ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿಕ.ಕ.ರ.ಸಾ.ನಿಗಮ ಕಚೇರಿಯಲ್ಲಿ ಧ್ವಜಾರೋಹಣ
ಕಲಬುರಗಿ,: ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಕಲ್ಯಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ.ರಾಚಪ್ಪ ಅವರು ಶನಿವಾರ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ನಂತರ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಕುರಿತು ತಿಳಿಸಿದಲ್ಲದೇ ಬೀದರ ಜಿಲ್ಲೆಯ ಭಾಲ್ಕಿ ವ್ಯಾಪ್ತಿಯ ಪ್ರಯಾಣಿಕರೊಬ್ಬರು ನಿಗಮದ ಬಸ್ಸಿನಲ್ಲಿ ಬಿಟ್ಟು ಹೋದಂತಹ ಬೆಳ್ಳಿ ಆಭರಣ ಮತ್ತು ಹಣವನ್ನು ಸಂಬಂಧಿಸಿದ ಪ್ರಯಾಣಿಕರಿಗೆ ಪ್ರಮಾಣಿಕತೆಯಿಂದ ಒಪ್ಪಿಸಿದ ವಾಹನದ ಚಾಲಕ., ನಿರ್ವಾಹಕರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಿಗಮದ ಕಚೇರಿಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು..

ವರದಿ. ಬಸಯ್ಯ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
