;

ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆ…!!!

ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆ.

ಸಿಂಧನೂರು : ಸ.10.ರಾಹುಲ್ ಗಾಂಧಿ ರವರ ನೇತೃತ್ವದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ 3,570 ಕಿಲೋ ಮೀಟರ್ ಕಾಂಗ್ರೆಸ್‌ ಪಕ್ಷ ಭಾರತ ಜೋಡೋ ಯಾತ್ರೆ ಹಮ್ಮಿಕೊಂಡಿದ್ದು, ಅಕ್ಟೋಬರ್ 21 ಕ್ಕೆ ರಾಯಚೂರಿಗೆ ರಾಹುಲ್ ಗಾಂಧಿ ಆಗಮಿಸ ಲಿದ್ದು,‌ ಈ ಕಾರ್ಯಕ್ರಮಕ್ಕೆ ತಾಲೂಕಿನಿಂದ 10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅವರ ಕೈ ಬಲಪಡಿಸಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಕಾರ್ಯಕರ್ತ ರಿಗೆ ಕರೆ ನೀಡಿದರು.

ಇಂದು ನಗರದ ಗಣೇಶ್ ದೇವಸ್ಥಾನದಿಂದ ಕೋಟೆ ಈರಣ್ಣ ಕಲ್ಯಾಣ ಮಂಟಪದ ವರೆಗೆ ಬೈಕ್ ರ್ಯಾಲಿ ಯನ್ನು ಮಾಡಿ ನಂತರ ಭಾರತ ಜೋಡೋ ಯಾತ್ರೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಭಾರತದ ಇತಿಹಾಸದಲ್ಲಿ ಯುವಕ ರಾಹುಲ್ ಗಾಂಧಿ 3570 ಕೀ.ಮೀ ಕಾಶ್ಮೀರ ದಿಂದ ಕನ್ಯಾಕುಮಾರಿ ವರೆಗೆ ಪಾದಯಾತ್ರೆ ಮಾಡಿದ್ದು ಇದೇ ಮೊದಲು. ಬಡವರಿಗೆ, ಕೂಲಿ ಕಾರ್ಮಿಕರಿಗೆ , ಮಹಿಳೆಯರಿಗೆ , ಯುವಕರಿಗೆ ಒಳ್ಳೆಯದಾಗಲಿ ಎನ್ನುವ ಉದ್ದೇಶ ದಿಂದ ಈ ಯಾತ್ರೆ ಕೈಗೊಳ್ಳಲಾಗಿದೆ. ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ 40% ಪರ್ಷೆಂಟೇಜ್ ಕಮೀಷನ್ ತೆಗೆದುಕೊಂಡು ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಂತಹ ಸರ್ಕಾರವನ್ನು ಆದಷ್ಟು ಬೇಗ ಕಿತ್ತು ಹಾಕಿ ಜನಪರ ಆಡಳಿತ ನೀಡುವ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ರಾಹುಲ್ ಗಾಂಧಿ ಯನ್ನು ಪ್ರಧಾನಿ ಮಾಡೋಣ ಎಂದರು.

ನಾವೂ ಮಾಡುವ ಜನಪರ ಕಾಳಜಿಯನ್ನು ಸಹಿಸದ ಕೆಲವರು 27 ಕೇಸುಗಳು ನನ್ನ ಮೇಲೆ ಇವೆ, ಪಕ್ಷದ ಕಾರ್ಯಕರ್ತರ ಮೇಲೆ ಬೆದರಿಕೆ ಕರೆಗಳು ಬರುತ್ತಿವೆ. ಇದಕ್ಕೆಲ್ಲ ಭಯಪಡುವ ಅಗತ್ಯವಿಲ್ಲ ನಿಮ್ಮ ಜೊತೆಗೆ ನಾವೇದ್ದೇವೆ ಎಂದು ಕಾರ್ಯಕರ್ತರಿಗೆ ದೈರ್ಯ ತುಂಬಿದರು. ಕ್ಷೇತ್ರದಲ್ಲಿ ಮಳೆಯಿಂದಾಗಿ ಮನೆಗಳು ಬಿದ್ದು, ಜನ ಜಾನುವಾರುಗಳು ಸತ್ತು ರೈತರು ಬೀದಿಗೆ ಬದ್ದಿದ್ದಾರೆ‌‌‌‌. ಆದರೆ ಶಾಸಕ ವೆಂಕಟರಾವ್ ನಾಡಗೌಡರು ವಿದೇಶಿ ಪ್ರವಾಸದಲ್ಲಿ ಮೋಜುಮಸ್ತಿ ಮಾಡುತ್ತಿದ್ದಾರೆ ಎಂದರು. ಇದೇ ವೇಳೆಯಲ್ಲಿ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುಮಾರಿ ಸತ್ಯಮ್ಮ ಗಿಣಿವಾರ, ಅತ್ಯುತ್ತಮ ಶಿಕ್ಷಕ ಗೌರವ ಪಡೆದ ಬಸವರಾಜ್ ಜಾಡರ ಇವರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆರ್.ಡಿ.ಸಿ.ಸಿ ನಿರ್ದೇಶಕರಾದ ಸೋಮನಗೌಡ ಬಾದರ್ಲಿ, ಕೆಪಿಸಿಸಿ ಎಸ್. ಟಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾಗಲಪರ್ವಿ, ವೆಂಕನಗೌಡ ಗಿಣಿವಾರ, ಶರಣಯ್ಯ ಕೋಟೆ , ಶಿವಕುಮಾರ್ ಜವಳಿ, ಮೂಕಪ್ಪ ವೆಂಕಟೇಶ್ವರ ಕ್ಯಾಂಪ್,ಯೂನೂಷ ಪಾಷಾ ದಡೆಸುಗೂರು, ಖಾಜಾ ಹುಸೇನ್ ರೌಡಕುಂದ, ವೀರರಾಜು ಬೂದಿಹಾಳ ಕ್ಯಾಂಪ್, ಇಂದುಮತಿ, ಹಂಪಮ್ಮ, ಅನ್ನಪೂರ್ಣಮ್ಮ, ಆಯುಷ್ ಬೇಗಮ್ ಹಾಗೂ ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;