ವಿದ್ಯುತ್ ಗುತ್ತಿಗೆದಾರರ ಸಂಘದ ಶತಮಾನೋತ್ಸವ: ಸೆ.10 ರಂದು ರಕ್ತದಾನ ಶಿಬಿರ
ಕಲಬುರಗಿ,ಸೆ.: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೆಪ್ಟೆಂಬರ್ 11ರಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಶತಮಾನೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಗುವುದು. ಆ ಹಿನ್ನೆಲೆಯಲ್ಲಿ ಸಂಘದ ಕಚೇರಿಯಲ್ಲಿ ಸೆಪ್ಟೆಂಬರ್ 10ರಂದು ರಕ್ತದಾನ ಶಿಬಿರ ಎಂದು ಪ್ರಚಾರ ಸಮಿತಿಯ ಅಧ್ಯಕ್ಷ ಶರಣಬಸವರಾಜ್ ಉಪ್ಪಿನ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಸ್ವಾತಂತ್ರ್ಯ ಪೂರ್ವ 1922ರಲ್ಲಿ ಮೇಜರ್ ಆಂಡ್ರ್ಯೂಸ್ ಅವರ ಮೂಲಕ ಸ್ಥಾಪಿತವಾಗಿ ನೂರು ವರ್ಷಗಳು ಸಂದಿವೆ. ಆ ಹಿನ್ನೆಲೆಯಲ್ಲಿ ಶತಮಾನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.
ಉದ್ಘಾಟನೆಯನ್ನು ರಾಜ್ಯದ ಇಂಧನ ಸಚಿವ ವಿ. ಸುನೀಲಕುಮಾರ್ ಅವರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಡಾ. ಉಮೇಶ್ ಜಾಧವ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆದ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್, ಶಾಸಕಿ ಶ್ರೀಮತಿ ಕನೀಜ್ ಫಾತಿಮಾ, ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ. ನಮೋಶಿ, ಬಿ.ಜಿ. ಪಾಟೀಲ್, ಕ್ರೆಡಲ್ ಅಧ್ಯಕ್ಷ ಚಂದ್ರಕಾಂತ್ ಬಿ. ಪಾಟೀಲ್, ಹೈದ್ರಾಬಾದ್ ಕರ್ನಾಟಕ ಕೈಗಾರಿಕೆ ಮತ್ತು ವಾಣಿಜ್ಯ ಮಂಡಳಿಯ ಅಧ್ಯಕ್ಷ ಪ್ರಶಾಂತ್ ಮಾನಕರ್, ವಿಜಯಕುಮಾರ್ ಗುಡ್ಡದ್, ಲಯನ್ ಜಿ. ರುದ್ರೇಶ್ ಅವರು ಆಗಮಿಸುವರು ಎಂದು ಅವರು ಹೇಳಿದರು.
ಅತಿಥಿಗಳಾಗಿ ರಾಹುಲ್ ತುಕಾರಾಮ್ ಪಾಂಡ್ವೆ, ಸೋಮಶೇಖರ್ ಬಿ.ಆರ್., ಆರ್. ವೆಂಕಟೇಶಪ್ರಸಾದ್, ಆನಂದ್, ಆರ್.ಡಿ. ಚಂದ್ರಶೇಖರ್, ಸಿದ್ದಪ್ಪ ಬೆಂಜಗೇರಿ, ಕೆ. ಪದ್ಮನಾಭ್, ಶಿವಕುಮಾರ್ ಹಿರೇಮಣಿ, ವೀರಭದ್ರ ಸಾಲಿಮನಿ, ಸಂತೋಷ್ ಚವ್ಹಾಣ್, ಮುರುಗೇಶ್ ಮಠಪತಿ, ಬಿ.ಆರ್. ಬುದ್ಧಾ, ಬಾಬು ಕೋರೆ ಮುಂತಾದವರು ಆಗಮಿಸುವರು. ಕಾರ್ಯಕ್ರಮದ ನಿಮಿತ್ಯ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಅವರು ತಿಳಿಸಿದರು. ಈಗಾಗಲೇ ಸ್ವಾಗತ ಸಮಿತಿಯನ್ನು ಈರಣ್ಣ ಗೋಳಾ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನೂ ಸಹ ಸೆಪ್ಟೆಂಬರ್ 10ರಂದು ಸಂಘದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಸಲಿಂಗಪ್ಪಾ ದ್ಯಾಮಾ, ಮುಬಿನ್ ಅಹ್ಮದ್, ರಫಿಕ್ ಅಹ್ಮದ್, ಕುಪೇಂದ್ರ ಶಿವನಾಯಕ್, ನಾಗರಾಜ್ ಕಿಣಗಿ, ಧರ್ಮರಾಜ್ ಒಡೆಯರ್ ಮುಂತಾದವರು ಉಪಸ್ಥಿತರಿದ್ದರು…

ವರದಿ.ಬಸಯ್ಯ ಹಿರೇಮಠ್, ಕಲಬುರ್ಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
