ಆರೋಗ್ಯ ಮೇಳ, ತಪಾಸಣೆ ಮತ್ತು ಭಾರತ ಆರೋಗ್ಯ ಕಾರ್ಡ ನೊಂದಣಿ ಅಭಿಯಾನ…!!!

ಆರೋಗ್ಯ ಮೇಳ, ತಪಾಸಣೆ ಮತ್ತು ಭಾರತ ಆರೋಗ್ಯ ಕಾರ್ಡ ನೊಂದಣಿ ಅಭಿಯಾನ.

ಸಿಂಧನೂರು : ಸ.13.ತಾಲೂಕಿನ ಗುಂಜಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯತ ಗುಂಜಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಆರೋಗ್ಯ ಮೇಳ, ಹಾಗೂ ತಪಾಸಣೆ, ಮತ್ತು ಆಯುಷ್ಮಾನ ಭಾರತ ಆರೋಗ್ಯ ಕಾರ್ಡ ನೊಂದಣಿ ಅಭಿಯಾನ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ.ಶ್ರೀದೇವಿ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ PHCO ಜಯಲಕ್ಷ್ಮಿ ಮಾತನಾಡಿ ಪ್ರತಿಯೊಬ್ಬ ಸಾರ್ವಜನಿಕರು ತಮ್ಮ ಆರೋಗ್ಯ ಸೇವೆ ಪಡೆದುಕೊಳ್ಳಲು ಆಯುಷ್ಮಾನ ಆರೋಗ್ಯ ಕಾರ್ಡ ಮಾಡಿಸಿಕೊಳ್ಳಬೇಕು.ಇದರಿಂದ ಬಡವರಿಗೆ ನಿರ್ಗತಿಕರಿಗೆ ಬಹಳ ಅನುಕೂಲವಾಗ ಲಿದೆ. ಸರ್ಕಾರ ನಿಮ್ಮ ಆರೋಗ್ಯ ದೃಷ್ಟಿಯಿಂದ ಸಹಾಯವಾಗುತ್ತದೆ ಮತ್ತು ಗರ್ಭಿಣಿಯರು, ವೃದ್ಧರು ಸೊಪ್ಪು, ಕಾಳುಗಳ ಹೆಚ್ಚು ಆಹಾರ ಸೇವಿಸಬೇಕು. ಸಮತೋಲನ ಆಹಾರ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಿ ಕೊಳ್ಳಬಹುದು ಎಂದರು.

ನಂತರ ಅಂಗನವಾಡಿ ಮೇಲ್ವಿಚಾರಕಿ ಮೋನಮ್ಮ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯವಾ ಗಿರಬೇಕು, ಶುದ್ಧವಾದ ಆಹಾರ ಸೇವಿಸಬೇಕು, ಎಂದು ಸರ್ಕಾರ ಆಯುಷ್ಮಾನ ಕಾರ್ಡು,ಬಿ.ಪಿ.ಎಲ್ ಕಾರ್ಡುದಾರರಿಗೆ ಉಚಿತ ಆರೋಗ್ಯ ನೀಡುತ್ತಿದೆ ಮತ್ತು ಗರ್ಭಿಣಿಯರಿಗೆ ಪೌಷ್ಟಿಕಾಂಶ ಆಹಾರವನ್ನು ನೀಡುತ್ತಿದೆ ಇದರ ಸದುಪಯೋಗ ಪಡೆದುಕೊಳ್ಳ ಬೇಕು ಹಾಗೂ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಂಜಳ್ಳಿ ಗ್ರಾ.ಪಂ ಅದ್ಯಕ್ಷೆ ಸುವರ್ಣ ರಮೇಶ ಅವರು ವಹಿಸಿದ್ದರು. ಗ್ರಾ.ಪಂ.ಸಿಬ್ಬಂದಿ ಯಾದ ದೇವಮ್ಮ, KHPT ಮೇಲ್ವಿಚಾರಕ ಹನುಮೇಶ ನಾಗರಬೆಂಚಿ, ಪ್ರಾ.ಆ.ಸಿಬ್ಬಂದಿಗಳಾದ ಪರಮೇಶ,ಮೋದೀನ.ಬೀ, ಪವಿತ್ರ,ಭಾಗ್ಯಮ್ಮ,ಕೆ.ಹೊಸಳ್ಳಿ ಗ್ರಾ.ಒನ್.ಕೇ. ಸಿಬ್ಬಂದಿ ಮಂಜುನಾಥ,ಹಾಗೂ ಆಶಾ ಕಾರ್ಯಕರ್ತೆ ಯರು, ಸಹಾಯಕರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend