ಸೆ 30 ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿ ಪ್ರಧಾನ, ತಜ್ಞ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ವಿತರಣಾ…!!!

ಸೆ 30 ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿ ಪ್ರಧಾನ, ತಜ್ಞ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ವಿತರಣಾ.

ಸಿಂಧನೂರು : ಸ.14. ಕರ್ನಾಟಕ ಜಾನಪದ ಅಕಾಡೆಮಿಯ 2022ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಧಾನ, ತಜ್ಞ ಪ್ರಶಸ್ತಿ ಮತ್ತು 2021ನೇ ಸಾಲಿನ ಪುಸ್ತಕ ಬಹುಮಾನ ವಿತರಣಾ ಸಮಾರಂಭವನ್ನು ಸೆಪ್ಟಂಬರ್ 30 ಶುಕ್ರವಾರ ದಂದು ಕುಷ್ಟಗಿ ರಸ್ತೆಯ ಶ್ರೀ ಕನಕದಾಸ ಸಮುದಾಯ ಭವನದಲ್ಲಿ ನೇರವೇರಲಾಗುವುದೆಂದು ಪದ್ಮಶ್ರೀ ಪುರಸ್ಕತರು ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು 1980 ರಿಂದ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಜಾನಪದ ಅಕಾಡೆಮಿಯ ಯೋಜನೆಗಳಲ್ಲಿ ಜಾನಪದ ಕಲೆಗಳಿಗೆ ತನ್ನನ್ನು ತಾನು ಅರ್ಪಿಸಿ ಕೊಂಡಿರುವ ಜಾನಪದ ಕಲಾವಿದರಿಗೆ, ಜಾನಪದ ಕ್ಷೇತ್ರ ತಜ್ಞರಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿಕೊಂಡು ಬಂದಿದೆ. 1980 ರಿಂದ 2021 ರ ಸಾಲಿನವರೆಗೆ 1063 ಜಾನಪದ ಕಲಾವಿದರು, 111 ವಿದ್ವಾಂಸರು ಸೇರಿದಂತೆ ಅಕಾಡೆಮಿಯು ಒಟ್ಟಾರೆ 1064 ಗೌರವ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ.ಜುಲೈ 25 ರಂದು ಬೆಂಗಳೂರಿನಲ್ಲಿ ನಡೆದ ಸರ್ವ ಸದಸ್ಯರ ಸಭೆಯ ತೀರ್ಮಾನದಂತೆ 2022 ನೇ ಸಾಲಿನಲ್ಲಿ ರಾಜ್ಯದ 30 ಜಿಲ್ಲೆಗಳಿಂದ 30 ಹಿರಿಯ ಜಾನಪದ ಕಲಾವಿದರಿಗೆ 25 ಸಾವಿರ ರೂಪಾಯಿ, ಹಾಗೂ ಇಬ್ಬರು ಜಾನಪದ ಕ್ಷೇತ್ರ ತಜ್ಞರಿಗೆ ವಾರ್ಷಿಕ ಗೌರವ ಪ್ರಶಸ್ತಿ ತಲಾ 50 ಸಾವಿರ ರೂಪಾಯಿಗಳ ಪ್ರಶಸ್ತಿ ಮೊತ್ತದ ಜೊತೆಗೆ ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ನೀಡಿ ಗೌರವಿಸಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ರಾಯಚೂರು ಜಿಲ್ಲೆಯ ಶಾಸಕರು ಹಾಗೂ ಗಣ್ಯಮಾನ್ಯರುಗಳು ಡೊಳ್ಳು ಕುಣಿತ, ಹಲಗಿ ಮೇಳ, ಹಗಲುವೇಷ, ವೀರಗಾಸೆ, ಬ್ಯಾಂಡ್ ಮೇಳ, ಹೆಜ್ಜೆ ಮೇಳ ಕರಡಿ ಮಜಲು, ಮಹಿಳಾ ಡೊಳ್ಳು ಕುಣಿತ, ಜಾಂಜ್ ಮೇಳ ಹಾಗೂ ಇತರೇ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸುವವರು ಎಂದು ತಿಳಿಸಿದರು.

ಸೆಪ್ಟಂಬರ್ 30ರ ಬೆಳಗ್ಗೆ 10:00 ರಿಂದ ಜಾನಪದ ಕಲಾ ತಂಡಗಳ ಮೆರವಣಿಗೆ ಮತ್ತು ಪ್ರದರ್ಶನ, ಜಾನಪದ ಗಾಯನ ಮತ್ತು ಮಧ್ಯಾಹ್ನ 3:00 ಗಂಟೆಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಜರುಗಲಿದೆ. ಈ ಸಮಾರಂಭಕ್ಕೆ ತಾಲೂಕಿನ ಜಾನಪದ ಕಲಾವಿದರು, ಕಲಾಭಿಮಾನಿಗಳು, ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಲು ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಿವನಗೌಡ ಗೋರೆಬಾಳ, ಚಂದ್ರಭೂಪಾಲ ನಾಡಗೌಡ, ವೀರಭದ್ರಪ್ಪ ಕುರುಕುಂದಿ, ಶರಣಪ್ಪ ತೆಂಗಿನಕಾಯಿ, ಹಂಸರಾಜ ಮಾಡಶಿರವಾರ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಸಂಚಾಲಕ ನಾರಾಯಣಪ್ಪ ಮಾಡಶಿರವಾರ, ನಮ್ರತಾ, ಪ್ರಕಾಶ, ಅಮರೇಶ ಹಸ್ಮಕಲ್ , ಮೌಲಪ್ಪ ಮಾಡಶಿರವಾರ ಇದ್ದರು….

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend