;

ಗಡ್ಡದ ಬೋರಯ್ಯನಹಟ್ಟಿ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರ ಸಿ.ಐ.ಟಿ.ಯು ಗ್ರಾಮ ಘಟಕ ಉದ್ಘಾಟನೆ.

ಗಡ್ಡದ ಬೋರಯ್ಯನಹಟ್ಟಿ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರ ಸಿ.ಐ.ಟಿ.ಯು ಗ್ರಾಮ ಘಟಕ ಉದ್ಘಾಟನೆ.

ಕೂಡ್ಲಿಗಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಡ್ಡದ ಬೋರಯ್ಯನಹಟ್ಟಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಸಿಐಟಿಯು ಗ್ರಾಮ ಘಟಕವನ್ನು ಕೂಡ್ಲಿಗಿ ಸಿ.ಐ.ಟಿ.ಯು ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ಹಾಗೂ ಕಟ್ಟಡ ಕಾರ್ಮಿಕರ ಮುಖಂಡರಾದ ಸಿ ವಿರೂಪಾಕ್ಷಪ್ಪ ವಕೀಲರು ಇವರ ಸಮ್ಮುಖದಲ್ಲಿ ಗ್ರಾಮ ಘಟಕ ನಾಮಫಲಕ ಉದ್ಘಾಟಿಸಿದರು. ತದನಂತರ ಸಂಘಟನೆಯ ಕುರಿತಾಗಿ ಸಂಘದ ನಿಯಮಗಳನ್ನು ಹಾಗೂ ಕಟ್ಟಡ ಕಾರ್ಮಿಕರಿಗೆ ಇರುವಂತ ಸೌಲಭ್ಯಗಳ ಕುರಿತು ಸರ್ಕಾರದ ಸವಲತ್ತುಗಳನ್ನು ಎಲ್ಲಾ ಕಾರ್ಮಿಕರಿಗೆ ತಿಳಿಸಿದ್ದರು. ಈ ಸಂದರ್ಭದಲ್ಲಿ ಸಿ.ಐ.ಟಿ.ಯು ಸಂಘಟನೆಯಿಂದ ಗಡ್ಡದ ಬೋರಯ್ಯನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತವಾಗಿ ನೋಟ್ ಪುಸ್ತಕ, ಪೇನ್ ವಿತರಿಸಲಾಯಿತು. ವಕೀಲರಾದ ಸಿ.ವಿರೂಕ್ಷಪ್ಪ ಇವರು ನೇರೆದಿದ್ದಂತ ಕಾರ್ಮಿಕರಿಗೆ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಜಾರಿತಂದಿದೆ. ಅವುಗಳನ್ನು ಸಮರ್ಪಕವಾಗಿ ಹೊಂದಬೇಕೆಂದರೆ ಹೋರಾಟ ಅನಿವಾರ್ಯವಾಗಿದ್ದು, ಕಾರ್ಮಿಕರು ಸಂಘಟಿತರಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ತಾಲೂಕು ಅಧ್ಯಕ್ಷರಾದ ಎಂ.ಬಿ ಅಯ್ಯನಳ್ಳಿ ಕರಿಯಪ್ಪ, ಮರಳು ಸಿದ್ದಪ್ಪಾಚಾರಿ, ಅಯ್ಯನಳ್ಳಿ ತಿಪ್ಪೇಸ್ವಾಮಿ ಬಿ. ಸುರೇಶ್, ಹುಲೆಪ್ಪ, ಕೊಟ್ರೇಶ್, ಚಿರತಗೊಂಡು ಬಸವರಾಜ, ಓಂಕಾರಿ, ಬೋರಣ್ಣ, ಬಾಲಚಂದ್ರ ಸಿದ್ದಪ್ಪ, ಬಸವರಾಜ್ ಸೇರಿದಂತೆ ಕಟ್ಟಡ ಕಾರ್ಮಿಕರು, ಮಹಿಳೆಯರು ಭಾಗವಹಿಸಿದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;