪ, ಕಿರಿಯ ಅಭಿಯಂತರರು ಆಶ್ವಿನಿ
ಕಿರಿಯ ಅಭಿಯಂತರರು ಜೆ.ಮಂಜುನಾಥ, ಲೈನ್‌ಮ್ಯಾನಗಳಾದ ಜಿ.ಬಿ ಮಹಾಂತೇಶ, ಎಚ್.ಚನ್ನಪ್ಪ, ಎಮ್.ವೀರಣ್ಣ, ಜೆ.ಮಹೆಂದ್ರ, ಪ್ರವೀಣ ರೈತರು ಮತ್ತು ಗ್ರಾಮಸ್ಥರು ಇದ್ದರು…

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend