ಬಸನಗೌಡ ಬಾದರ್ಲಿ ಮೇಲೆ ಶಿಸ್ತು ಕ್ರಮಕ್ಕೆ ಕಾರ್ಯಕರ್ತರು ಆಕ್ರೋಶ.
ಸಿಂಧನೂರು : ಸೆ.10 ನಗರದ ಅನ್ನದಾನೇಶ್ವರ ಕಲ್ಯಾಣ ಮಂಟಪದಲ್ಲಿ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ರಾಹುಲ್ ಗಾಂಧಿ ರವರ ನೇತೃತ್ವದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ 3,570 ಕಿಲೋ ಮೀಟರ್ ಕಾಂಗ್ರೆಸ್ ಪಕ್ಷ ಭಾರತ ಜೋಡೋ ಯಾತ್ರೆ ಪೂರ್ವಭಾವಿ ಸಭೆ ಯಲ್ಲಿ ವಿಜಯಸಿಂಗ ಭಾಷಣ ಮುಗಿಯುತ್ತಿದ್ದಂತೆ ತಾಲೂಕಿನಲ್ಲಿ ಯಾವುದೇ ಕಾರ್ಯಕ್ರಮ ಮಾಡಿದರು ಬ್ಲಾಕ್ ಕಾಂಗ್ರೆಸ್ ನಿಂದ ಮಾಡಲು ಹೈಕಮಾಂಡ್ ಮತ್ತು ಜಿಲ್ಲಾ ಕಾಂಗ್ರೆಸ್ ಆದೇಶಿಸಿದ್ದರು ಕೂಡ ಬಸನಗೌಡ ಬಾದರ್ಲಿ ಸ್ವಂತ ಕಾರ್ಯಕ್ರಮ ಮಾಡಿದಲ್ಲದೆ, ನನಗೆ ಟಿಕೆಟ್ ಕನ್ಪರ್ಮ ಆಗಿದೆ ಎಂದು ಸುಳ್ಳು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ.ಬಸನಗೌಡ ಬಾದರ್ಲಿ ಬಣವನ್ನು ನಿಯಂತ್ರಣಕ್ಕೆ ತರಬೇಕು, ಇಲ್ಲದಿದ್ದರೆ ಪಕ್ಷಕ್ಕೆ ಡ್ಯಾಮೇಜ್ ಆಗಲಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಹಂಪನಗೌಡ ಬಾದರ್ಲಿಗೆ ಟಕೇಟ ಕೊಡುವಂತೆ ಕಾರ್ಯಕ್ರಮಕ್ಕೆ ಬಂದಿದ್ದ ವಿಜಯಸಿಂಗ ಗೆ ಪಕ್ಷದ ಕಾರ್ಯಕರ್ತರು ಮುತ್ತಿಗೆ ಹಾಕಿ ಇದರ ಬಗ್ಗೆ ಪಕ್ಷದ ಹೈಕಮಾಂಡ ಗಮನಕ್ಕೆ ತರುವಂತೆ ಒತ್ತಡ ಹಾಕಿದರು. ಆದರೆ ಬಸನಗೌಡ ಬಾದರ್ಲಿ ನೇತೃತ್ವದ ಭಾರತ ಜೋಡೊ ಪೂರ್ವಭಾವಿ ಕಾರ್ಯಕ್ರಮಕ್ಕೆ ವಿಜಯಸಿಂಗ ಹೋಗಬಾರದೆಂದು ಕಾರ್ಯಕರ್ತರು
ಒತ್ತಡ ಹಾಕಿದರು. ಇದರಿಂದ ಸ್ವಲ್ಪ ಸಮಯ ವಿಜಯಸಿಂಗ ವಿಚಲಿತರಾದಂತೆ ಕಂಡು ಬಂದರು. ಬ್ಲಾಕ್ ಕಾಂಗ್ರೆಸ್ ಕಾರ್ಯಕ್ರಮ ಬಿಟ್ಟು ಯಾವುದೇ ಕಾರ್ಯಕ್ರಮದಲ್ಲಿ ಭಾಗವಸಿಸುವುದಿಲ್ಲ ಎಂದು ವಿಜಯಸಿಂಗ ತಿಳಿಸಿದರು. ಒಂದೇ ದಿನ ಕಾಂಗ್ರೆಸ್ ಪಕ್ಷದಿಂದ ಭಾರತ ಜೋಡೊ ಯಾತ್ರೆ ನಡೆದಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಮಧ್ಯ ಪ್ರವೇಶಿಸಿದ ಹಂಪನಗೌಡ ಬಾದರ್ಲಿ ತಾಲ್ಲೂಕಿನಲ್ಲಿ ಇರುವುದು ಒಂದೇ ಕಾಂಗ್ರೆಸ್ ಪಕ್ಷ ಇನ್ನೊಂದು ಇಲ್ಲಾ, ಇದನ್ನು ಪಕ್ಷದ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಮುಂದಿನ ವಿಧಾನಸಭೆ ಯ ಚುನಾವಣೆಯಲ್ಲಿ ಯಾರು ಪಕ್ಷದ ಅಭ್ಯರ್ಥಿ ಎನ್ನುವ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಆದ್ದರಿಂದ ಯಾರು ಗಲಾಟೆ ಮಾಡಬೇಡಿ ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಸಂಕಲ್ಪ ಮಾಡಿ ಎಂದು ಹಂಪನಗೌಡ ಬಾದರ್ಲಿ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು..
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
